ETV Bharat / state

ಸ್ವಲ್ಪದರಲ್ಲೇ ತಪ್ಪಿದ ಭಾರಿ ದುರಂತ: 12 ಕಾರ್ಮಿಕರ ರಕ್ಷಣೆ

ಬೆಂಗಳೂರಿನ ಹೆಗಡೆ ನಗರದಲ್ಲಿರುವ ಶ್ರೀರಂಗ ಫರ್ನೀಚರ್ ಗೋದಾಮಿಗೆ ಬೆಂಕಿ ತಗುಲಿದ್ದು, ಗೋದಾಮಿನಲ್ಲಿದ್ದ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

author img

By

Published : Feb 14, 2020, 9:29 AM IST

Updated : Feb 14, 2020, 11:52 AM IST

Fire in Sri Ranga Furniture store
ಸ್ವಲ್ಪದರಲ್ಲೆ ತಪ್ಪಿದ ಭಾರಿ ದುರಂತ: 12ಮಂದಿ ಕಾರ್ಮಿಕರ ರಕ್ಷಣೆ

ಬೆಂಗಳೂರು: ಶ್ರೀರಂಗ ಫರ್ನೀಚರ್ ತುಂಬಿದ್ದ ಗೋದಾಮು ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ನಡೆದಿದೆ.

ನೋಡ ನೋಡುತ್ತಲೇ ಗೋದಾಮು ಸುತ್ತ ಆವರಿಸಿದ ಬೆಂಕಿ ಹೊತ್ತಿ ಉರಿದಿದೆ. ಕೆಲಸಗಾರರು ಕೆಲಸ ಮುಗಿಸಿ 12 ಮಂದಿ ‌ಗೋದಾಮಿನ ಒಳಗೆ ಮಲಗಿದ್ದರು. ಅದೃಷ್ಟವಶಾತ್​ ಒಬ್ಬ ಕಾರ್ಮಿಕನ ಮುನ್ನೆಚ್ಚರಿಕೆಯಿಂದ ಪ್ರಾಣಹಾನಿ ಸಂಭವಿಸಿಲ್ಲ.

ರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕ ಹೊರ ಬಂದಿದ್ದಾನೆ. ತಕ್ಷಣ ಎಲ್ಲರನ್ನೂ ಎಬ್ಬಿಸಿ ಹೊರ ಬಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಾಲೀಕನಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ 8 ಅಗ್ನಿಶಾಮಕ ದಳದ ಸಿಬ್ಬಂದಿ‌ ಬೆಂಕಿ ನಂದಿಸಲು ಹರಸಾಹಸ ಪಟ್ಟು ಕೊನೆಗೆ ಮುಂಜಾನೆ ನಾಲ್ಕರವರೆಗೆ ಬೆಂಕಿ ನಂದಿಸಿದ್ದಾರೆ.

ಈ ಕುರಿತಂತೆ ಎಲ್ಲರನ್ನೂ ರಕ್ಷಣೆ ಮಾಡಿದ ಕಾರ್ಮಿಕ ಫರಾನ್ ಮಾಹಿತಿ ಹಂಚಿಕೊಂಡಿದ್ದು, ರಾತ್ರಿ ಗೋದಾಮಿನ ಒಳಗೆ ಮಲಗಿದ್ದೆವು. 2 ಗಂಟೆ ಸುಮಾರಿಗೆ ಕಸಕ್ಕೆ ಬೆಂಕಿ ತಗುಲಿದೆ. ಆಗ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದೆವು. ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ ನನಗೆ ಎಚ್ಚರಿಕೆ ಆಯ್ತು, ಇಲ್ಲದಿದ್ದರೆ 12 ಮಂದಿ ಜೀವಂತವಾಗಿ ದಹನವಾಗುತ್ತಿದ್ದೆವು. ಗೋದಾಮಿನ ಖಾಲಿ ಜಾಗದಲ್ಲಿ ಹುಡುಗರು ಗಾಂಜಾ, ಸಿಗರೇಟ್ ಸೇದುತ್ತಾರೆ. ಇದರಿಂದಲೇ ಬೆಂಕಿ ಬಿದ್ದಿರೋ ಸಾಧ್ಯತೆ ಇದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು ಸುಟ್ಟು ಹೋಗಿವೆ ಎಂದು ಮಾಹಿತಿ ನೀಡಿದ್ದಾರೆ.

ಗೋದಾಮಿಗೆ ಬೆಂಕಿ ಬಿದ್ದ ವಿಚಾರ ತಿಳಿದು ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Feb 14, 2020, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.