ETV Bharat / state

ಬೆಂಗಳೂರು ಸ್ಟ್ರೀಟ್ ಫುಡ್​ಗೆ ಮನಸೋತ ವಿದೇಶಾಂಗ ಸಚಿವ ಎಸ್‌.ಜೈಶಂಕರ್ - Bengaluru Street Food

ಬೆಂಗಳೂರಿನ ವಿವಿ ಪುರಂನಲ್ಲಿ ತಿನಿಸುಗಳ ಮಳಿಗೆಗಳ ವರ್ತಕರಿಗೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ರಾಷ್ಟ್ರಧ್ವಜ ನೀಡಿದರು.

external-affairs-minister-jaishankar-tasted-the-street-food-in-bengaluru
ಬೆಂಗಳೂರು ಸ್ಟ್ರೀಟ್ ಫುಡ್​ಗೆ ಮನಸೋತ ವಿದೇಶಾಂಗ ಸಚಿವ ಜೈಶಂಕರ್
author img

By

Published : Aug 12, 2022, 10:51 PM IST

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ನಗರದ ವಿವಿ ಪುರಂನ ಸ್ಟ್ರೀಟ್ ಫುಡ್ ರೌಂಡ್ ಹಾಕಿ, ಬಗೆ ಬಗೆಯ ತಿನಿಸುಗಳ ರುಚಿ ಸವಿದರು.

ಸಜ್ಜನ್ ರಾವ್ ಸರ್ಕಲ್ ಸಮೀಪದ ವಿವಿ ಪುರಂನ ಸ್ಟ್ರೀಟ್​ ಫುಡ್​ಗೆ ಶುಕ್ರವಾರ ರಾತ್ರಿ ಸಚಿವ ಜೈಶಂಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವರ್ತಕರ ಜೊತೆ ಮಾತುಕತೆ ನಡೆಸುತ್ತಾ ಪಾನಿಪುರಿ ಸೇರಿದಂತೆ ವಿವಿಧ ಬಗೆಯ ತಿಂಡಿ ಸೇವಿಸಿದರು. ಇಲ್ಲಿನ ತಿನಿಸುಗಳ ರುಚಿಗೆ ಮನಸೋತ ವಿದೇಶಾಂಗ ಸಚಿವರು ರುಚಿಕರ ಆಹಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಜ್ಯೂಸ್​ನೊಂದಿಗೆ ಸ್ಟ್ರೀಟ್ ಫುಡ್ ರೌಂಡ್ ಮುಗಿಸಿದರು.

ಬೆಂಗಳೂರು ಸ್ಟ್ರೀಟ್ ಫುಡ್​ಗೆ ಮನಸೋತ ವಿದೇಶಾಂಗ ಸಚಿವ ಎಸ್‌.ಜೈಶಂಕರ್

ಇದೇ ವೇಳೆ ತಿನಿಸುಗಳ ಮಳಿಗೆಗಳ ವರ್ತಕರಿಗೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಷ್ಟ್ರಧ್ವಜ ನೀಡಿದರು. ತಿರಂಗ ಹಾರಿಸಿ ಅಭಿಯಾನಕ್ಕೆ ಸಹಕಾರ ನೀಡುವಂತೆಯೂ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ ಅಭಿಯಾನದಿಂದ ಇಡೀ ದೇಶವೇ ಒಂದಾಗಿದೆ. ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಬೇಕೆಂದು ಇಡೀ ದೇಶ ಹೇಳುತ್ತಿದೆ. ನಾನಿರುವ ಜಾಗದಿಂದಲೇ ತ್ರಿವರ್ಣ ಧ್ವಜ ಹಾರಿಸುತ್ತೇನೆ ಎಂದು ಹೇಳಿದರು.

ನಾಳೆಯಿಂದ ಮೂರು ದಿನಗಳ ಕಾಲ ದೇಶದ ಎಲ್ಲ ಭಾಗದಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಪ್ರತಿ ಮನೆ ಹಾಗೂ ಪ್ರತಿಯೊಬ್ಬರ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಟ ರಾಷ್ಟ್ರೀಯತೆಯ ಸಂಕೇತವಾಗಿದೆ ಎಂದರು.

ಪ್ರಧಾನಿ ಮೋದಿ ಟೂರಿಸಂ ಬೆಂಬಲಿಸಲು ಹೇಳಿದ್ದಾರೆ. ಟೂರಿಸಂ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ನಾನು ಮತ್ತೊಮ್ಮೆ ಈ ಭಾಗಕ್ಕೆ ಬರಲು ಇಷ್ಟಪಡುತ್ತೇನೆ. ವಿವಿ ಪುರಂ ಫುಡ್ ಸ್ಟ್ರೀಟ್ ಭೇಟಿ ನನಗೆ ಒಳ್ಳೆಯ ಅನುಭವ ತಂದು ಕೊಟ್ಟಿದೆ. ಈ ಭಾಗದ ಆಹಾರ ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಬಗ್ಗೆ ಸರ್ಕಾರದ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.