ETV Bharat / state

ನದಿ ಬದಿಯ ರಕ್ಷಣೆಗೆ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಯೋಜನೆ

author img

By

Published : Jun 30, 2022, 7:26 PM IST

ವಿವಿಧ ಕಾರಣಗಳಿಂದ ನಿರಂತರವಾಗಿ ನಡೆಯುತ್ತಿರುವ ನದಿಗಳ ಅತಿಕ್ರಮ ತಡೆಯಲು ಮತ್ತು ಮಣ್ಣನ್ನು ಸಂರಕ್ಷಿಸುವುದು ಈ ಯೋಜನೆಯ ಉದ್ದೇಶ.

Eco-Restoration Model Project first in Karnataka state to come up in Mangaluru
ಇಕೋ ರೆಸ್ಟೋರೇಶನ್ ಯೋಜನೆ

ಮಂಗಳೂರು: ನದಿತಟಗಳ ಅತಿಕ್ರಮಣವನ್ನು ತಡೆಯಲು, ತ್ಯಾಜ್ಯ ರಾಶಿ, ನೆರೆ ಹಾವಳಿ, ಜೀವವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿದಿರು ನೆಡುತೋಪು ನಿರ್ಮಾಣದ ಇಕೋ ರೆಸ್ಟೋರೇಶನ್ ಎಂಬ ಯೋಜನೆಯನ್ನು ಅರಣ್ಯ ಇಲಾಖೆಯು ಮಂಗಳೂರಿನಲ್ಲಿ ಹಮ್ಮಿಕೊಂಡಿದೆ.

Eco-Restoration Model Project first in Karnataka state to come up in Mangaluru

ತಾಲೂಕಿನ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಎರಡುೂ ಬದಿಯಲ್ಲಿ ಮತ್ತು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ತಾಲೂಕಿನಲ್ಲಿ 66 ಕಿ.ಮೀ. ಮತ್ತು ಬಂಟ್ವಾಳ ತಾಲೂಕಿನ 30 ಕಿ.ಮೀ. ನದಿ ಬದಿ ವ್ಯಾಪ್ತಿಯಲ್ಲಿ ಯೋಜನೆ ಬರುತ್ತಿದೆ. ಒಟ್ಟು 96 ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು 35 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಈ ಮೂಲಕ ರಾಜ್ಯದ ಮಾದರಿ ಯೋಜನೆಯಾಗಿ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಅನುಷ್ಠಾನಕ್ಕೆ ತರಲಾಗುತ್ತಿದೆ.

ಇತ್ತೀಚೆಗೆ ನದಿಪಾತ್ರಗಳ ಅತಿಕ್ರಮಣ ಹೆಚ್ಚಾಗುತ್ತಿದೆ. ಕೆಲವೆಡೆ ನದಿ ತೀರದಲ್ಲಿ ಆವರಣ ಗೋಡೆ, ತೋಟ, ಕಟ್ಟಡ ನಿರ್ಮಿಸಿ ಅತಿಕ್ರಮಣ ಮಾಡಲಾಗಿದೆ. ಇದನ್ನು ತೆರವುಗೊಳಿಸಿ, ಆ ಜಾಗದಲ್ಲಿ ಬಿದಿರು ನೆಡುವುದೇ ಈ ಯೋಜನೆ. ಹಳೆಯ ಕಟ್ಟಡಗಳ ತ್ಯಾಜ್ಯ, ಸತ್ತ ಪ್ರಾಣಿಗಳು, ಕಸವನ್ನು ನದಿ ಬದಿ ಹಾಕಲಾಗುತ್ತಿದ್ದು, ಇದರಿಂದ ನದಿ ನೀರು ಮಲಿನವಾಗುತ್ತಿದೆ.

ಬಿದಿರು ಗಿಡಗಳಿಗೆ ಉಪ್ಪು ನೀರನ್ನು ತಡೆದುಕೊಳ್ಳುವ ಶಕ್ತಿ ಇದ್ದು, ಇದರ ಬೇರು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಇದು ಮಣ್ಣಿನ ಸವಕಳಿಗೂ ಅವಕಾಶ ನೀಡುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ನದಿಬದಿಯಲ್ಲಿ ಬಿದಿರು ತೋಪನ್ನು ನಿರ್ಮಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.