ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧಿಸಿದಂತೆ ಇಡಿ ದೂರು ದೂರು ದಾಖಲಿಸಿದ ಬೆನ್ನಲ್ಲೆ ಐಎಂಎ ಮಾಲೀಕ ಮನ್ಸೂರ್ ಖಾನ್ ಹಾಗೂ ಐಎಂಎ ಸಂಬಂಧಪಟ್ಟ ಏಳು ಜನ ನಿರ್ದೇಶಕರಿಗೆ ಇಡಿ ನೋಟಿಸ್ ನೀಡಿದೆ.
ಐಎಂಎಯಲ್ಲಿ ವಿದೇಶಿ ಹೂಡಿಕೆ, ವಿದೇಶಿ ವಿನಿಮಯ, ವಿದೇಶಿ ವಹಿವಾಟು ಹಾಗೆ FEMA ಮತ್ತು PMLA ಕಾಯ್ದೆ ಉಲ್ಲಂಘನೆ ಮಾಡಿ ವಹಿವಾಟು ಮಾಡಿದ ಹಿನ್ನೆಲೆ ಇಡಿ ಕಳೆದ ಶನಿವಾರ ಸಂಜೆ ಇಸಿಐಆರ್ ದಾಖಲಿಸಿ ತನಿಖೆ ಮುಂದುವರೆಸಿತ್ತು. ಹಾಗೆ ನಿನ್ನೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಎಸ್ಐಟಿ ಅಧಿಕಾರಿಗಳಿಂದ ಕೆಲವು ಮಹತ್ವದ ಮಾಹಿತಿಯನ್ನ ಇಡಿ ಆಧಿಕಾರಿಗಳು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಮದುವೆಯಾಗಿದ್ದ ಮನ್ಸೂರ್ ಖಾನ್ಗೆ ಸೇರಿದ ಮನೆ ಕಚೇರಿ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ಮನ್ಸೂರ್ ನಿವಾಸ ಹಾಗೂ ಆತನ ಮೂವರು ಪತ್ನಿಯರ ನಿವಾಸದಲ್ಲಿ 30 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಪತ್ತೆಯಾಗಿತ್ತು. ಹೀಗಾಗಿ ನಗದು, ಚಿನ್ನಾಭರಣ ಜೊತೆಗೆ ಪ್ರಕರಣದ ತನಿಖೆಗೆ ಅಗತ್ಯವಿರುವ ಮಹತ್ವದ ದಾಖಲೆಗಳನ್ನ ಎಸ್ಐಟಿ ವಶಕ್ಕೆ ಪಡೆದಿದ್ದಾರೆ. ಮನ್ಸೂರ್ ಮೂರು ಪತ್ನಿಯರಿಂದ ದೂರ ಉಳಿದು ನಾಲ್ಕನೇ ಮದುವೆಯಾಗಿದ್ದ. ಮೊದಲನೇ ಪತ್ನಿ ತಿಲಕನಗರದಲ್ಲಿ ನಿವಾಸ ಹೊಂದಿದ್ದು, ಎರಡನೇ ಹೆಂಡತಿ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಮನೆ ಹೊಂದಿದ್ದು, ಮೂರನೇ ಹೆಂಡತಿ ಶಿವಾಜಿನಗರದ ವೆಂಕಟಪ್ಪ ರಸ್ತೆಯಲ್ಲಿನ ಮನೆಯಲ್ಲಿದ್ದಾಳೆ. ಹಾಗೆ ನಾಲ್ಕನೇ ಹೆಂಡತಿ ನಿವಾಸಕ್ಕಾಗಿ ಎಸ್ಐಟಿ ಶೋಧ ಮಾಡುತ್ತಿದೆ. ಸದ್ಯ ಮನ್ಸೂರ್ ನಾಲ್ಕನೇ ಹೆಂಡತಿ ಹೊರ ದೇಶದಲ್ಲಿದ್ದು ಮನ್ಸೂರ್ ಖಾನ್ ಆಕೆಯ ಜೊತೆ ಇರುವ ವಿಚಾರ ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ.