ETV Bharat / state

ಕುಂಚದ ಮೂಲಕ ಪರಿಸರ ಜಾಗೃತಿ... ಪ್ರಕೃತಿ ಉಳಿಸಲು ಅರಿವಿನ ಅಭಿಯಾನ - undefined

ಬೆಂಗಳೂರಿನ ಆರ್ಟ್ ಮಾಸ್ಟರ್ ವಿದ್ಯಾರ್ಥಿಗಳು ಗಿಡ ನೆಟ್ಟು ಪರಿಸರ ರಕ್ಷಿಸಿ ಎಂದು ಪೇಂಟಿಂಗ್ ಮೂಲಕ ವಿಭಿನ್ನವಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ತಮ್ಮ ಕುಂಚದ ಮೂಲಕ ಪರಿಸರ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.

ಪೇಂಟಿಂಗ್ ಮೂಲಕ ಪರಿಸರ ಜಾಗೃತಿ ಅಭಿಯಾನ
author img

By

Published : Jun 6, 2019, 3:38 AM IST

Updated : Jun 6, 2019, 11:11 AM IST

ಬೆಂಗಳೂರು: ಜೂನ್ ತಿಂಗಳು ಬಂತಂದ್ರೆ ಸಾಕು, ಪ್ರತಿಯೊಬ್ಬರ ಸ್ಟೇಟಸ್​ನಲ್ಲೂ ಪರಿಸರ ಜಾಗೃತಿ ಮೂಡಿರುತ್ತೆ. ಆದ್ರೆ ನಗರದ ಒಂದು ತಂಡ ಮಾತ್ರ ಪರಿಸರ ಜಾಗೃತಿಗೆ ಯಾವತ್ತೂ ಸಮಯವನ್ನು ಮೀಸಲಿಟ್ಟಿದೆ. ತಮ್ಮ ಪ್ರಭಾವಿ ಪೇಂಟಿಂಗ್​ ಮೂಲಕ ಜನರಲ್ಲಿ ಪರಿಸರದ ಅರಿವು ಮೂಡಿಸುತ್ತಿದೆ.

ಪೇಂಟಿಂಗ್ ಮೂಲಕ ಪರಿಸರ ಜಾಗೃತಿ ಅಭಿಯಾನ

ಜೂ.5 ವಿಶ್ವ ಪರಿಸರ ದಿನವಾದ್ದರಿಂದ ಪರಿಸರದ ಮೇಲೆ ಕಾಳಜಿ ಇರುವ ಆರ್ಟ್ ಮಾಸ್ಟರ್ ಟೀಂ ನ‌ ವಿದ್ಯಾರ್ಥಿಗಳು ನಗರದ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ಸ್ಟೇಷನ್ ಬಳಿ ಪರಿಸರ ಜಾಗೃತಿ ಮೂಡಿಸುವಂತ ಪೇಂಟಿಂಗ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದರು. ಒಂದು ಕಡೆ ಸ್ವಚ್ಛ ಪರಿಸರ ಚಿತ್ರ, ಮತ್ತೊಂದೆಡೆ ಸೀಡ್ ಬಾಲ್, ಇನ್ನೊಂದೆಡೆ ಪ್ಲಾಸ್ಟಿಕ್ ಬಿಟ್ಟು ಪರಿಸಕ್ಕೆ ಹತ್ತಿರವಾದ ಬ್ಯಾಗ್​ಗಳನ್ನ ಬಳಸಿ ಅನ್ನುವ ಸಂದೇಶ ಸಾರಿದರು. ಹಾಗೇ ಅಡಿಕೆ ಎಲೆಯಲ್ಲಿ ಕಲರ್​​ಫುಲ್ ಆಗಿ ಮೂಡಿ ಬಂದಿರುವ ಪ್ರಕೃತಿ ಚಿತ್ರಗಳು. ಆರ್ಟ್ ಮಾಸ್ಟರ್ ಸಂಸ್ಥೆಯ ವಿದ್ಯಾರ್ಥಿಗಳು ಇದೆಲ್ಲವನ್ನು ಸಿಲಿಕಾನ್ ಸಿಟಿ ಮಂದಿಗೆ ತೋರಿಸುವುದರ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಇದರಲ್ಲಿ ಮಕ್ಕಳು ಸಹ ಭಾಗವಹಿಸಿ, ಪರಿಸರ ಚಿತ್ರಗಳ ಬಿಡಿಸಿ ಎಲ್ಲರ ಗಮನ ಸೆಳೆದರು. ಸಾರ್ವಜನಿಕರೇ ಪರಿಸರವನ್ನ ಕಡೆಗಣಿಸಿ ಮೆಲ್ಲಗೆ ಪ್ರಕೃತಿಯಿಂದ ದೂರವಾಗುತ್ತಿದ್ದಾರೆ ಅನ್ನೋ ಥೀಮ್​ನಲ್ಲಿ ವಿದ್ಯಾರ್ಥಿಗಳು ವಿಭಿನ್ನ ಚಿತ್ರಗಳನ್ನ ಬಿಡಿಸಿದ್ರು.

ಪರಿಸರದ ಉಳಿವಿಗಾಗಿ ಒಂದು ದಿನವನ್ನಾದರೂ ಮೀಸಲಿಡಿ, ಮರಗಳನ್ನ ಬೆಳೆಸಿ, ಪ್ಲಾಸ್ಟಿಕ್ ಬಿಟ್ಟಾಕಿ ಅಂತಾ ಸೀಡ್ ಬಾಲ್​ಗಳನ್ನ ಜನರಿಗೆ ಪೇಪರ್ ಕವರ್​ನಲ್ಲಿ ಹಾಕಿ ಕೊಟ್ಟು ವಿದ್ಯಾರ್ಥಿಗಳು ವಿಭಿನ್ನ ಅಭಿಯಾನ ನಡೆಸಿದ್ರು. ಮಾತ್ರ ಪರಿಸರ ದಿನಾಚರಣೆಯಲ್ಲ ಪ್ರತಿದಿನ ಪರಿಸರ ದಿನ ಎಂದುಕೊಂಡು ಮನೆಗೊಂದು ಮರ ನೆಟ್ಟು ಮುಂದಿನ ಪೀಳಿಗೆಗೆ ಪರಿಸರವನ್ನು ಜೀವಂತವಾಗಿರಿಸೋಣ.

ಪ್ಲಾಸ್ಟಿಕ್ ತ್ಯಜಿಸಿ.ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪರಿಸರ ರಕ್ಷಿಸಿ ಎಂದು ಪೇಂಟಿಂಗ್ ಮೂಲಕ ವಿಭಿನ್ನವಾಗಿ ಜನರಲ್ಲಿ ಜಾಗೃತಿ ಮೂಡಿಸಿದಆರ್ಟ್ ಮಾಸ್ಟರ್ ವಿದ್ಯಾರ್ಥಿಗಳು...!!!!

ವರ್ಷದಲ್ಲಿ ಯಾವ ದಿನನೂ ಪರಿಸರ ಉಳಿಸುವ ಬಗ್ಗೆ ಯಾರು ಕೂಡ ಯೋಚಿಸಲ್ಲ . ಅದ್ರೆ ಜೂನ್ ತಿಂಗಳು ಬಂತು ಅಂದ್ರೆ ಸಾಕು ಪ್ರತಿಯೊಬ್ಬರ ಸ್ಟೇಟಸ್ ನಲ್ಲೂ ಪರಿಸರ ಜಾಗೃತಿ ಮೂಡಿರುತ್ತೆ.ಅದ್ರೆ ಇಂದು ಒಂದು ತಂಡ ಅದೆಂತದೆ ಕೆಲಸ ಇರಲ್ಲಿ, ಅದೆಲ್ಲ ಬಿಟ್ಟು ಪರಿಸರದ ಬಗ್ಗೆ ‌ಜನರಲ್ಲಿ ಕಾಳಜಿ ಮೂಡಿಸಲೇ ಬೇಕು ಎಂದು ಮಾಡಲೇಬೇಕು ಎಂದು ಪೇಟಿಂಗು ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ಎಸ್ ಇವತ್ತು ವಿಶ್ವ ಪರಿಸರ ದಿನವಾದ್ದರಿಂದ ಪರಿಸದ ಮೇಲೆ ಕಾಲಜಿ ಇರುವ ಆರ್ಟ್ ಮಾಸ್ಟರ್ ರ್ ನ‌ ಟೀಂ ನ‌ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ಸ್ಟೇಷನ್ ಬಳಿ ಪರಿಸರ ಜಾಗೃತಿ ಮೂಡಿಸುವಂತ ಪೇಟಿಂಗ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ಒಂದು ಕಡೆ ಸ್ವಚ್ಚ ಪರಿಸರ ಚಿತ್ರ, ಮತ್ತೋಂದು ಕಡೆ ಸೀಡ್ ಬಾಲ್, ಇನ್ನೋಂದು ಕಡೆ ಪ್ಲಾಸ್ಟಿಕ್ ಬಿಟ್ಟು ಪರಿಸಕ್ಕೆ ಅತ್ರವಾದ ಬ್ಯಾಕ್ ಗಳನ್ನ ಬಳಸಿ ಅನ್ನುವ ಮೆಸೇಜ್. ಹಾಗೇ ಅಡಿಕೆ ಎಲೆಯಲ್ಲಿ ಕಲರ್ ಫುಲ್ ಆಗಿ ಮೂಡಿ ಬಂದಿರುವ ನೇಚರ್ ಚಿತ್ರಗಳು. ಇದೆಲ್ಲಾ ಮಾಡಿದ್ದು ಸಿಕಾನ್ ಸಿಟಿ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದಕ್ಕೆ ಆರ್ಟ್ ಮಾಸ್ಟರ್ ಸಂಸ್ಥೆಯ ವಿಧ್ಯಾರ್ಥಿಗಳು. ಇದರಲ್ಲಿ ಮಕ್ಕಳು ಸಹ ಭಾಗ ವಹಿಸಿದ್ದು ಅವರು ಸಹ ಪರಿಸರ ಚಿತ್ರಗಳ ಬಿಡಿಸಿ ಎಲ್ಲಾರ ಗಮನ ಸೆಳೆದರು..ಹೌದು ಕುಡಿಯಲು ಶುದ್ದ ನೀರಿಲ್ಲ, ಉಸಿರಾಡಲು ಉತ್ತಮ ಗಾಳಿ ಇಲ್ಲ. ಓಡಾಡಲು ಕ್ಲೀನ್ ರೋಡ್ ಇಲ್ಲ. ಅದೆಲ್ಲಾ ಬಿಡಿ ಮರಗಳ ನಾಶದಿಂದ ಸೂರ್ಯನು ಧರೆಯನ್ನು
ಬೆಯಿಸುತಿದ್ದಾನೆ ಅದರೆ ಇದಕ್ಕೆಲ್ಲ‌ ಕಾರಣ ನಾವೇ ಅಂದ್ರೆ‌ ತಪ್ಪಲ್ಲ .ಸಾರ್ವಜನಿಕರೆ ಪರಿಸರವನ್ನ ಗಡೆಗಣಿಸಿ ಮೆಲ್ಲಗೆ ಪ್ರಕೃತಿಯಿಂದ ದೂರವಾಗುತ್ತಿದ್ದಾನೆ. ಈ ಒಂದು ಥೀಮ್ ನಲ್ಲಿ ವಿದ್ಯಾರ್ಥಿ ಗಳು ವಿಭಿನ್ನ ಚಿತ್ರಗಳನ್ನ ಬಿಡಿಸಿದ್ರು. ಅಟ್ಲೀಸ್ಟ್ ಪರಿಸರಕ್ಕೆ ಒಂದು ದಿನವನ್ನಾದರು ಮೀಸಲಿಡಿ ಮರಗಳನ್ನ ಬೆಳೆಸಿ, ಪ್ಲಾಸ್ಟಿಕ್ ಬಳಸ ಬೇಡಿ ಅಂತಾ ಸೀಡ್ ಬಾಲ್ ಗಳನ್ನ ಜನರಿಗೆ ಪೇಪರ್ ಕವರ್ ನಲ್ಲಿ ಹಾಕಿ ಕೋಟ್ಟು ಪ್ರಕೃತಿ ಉಳಿಸಿ ಅಂತ ವಿದ್ಯಾರ್ಥಿಗಳು ವಿಭಿನ್ನ ಅಭಿಯಾನ ಮಾಡಿದ್ರು. ಇನ್ನೂ ಬೆಂಗಳೂರು ಪೂಲೀಸರು ಸಹ ಮರಗಳನ್ನ ನೆಡುವ ಮೂಲಕ ಪರಿಸರ ಉಳಿಸಿ ಅಂತಾ ಮೆಸೇಜ್ ನೀಡಿದ್ದಾರೆ. ಇವತ್ತು ಮಾತ್ರ ಪರಿಸರ ದಿನಾಚರಣೆ ಮಾತ್ರವಲ್ಲ ದಿನ ಪರಿಸರ ದಿನ ಅಂತ . ಮನೆಗೊಂದು ಮರ ನೆಟ್ಟು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡಿ ಎನ್ನುವುದು ನಮ್ಮ ಆಶಯ...

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)

Last Updated : Jun 6, 2019, 11:11 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.