ಬೆಂಗಳೂರು : ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಿಂದೂ ಧರ್ಮ ಸೇರಿದಂತೆ ಇತರೆ ಧರ್ಮಗಳಿಗೂ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ವಂದೇ ಮಾತರಂ ಸಂಘಟನೆ ಅಧ್ಯಕ್ಷ ಶಿವಕುಮಾರ್ ಪ್ರತಿಭಟನೆ ನಡೆಸಿದರು.
ಒಂದೇ ಧರ್ಮಕ್ಕೆ ಸೀಮಿತವಾಗಿ ಇಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅನ್ಯ ಧರ್ಮಗಳಿಗೂ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮೈದಾನದ ಮುಂದೆ ಕುಳಿತುಕೊಂಡು ಪ್ರತಿಭಟಿಸಿದರು.
ಈ ವೇಳೆ ಜನ ಸೇರುತ್ತಿದ್ದಂತೆ ಮಾಹಿತಿ ಅರಿತ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಬಂದು ಗುಂಪು ಚದುರಿಸಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರೂ ಪಟ್ಟು ಬಿಡದ ಶಿವಕುಮಾರ್‌ನನ್ನು ಕಾರಿನಲ್ಲಿ ಎಳೆದೊಯ್ದು ವಶಕ್ಕೆ ಪಡೆದರು.
ಓದಿ: ಹೊಸಪೇಟೆಯಲ್ಲಿ 'ಅಪ್ಪು' ಪುತ್ಥಳಿ ಅನಾವರಣಕ್ಕೆ ರಾಘವೇಂದ್ರ ರಾಜ್‌ಕುಮಾರ್ ಆಗಮನ!