ಬೆಂಗಳೂರು: ಲೇಔಟ್ ನಿವೇಶನ ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ ಮಾಡಿರುವ ಆರೋಪದಡಿ ಎಂಎಲ್‌ಸಿ ಆರ್.ಶಂಕರ್ ಅವರ ಪುತ್ರ ಮತ್ತು ಪತ್ನಿಯ ಹೆಸರು ಕೇಳಿ ಬಂದಿರುವ ಹಿನ್ನೆಲೆ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಲಕ್ಷ್ಮಿ ಹಾಗೂ ಅವರ ಪುತ್ರ ಜ್ಯೋತಿರ್ ತೇಜೋಮಯಿ, ಹಾಗೂ ರಾಜಣ್ಣ ಎಂಬ ಇನ್ನೊರ್ವ ವ್ಯಕ್ತಿಯ ವಿರುದ್ಧ ಪ್ರಭಾವತಿ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ 23 ಸೈಟ್‌ಗಳನ್ನು ಮಾರಾಟ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಕಂಪನಿಯ ಪಾಲುದಾರರಾದ ಪ್ರಭಾವತಿ ಎಂಬುವರು ಆರೋಪಿಸಿ ಇಂದಿರಾನಗರ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆರ್.ಶಂಕರ್ ಹಾಗೂ ಅವರ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದರು. ಬಳಿಕ ಕಂಪನಿ ಹೆಸರಿನಲ್ಲಿ ಬಿದರಹಳ್ಳಿಯ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಾಣ ಮಾಡಿದ್ದರು. ನಿರ್ಮಾಣದ ಸಮಯದಲ್ಲಿ ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯ ಎಂಬ ಒಪ್ಪಂದಕ್ಕೆ ನಾಲ್ವರು ಪಾಲುದಾರರ ನಡುವೆ ಒಪ್ಪಂದ ಆಗಿತ್ತು. ಆದರೆ, ಇದೀಗ ಪ್ರಭಾವತಿ ಅವರನ್ನು ಬಿಟ್ಟು ಇನ್ನುಳಿದ ಮೂವರು ಸೈಟ್ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಅಕ್ರಮವಾಗಿ ಬ್ಯಾಂಕ್‌ನಲ್ಲಿ ಖಾತೆ ತೆಗೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಪ್ರಭಾವತಿ ಉಲ್ಲೇಖಿಸಿದ್ದು ಸದ್ಯ ಮೂವರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಐತಿಹಾಸಿಕ ಕೆರೆಯ ರಾಜಕಾಲುವೆ ಒತ್ತುವರಿ; ತೆರವು ವೇಳೆ ಜನರಿಂದ ಹೈಡ್ರಾಮ