ಬೆಂಗಳೂರು: ಭೂ ಕಬಳಿಕೆಗೆ ದಂಡ ವಿಧಿಸುವ ನಿಯಮ 192 ಎ ಕಾಯ್ದೆಯಿಂದ ಬಗರ್ ಹುಕುಂ ಜಾಗ ಮಂಜೂರಾತಿಗೆ ಅಡಚಣೆಯಾಗುತ್ತಿದೆ ಎಂದು ಬಿಜೆಪಿ ಶಾಸಕರು ಪ್ರಸ್ತಾಪಿಸಿದ್ದರು.
ವಿಧಾನಸಭೆಯಲ್ಲಿ ನಿಯಮ 69ರ ಅಡಿ ಶಾಸಕ ಹಾಲಪ್ಪ, ಅರಗ ಜ್ಞಾನೇಂದ್ರ ವಿಷಯ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ್, ಭೂ ಕಬಳಿಕೆ ಮಾಡುವವರಿಗೆ ನಿಯಮ 192 ಎ ಜಾರಿಯಲ್ಲಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಒತ್ತುವರಿ ಆಗುತ್ತಿತ್ತು. ಹಾಗಾಗಿ ಕಾನೂನು ಕಠಿಣವಾಗಿ ಜಾರಿಯಲ್ಲಿದೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ವಿನಾಯಿತಿ ನೀಡುವ ಬಗ್ಗೆ ಕಾಯ್ದೆ ತರುತ್ತೇವೆ ಎಂದು ತಿಳಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿದ್ದರೆ 192 ಎ ಕಾನೂನು ಅನ್ವಯವಾಗದ ರೀತಿ ಕಾಯ್ದೆ ತರುತ್ತೇವೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಅಧಿವೇಶನದಲ್ಲಿಯೇ ಕಾಯ್ದೆ ಮಂಡಿಸುತ್ತೇವೆ ಎಂದು ಹೇಳಿದರು.