ಆನೇಕಲ್: ರಾತ್ರಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆಯೊಂದು ವ್ಯಕ್ತಿ ಮೇಲೆ ದಾಳಿ ಮಾಡಿರುವ ಘಟನೆ ಆನೇಕಲ್ ಬಳಿಯ ನಲ್ಲಯ್ಯನದೊಡ್ಡಿಯಲ್ಲಿ ನಡೆದಿದೆ.
ಸುರೇಶ್ ದಾಳಿಗೊಳಗಾದ ವ್ಯಕ್ತಿ. ಈತ ರಾತ್ರಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ ಮಾಡಿದೆ. ದಾಳಿಯಲ್ಲಿ ಸುರೇಶ್ ತೆಲೆಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನೇಕಲ್ ಸುತ್ತಲಿರುವ ಬನ್ನೇರುಘಟ್ಟ ಹಾಗೂ ತಮಿಳುನಾಡಿನ ಜವಳಗೆರೆ ಅರಣ್ಯದಿಂದ ಕಾಡಾನೆಗಳು ರಾತ್ರಿ ಓಡಾಡಿ, ಬೆಳಗ್ಗೆಯಾಗುತ್ತಲೇ ಕಾಡಿಗೆ ಸೇರಿಕೊಳ್ಳುತ್ತವೆ. ಹಳ್ಳಿಗಳ ಹತ್ತಿರ ಸುಳಿದಾಡುವ ಆನೆಗಳಿಗೆ ಮನುಷ್ಯ ಒಂಟಿಯಾಗಿ ಕಂಡರೆ ಏಕಾಏಕಿ ಮೇಲೆರಗುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ.