ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಿಣ್ಣರೊಂದಿಗೆ ತಮ್ಮ ಭಾನುವಾರದ ಸಮಯವನ್ನು ಕಳೆದರು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು, ಚಿಣ್ಣರ ಜೊತೆಗಿನ ವಿಶೇಷ ಕಾರ್ಯಕ್ರಮ ವಿಶೇಷ ಅನುಭವ ಕೊಟ್ಟಿದೆ ಎಂದು ವರ್ಣಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವರ ಮನೆಯ ಬಳಿಯ 5-6 ಚಿಕ್ಕ ಮಕ್ಕಳು ಮನೆಗೆ ಬಂದು ಮಾತನಾಡಲು ಇಚ್ಛಿಸಿದರು. ಆದರೆ ನಿಮ್ಮ ಸ್ನೇಹಿತರನ್ನೂ ಕರೆದುಕೊಂಡು ಬಂದರೆ ನಾನು ಮಾತನಾಡುತ್ತೇನೆ ಎಂದಿದ್ದೆ, ಅದರಂತೆ ಭಾನುವಾರ ಕೆಲವು ಮಕ್ಕಳು ನನ್ನೊಡನೆ ಸಂವಾದ ನಡೆಸಿದರು ಎಂದು ಬರೆದುಕೊಂಡಿದ್ದಾರೆ.
ಈ ಚಿಣ್ಣರೊಂದಿಗಿನ ಸಂವಾದದಲ್ಲಿ ಒಂದು ವರ್ಷದ ಹಿಂದೆ ಲಾಕ್ಡೌನ್ ಸಮಯದಲ್ಲಿ ತಾವು ನೋಡಿದ ಘಟನೆಗಳು, ಆನ್ಲೈನ್ ತರಗತಿಗಳಲ್ಲಿ ಅವರಿಗೆ ಉಂಟಾಗಿರುವ ಅನುಭವ, ದೀರ್ಘ ರಜೆ ಸಮಯದಲ್ಲಿ ಅವರು ಕಲಿತ ಸಂಗತಿಗಳು, 5,6 ಮತ್ತು 7ನೇ ತರಗತಿ ಗಳನ್ನು ಯಾವಾಗ ಪ್ರಾರಂಭ ಮಾಡುವಿರಿ ಎಂಬ ಪ್ರಶ್ನೆ, ಈ ಬಾರಿಯ ಪರೀಕ್ಷೆ ಕುರಿತು ಪ್ರಶ್ನೆ, ಕೆಲವು ಶಾಲೆಗಳಲ್ಲಿ ಶುಲ್ಕದ ವಿಚಾರದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆ ಸೇರಿದಂತೆ ಎಲ್ಲಾ ಸಂಗತಿಗಳನ್ನು ಮಕ್ಕಳು ಸಚಿವರೊಂದಿಗೆ ವಿವರಿಸಿದ್ದಾರೆ. ಇನ್ನು ಇದೇ ವೇಳೆ ಕೆಲವರು ತಾವು ಕಲಿತ ಕಥೆಗಳನ್ನು ಹೇಳುತ್ತಾ, ಕೆಲ ಹಾಡುಗಳನ್ನ ಹಾಡಿದರು. ಒಟ್ಟಾರೆ ಮಕ್ಕಳಿಗೆ ಖುಷಿ ತಂದ ಹಾಗೂ ಮಕ್ಕಳಿಂದ ನಮಗೆಲ್ಲ ಅನೇಕ ವಿಚಾರ ತಿಳಿದು ಬಂದ ಸಂತಸದ ಕಾರ್ಯಕ್ರಮವಿದು ಎಂದು ತಿಳಿಸಿದ್ದಾರೆ.
ಓದಿ : ಪ್ರಯಾಣಿಕರ ಗಮನಕ್ಕೆ: ಮಾ. 28ರವರೆಗೆ ಮೆಜೆಸ್ಟಿಕ್ ಟು ಮೈಸೂರು ರಸ್ತೆ ಮೆಟ್ರೋ ಸ್ಥಗಿತ