ETV Bharat / state

ಚೀನಾ ಮೂಲದ‌ ಕಂಪನಿ ಮೇಲೆ‌ ಇಡಿ ದಾಳಿ: 5.85 ಕೋಟಿ ಜಪ್ತಿ - ಚೀನಾ ಮೂಲದ‌ ಕಂಪನಿ ಮೇಲೆ‌ ಇಡಿ ದಾಳಿ

ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಸೋಗಿನಲ್ಲಿ ವಂಚನೆ ಮಾಡುತ್ತಿದ್ದ ಚೀನಾ ಮೂಲದ ಕಂಪನಿಯ ಮೇಲೆ ದಾಳಿ ನಡೆಸಿದ ಇಡಿ 5.85 ಕೋಟಿ ರೂಪಾಯಿನ್ನು ಜಪ್ತಿ ಮಾಡಿದೆ.

ed-ride-on-china-based-company
ಚೀನಾ ಮೂಲದ‌ ಕಂಪೆನಿ ಮೇಲೆ‌ ಇಡಿ ದಾಳಿ: 5.85 ಕೋಟಿ ಜಪ್ತಿ
author img

By

Published : Oct 3, 2022, 8:58 PM IST

ಬೆಂಗಳೂರು : ಸಾಮಾಜಿಕ ಜಾಲತಾಣದ ಮೂಲಕ ನಿರುದ್ಯೋಗಿಗಳಿಗೆ ಪಾರ್ಟ್ ಟೈಮ್ ಕೆಲಸ ಕೊಡಿಸುವ ಸೋಗಿನಲ್ಲಿ ಹಣ ಹೂಡಿಕೆ ಮಾಡಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಯ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಸುಮಾರು 12 ಕಡೆಗಳಲ್ಲಿ ದಾಳಿ ಮಾಡಿ 5.85 ಕೋಟಿ ರೂಪಾಯಿಯನ್ನು ಜಾರಿ‌ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.

ವಾಟ್ಸ್​ಆ್ಯಪ್​ ಹಾಗೂ ಟೆಲಿಗ್ರಾಂ ಮುಖಾಂತರ ನಿರುದ್ಯೋಗಿಗಳಿಗೆ ಕೆಲಸದ ಭರವಸೆ ನೀಡಿ ತಮ್ಮತ್ತ ಸೆಳೆದುಕೊಳ್ಳುತ್ತಿದ್ದ ಚೀನಾ ಮೂಲದ ಕೀಪ್ ಶೇರರ್ ಹೆಸರಿನ ಕಂಪನಿ ನೋಂದಣಿ ಶುಲ್ಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿತ್ತು. ಈ ಕಂಪನಿಯು ಸೆಲೆಬ್ರಿಟಿ ವಿಡಿಯೊ ಶೇರ್ ಮಾಡುವ ಕೆಲಸವನ್ನು ಉದ್ಯೋಗಿಗಳಿಗೆ ನೀಡುತಿತ್ತು. ಆರಂಭದಲ್ಲಿ ಪ್ರತಿ ವಿಡಿಯೊ 20 ರೂಪಾಯಿ ನೀಡುತಿತ್ತು. ಕೆಲವೇ ದಿನಗಳ ಬಳಿಕ ಗೂಗಲ್ ಪ್ಲೇ ಸ್ಟೋರ್ ನಿಂದ ಕೀಪ್ ಶೇರರ್ ಆ್ಯಪ್ ಕಾಣೆಯಾಗಿತ್ತು‌.

ಚೀನಾ ಕಂಪನಿಯು ಬಳಕೆದಾರರಿಂದ ಪಡೆದ ಹಣ ಬೆಂಗಳೂರು ಮೂಲದ ಕೆಲ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಿತ್ತು. ಚೀನಾ ಮೂಲದ ಖಾತೆಗಳಿಗೆ ಕ್ರಿಪ್ಟೋ ರೂಪದಲ್ಲಿ ವಂಚಿಸಿದ ಕಂಪನಿಯು ಹಣವನ್ನು ವರ್ಗಾವಣೆ ಮಾಡಿತ್ತು. ಈ ಸಂಬಂಧ ನಗರ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ 92 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

92 ಆರೋಪಿಗಳ ಪೈಕಿ ಪ್ರಮುಖ 6 ಮಂದಿ ಆರೋಪಿಗಳು ಚೀನಾ ಹಾಗೂ ತೈವಾನ್ ಮೂಲದವರಾಗಿದ್ದಾರೆ. ವಿದೇಶಿ ಹಣ ವರ್ಗಾವಣೆ ಪತ್ತೆ ಹಿನ್ನೆಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ 12 ಕಡೆಗಳಲ್ಲಿ ದಾಳಿ ನಡೆಸಿ 5.85 ಕೋಟಿ ರೂ.‌ಜಪ್ತಿ ಮಾಡಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :ಗಲ್ಲಿ ಕ್ರಿಕೆಟ್​ನ ಸಂಸ್ಕೃತ ಕಮೆಂಟರಿಗೆ ನಟ್ಟಿಗರು ಫಿದಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.