ETV Bharat / state

ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕೋವಿಡ್ ಬಗೆಗಿನ ಆತಂಕ! - ಗರ್ಭಿಣಿಯರ ಆರೋಗ್ಯ

ಕೊರೊನಾ ಸೋಂಕು ಹೆಚ್ಚುತ್ತಿರುವುದುರಿಂದ ಸಹಜವಾಗಿಯೇ ಜನರಲ್ಲಿ ಸಾಕಷ್ಟು ಆತಂಕ ಉಂಟು ಮಾಡುತ್ತಿದೆ. ಈ ಭಯ ಗರ್ಭಿಣಿ ಸ್ತ್ರೀಯರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಇನ್ನೂ ಹೆಚ್ಚಿನದ್ದಾಗಿರುತ್ತದೆ ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಅನಿತಾ ರಾವ್ ಹೇಳಿದ್ದಾರೆ.

effect of corona scare on pregnants
effect of corona scare on pregnants
author img

By

Published : Apr 29, 2021, 6:57 PM IST

Updated : Apr 29, 2021, 7:05 PM IST

ಬೆಂಗಳೂರು: ಕೋವಿಡ್ ತೀವ್ರವಾಗಿ ವ್ಯಾಪಿಸುತ್ತಿರುವ ಕಾರಣ ಈ ಸಂದರ್ಭದಲ್ಲಿ ಗರ್ಭಿಣಿಯರು ಆತಂಕಕ್ಕೆ ಒಳಗಾಗುವುದು ಸಾಮಾನ್ಯ. ಈ ಕಾರಣಕ್ಕೆ ಅವರು ತಮ್ಮ ಮಾನಸಿಕ ಸ್ವಾಸ್ಥ್ಯದ ಕುರಿತು ಸಾಕಷ್ಟು ಕಾಳಜಿ ತೆಗೆದುಕೊಳ್ಳಬೇಕು.

ಈ ಕುರಿತು ಮಾಹಿತಿ ನೀಡಿರುವ ಹೆಬ್ಬಾಳದ ಖಾಸಗಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಅನಿತಾ ರಾವ್, ಕೊರೊನಾ ಸೋಂಕು ಹೆಚ್ಚುತ್ತಿರುವುದುರಿಂದ ಸಹಜವಾಗಿಯೇ ಜನರಲ್ಲಿ ಸಾಕಷ್ಟು ಆತಂಕ ಉಂಟು ಮಾಡುತ್ತಿದೆ. ಈ ಭಯ ಗರ್ಭಿಣಿಯರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಇನ್ನೂ ಹೆಚ್ಚಿನದ್ದಾಗಿರುತ್ತದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಈ ಆತಂಕ ಕಾಣಿಸಿಕೊಳ್ಳಲು ಕಾರಣ ಏನೆಂದರೆ ಅವರು ತೀರಾ ಒಂಟಿಯಾಗಿ ಕಾಲ ಕಳೆಯುವ ಸಂದರ್ಭಗಳು ಉಂಟಾದಾಗ, ಕೆಲವೊಮ್ಮೆ ಕುಟುಂಬ ಹಾಗೂ ಸ್ನೇಹಿತರಿಂದ ದೂರ ವಾಸವಿರುವುದು, ಆರ್ಥಿಕ ಅಭದ್ರತೆ, ಗರ್ಭಿಣಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ ಕುರಿತು, ವೈದ್ಯರ ಜೊತೆಗೆ ವೈಯಕ್ತಿಕ ಭೇಟಿಯ ಬದಲಾಗಿ ಆನ್ ಲೈನ್ ಮೂಲಕ ಭೇಟಿಯಾಗಬೇಕಾದ ಅನಿವಾರ್ಯತೆ, ಯಾರೋ ಹತ್ತಿರದವರನ್ನ ಕಳೆದುಕೊಳ್ಳುವ ಸಂದರ್ಭ ಎದುರಾಗುವುದು, ಹೀಗೆ ನಾನಾ ಕಾರಣಗಳಿಂದಾಗಿ ಸಹಜವಾಗಿ ಮನಸಿನಲ್ಲಿ ಆತಂಕ ಹುಟ್ಟಿಕೊಳ್ಳುತ್ತದೆ.. ಇದರಿಂದಾಗಿಯೇ ಅವರ ಆರೋಗ್ಯದ ಮೇಲೆ ಕೆಲವು ಬಾರಿ ಗಂಭೀರ ಪರಿಣಾಮಗಳನ್ನ ಎದುರಿಸಬೇಕಾಗಿ ಬರಬಹುದು.

ಗರ್ಭಿಣಿಯಾದ ವೇಳೆ ಕಾಣಿಸಿಕೊಳ್ಳುವ ಖಿನ್ನತೆಯ ಲಕ್ಷಣಗಳೆಂದರೆ, ದುಃಖ ಹಾಗೂ ಹತಾಶ ಭಾವನೆ ತಾಳುವುದು, ನಕಾರಾತ್ಮಕ ಯೋಚನೆಗಳು ಸುಳಿಯುವುದು, ಸರಿಯಾಗಿ ನಿದ್ರೆ ಮಾಡದಿರುವುದು ಅಥವಾ ಅತಿಯಾದ ನಿದ್ರೆ ಮಾಡುವುದು, ಯಾವುದೇ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದು, ಜನರ ಜೊತೆಗೆ ಸಹಜವಾಗಿ ಬೆರೆಯಲು ಹಿಂದೇಟು ಹಾಕುವುದು.

ಈ ಕುರಿತು ವೈದ್ಯೆ ಡಾ. ಅನಿತಾ ಭಟ್ ನೀಡುವ ಸಲಹೆಗಳೇನೆಂದರೆ, ಈ ಸಮಯದಲ್ಲಿ ಗರ್ಭಿಣಿಯರು ಸಾಧ್ಯವಾದಷ್ಟು ಲವಲವಿಕೆಯಿಂದ ಕಳೆಯಬೇಕು. ಆರೋಗ್ಯಕರ ಡಯೆಟ್ ಪಾಲನೆ ಮಾಡಬೇಕು. ನಿತ್ಯ ವ್ಯಾಯಾಮದ ಮೊರೆ ಹೋಗಬೇಕು, ಫೆಲಿಕ್ ಆಸಿಡ್ ಮತ್ತು ವಿಟಾಮಿನ್ ಡಿ ಇರುವ ಸಪ್ಲಿಮೆಂಟ್‍ಗಳನ್ನ ತೆಗೆದುಕೊಳ್ಳುವುದರಿಂದ ಗರ್ಭಿಣಿಯರು ಆರೋಗ್ಯವಂತರಾಗಿರುತ್ತಾರೆ. ಹಾಗೆಯೇ ಸ್ಕ್ಯಾನಿಂಗ್ ಮತ್ತು ನಿಯಮಿತ ತಪಾಸಣೆಯನ್ನ ವೈದ್ಯರು ಸೂಚಿಸುವವರೆಗೂ ತಪ್ಪಿಸದೇ ಪಾಲನೆ ಮಾಡಬೇಕು. ಇದರಿಂದ ಅವರು ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು.

effect of corona scare on pregnants
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಅನಿತಾ ರಾವ್

ಒಂದು ವೇಳೆ, ಅವರಲ್ಲಿ ಕೋವಿಡ್‌ನ ಲಕ್ಷಣಗಳು ಕಂಡಿದ್ದೇ ಆದಲ್ಲಿ ಕೂಡಲೇ ತಮ್ಮ ವೈದ್ಯರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಗಂಭೀರ ಸ್ವರೂಪದ ಲಕ್ಷಣಗಳು ಕಂಡು ಬಂದಿದ್ದೆ ಆದಲ್ಲಿ ಸೋಂಕು ತೀವ್ರವಾಗಿ ಹರಡಿದೆ ಎಂಬುದು ಖಾತರಿಯಾಗುತ್ತದೆ. ಹೀಗಾಗಿ ವಿಶೇಷ ಕಾಳಜಿ ಮತ್ತು ಚಿಕಿತ್ಸೆ ತುಂಬಾ ಅತ್ಯವಶ್ಯ.. ಆಗ ಕೂಡಲೇ ತಮ್ಮ ತಜ್ಞ ವೈದ್ಯರ ಬಳಿ ಈ ಕುರಿತಾದ ಮಾಹಿತಿ ಪಡೆಯಬೇಕು.

ಗರ್ಭಿಣಿ ಮತ್ತು ಆಕೆಯ ಮಗುವಿನ ಆರೋಗ್ಯದ ಕುರಿತು ಏನೇ ಸಂದೇಹಗಳು ಉಂಟಾದರು ಕೇಳಿ ತಿಳಿದುಕೊಳ್ಳಬೇಕು. ಕೋವಿಡ್​ಗೆ ತುತ್ತಾದ ಗರ್ಭಿಣಿಯರು ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚಿನ ಅನಾರೋಗ್ಯಕ್ಕೆ ಒಳಗಾಗುತ್ತಾರೆ‌. ಕೆಲ ಅಧ್ಯಯನಗಳ ಪ್ರಕಾರ ಕೋವಿಡ್​ಗೆ ತುತ್ತಾದ ಸಾಮಾನ್ಯ ಮಹಿಳೆಯರಿಗಿಂತ ಗರ್ಭಿಣಿ ಸ್ತ್ರೀಯರೇ ಹೆಚ್ಚು ತುರ್ತು ನಿಗಾ ಘಟಕಕ್ಕೆ ದಾಖಲಾಗುತ್ತಾರೆ. ಹೀಗಾಗಿ ಇದೊಂದು ಸಂಕೀರ್ಣ ಪರಿಸ್ಥಿತಿಯಾಗಿದ್ದು, ಗರ್ಭಿಣಿಯರು ಅನಗತ್ಯವಾಗಿ ಆತಂಕಕ್ಕೆ ಒಳಗಾಗದೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡು ಚಟುವಟಿಕೆಯಿಂದ ಸಮಯವನ್ನ ಕಳೆಯಬೇಕು. ಇದರಿಂದ ಅವರು ಮತ್ತು ಮಗು ಇಬ್ಬರೂ ಆರೋಗ್ಯವಾಗಿರಲು ಸಾಧ್ಯ ಎಂದು‌ ಸಲಹೆ ನೀಡಿದ್ದಾರೆ.

Last Updated : Apr 29, 2021, 7:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.