ಬೆಂಗಳೂರು: ಬಿಜೆಪಿಯು ಇಡೀ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ಅವರು, ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮುಗ್ದ ರೈತರ ಮೇಲೆ ಕೇಂದ್ರ ಸಚಿವರ ಕಾರನ್ನು ಹತ್ತಿಸಿರುವುದು ದುರದೃಷ್ಟಕರ ವಿಚಾರ. ಈ ದಾಳಿಯನ್ನು ನಾನು ಖಂಡಿಸುತ್ತೇನೆ. ಬಿಜೆಪಿ ಮತ್ತು ಅದರ ರಾಜ್ಯ ಘಟಕ ಇಡೀ ದೇಶವನ್ನು ಗೂಂಡಾ ರಾಜ್ ಆಗಿ ಮಾಡಿದೆ. ಅವರ ತಪ್ಪುಗಳನ್ನು ಪ್ರಶ್ನಿಸುವ ಅವಕಾಶ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
-
ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ@BJP4India
— Siddaramaiah (@siddaramaiah) October 4, 2021 " class="align-text-top noRightClick twitterSection" data="
ತನ್ನ ತಾಲಿಬಾನಿ ಮನಸ್ಥಿತಿಯನ್ನು
ಬತ್ತಲು ಮಾಡಿಕೊಳ್ಳುತ್ತಿದೆ.
ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ @priyankagandhi ಅವರನ್ನು ಬಂಧಿಸಿರುವ @myogiadityanath ಸರ್ಕಾರದ ಕೃತ್ಯ ಖಂಡನೀಯ.
3/3#FarmersProtest pic.twitter.com/kuHku7YVUr
">ಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ@BJP4India
— Siddaramaiah (@siddaramaiah) October 4, 2021
ತನ್ನ ತಾಲಿಬಾನಿ ಮನಸ್ಥಿತಿಯನ್ನು
ಬತ್ತಲು ಮಾಡಿಕೊಳ್ಳುತ್ತಿದೆ.
ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ @priyankagandhi ಅವರನ್ನು ಬಂಧಿಸಿರುವ @myogiadityanath ಸರ್ಕಾರದ ಕೃತ್ಯ ಖಂಡನೀಯ.
3/3#FarmersProtest pic.twitter.com/kuHku7YVUrಪ್ರತಿರೋಧ- ಭಿನ್ನಾಭಿಪ್ರಾಯವನ್ನು ಸಹಿಸದ@BJP4India
— Siddaramaiah (@siddaramaiah) October 4, 2021
ತನ್ನ ತಾಲಿಬಾನಿ ಮನಸ್ಥಿತಿಯನ್ನು
ಬತ್ತಲು ಮಾಡಿಕೊಳ್ಳುತ್ತಿದೆ.
ರೈತರ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟ ಕಾಂಗ್ರೆಸ್ ನಾಯಕಿ @priyankagandhi ಅವರನ್ನು ಬಂಧಿಸಿರುವ @myogiadityanath ಸರ್ಕಾರದ ಕೃತ್ಯ ಖಂಡನೀಯ.
3/3#FarmersProtest pic.twitter.com/kuHku7YVUr
ಇದನ್ನೂ ಓದಿ: ಉತ್ತರ ಪ್ರದೇಶ ಹಿಂಸಾಚಾರ: ಗಲಭೆಯಲ್ಲಿ 8 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ
ಪ್ರಧಾನಿ ನರೇಂದ್ರ ಮೋದಿಯ ನಿರಂಕುಶ ವಾದವನ್ನು ಪ್ರಶ್ನಿಸುವುದು ತಪ್ಪಾ?. ಪ್ರತಿಪಕ್ಷಗಳು ರೈತರ ಪರವಾಗಿ ನಿಲ್ಲುವುದನ್ನು ತಡೆಯುವ ಬಿಜೆಪಿಯ ತಾಲಿಬಾನ್ ಸಂಸ್ಕೃತಿಯನ್ನೂ ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಲಾಗಿದ್ದು, ಇದು ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: 11 ದಿನಗಳಲ್ಲಿ 8 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಜಿಗಿತ.. ಇಲ್ಲಿದೆ ನೋಡಿ ಇಂದಿನ ತೈಲ ದರ