ETV Bharat / state

ಮಳೆ, ಲಾಕ್​ಡೌನ್​ನಿಂದ ಬೆಲೆ ಕುಸಿತ: ರಾಶಿ ರಾಶಿ ಟೊಮ್ಯಾಟೋವನ್ನು ಕಸಕ್ಕೆಸೆದ ರೈತ

ದೊಡ್ಡಬಳ್ಳಾಪುರ ತಾಲೂಕಿನ ಗಡಿ ಭಾಗದ ಗ್ರಾಮ ಗಿಂಗಿರ್ಲಹಳ್ಳಿಯಲ್ಲಿ ರೈತನೋರ್ವ ಟೊಮ್ಯಾಟೋ ಬೆಳೆ ಬೆಳೆದಿದ್ದನು. ಆದರೆ ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಲಾಕ್​ಡೌನ್​ ಪರಿಣಾಮದಿಂದಾಗಿ ಬೆಲೆ ಕುಸಿತವಾಗಿದೆ.

author img

By

Published : Jul 16, 2021, 10:41 PM IST

ರಾಶಿ ರಾಶಿ ಟೊಮ್ಯಾಟೋವನ್ನು ಕಸಕ್ಕೆ ಸುರಿದ ರೈತ
Farmer dumped tomato on garbage in Doddaballapur

ದೊಡ್ಡಬಳ್ಳಾಪುರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ಲಾಕ್​ಡೌನ್​ ಎಫೆಕ್ಟ್​ನಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕುಸಿದಿದೆ. ಇದರಿಂದ ಕಂಗಾಲಾದ ರೈತನೋರ್ವ ಟೊಮ್ಯಾಟೋವನ್ನು ಕಸಕ್ಕೆ ಸುರಿದಿರುವ ಘಟನೆ ನಡೆದಿದೆ.

ನೋವು ತೋಡಿಕೊಂಡ ರೈತ

ತಾಲೂಕಿನ ಗಡಿ ಭಾಗದ ಗ್ರಾಮ ಗಿಂಗಿರ್ಲಹಳ್ಳಿಯ ರೈತ ಗೋವಿಂದರಾಜು ಎಂಬಾತ ತಮ್ಮ 3 ಎಕರೆ ಜಾಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಲಾಕ್​ಡೌನ್​ ಪರಿಣಾಮ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಇಳಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿನ ಟೊಮ್ಯಾಟೋ ಬೇರೆ ಕಡೆ ಹೋಗುತ್ತಿಲ್ಲ. ಪರಿಣಾಮ ಪ್ರತಿ ಬಾಕ್ಸ್​ ಟೊಮ್ಯಾಟೋ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗೆ ಹಾಕಿದ ಹಣ ಸಹ ರೈತ ಗೋವಿಂದ್​ ರಾಜುಗೆ ಸಿಕ್ಕಲ್ಲ. ಇದರಿಂದ ಬೇಸರಗೊಂಡು ಬೆಳೆದಿದ್ದ ಬೆಳೆಯನ್ನು ಕಸಕ್ಕೆ ಹಾಕಿದ್ದಾನೆ.

ಕಷ್ಟಪಟ್ಟು ಬೆಳೆದ ಟೊಮ್ಯಾಟೋ ಬೆಳೆ

ರೈತ ಟೊಮ್ಯಾಟೋ ಬೆಳೆಯಲು ಸುಮಾರು 4.5 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದು, ಮಲ್ಚಿಂಗ್ ಪೇಪರ್, ಕ್ರಿಮಿನಾಶಕ, ರಸಗೊಬ್ಬರ ಮತ್ತು ಕೂಲಿ ಕಾರ್ಮಿಕರ ಕೆಲಸಕ್ಕೆ ಹಣ ಖರ್ಚು ಮಾಡಿದ್ದಾನೆ. ಆದರೆ ಬೆಲೆ ಕುಸಿತದಿಂದ ಬೆಳೆಗೆ ಹಾಕಿದ ಬಂಡವಾಳ ಸಹ ಸಿಗುತ್ತಿಲ್ಲ. ಪ್ರತಿದಿನ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ 250 ಕ್ರೇಟ್​​​ ಟೊಮ್ಯಾಟೋ ಹಾಕುತ್ತಾರೆ. ಬೆಲೆ ಇಲ್ಲದಿರುವುದರಿಂದ ದಿನ 50 ಕ್ರೇಟ್ ಮಾರಾಟವಾಗುವುದಿಲ್ಲ. ಉಳಿದ ಟೊಮ್ಯಾಟೋವನ್ನು ಮರಳಿ ತರಲಾಗದೆ ರಸ್ತೆಯಲ್ಲೇ ಸುರಿದು ಬರುತ್ತಿರುವುದಾಗಿ ರೈತ ತಮ್ಮ ನೋವನ್ನು ತೋಡಿಕೊಂಡರು.

ಇದನ್ನೂ ಓದಿ: ಜಮೀನಿನಲ್ಲಿ ಸ್ಫೋಟಕ ವಸ್ತು ಪತ್ತೆ : ಸುಮಲತಾ ಭೇಟಿಗೆ ಹೆದರಿದರಾ ಗಣಿ ಮಾಲೀಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.