ETV Bharat / state

ಕರ್ನಾಟಕದಲ್ಲಿ ಫಸ್ಟ್​ ಟೈಂ ಡ್ರಗ್​ ಪೆಡ್ಲರ್​ನ ₹1.68 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಪೊಲೀಸರು

ಇವೆಲ್ಲದರ ಒಟ್ಟು ಮೊತ್ತ 1 ಕೋಟಿ 68 ಲಕ್ಷ ಮೌಲ್ಯ ಅಂತಾ ಹೇಳಲಾಗಿದೆ. ಇಷ್ಟೂ ಆಸ್ತಿಯನ್ನು ಆರೋಪಿ ಗಾಂಜಾ ಮಾರಾಟದಿಂದಲೇ ಸಂಪಾದಿಸಿದ್ದ. ಸದ್ಯ ಪೊಲೀಸರು ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ..

author img

By

Published : Sep 4, 2021, 10:26 PM IST

Drug peddler assets seized
ಡ್ರಗ್​ ಪೆಡ್ಲರ್​ ಆಸ್ತಿ ಜಪ್ತಿ

ಬೆಂಗಳೂರು : ಗಾಂಜಾ ಮಾರಾಟ ಮಾಡಿ ಕೋಟಿಗಟ್ಟಲೇ ಆಸ್ತಿ ಸಂಪಾದನೆ ಮಾಡಿದ್ದ ಎನ್ನಲಾಗಿರುವ ಆರೋಪಿಯ ಆಸ್ತಿಯನ್ನು ಇದೀಗ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಗಾಂಜಾ ಮಾರಾಟ ಕೇಸ್​​ನಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರಗ್​ ಪೆಡ್ಲರ್​ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಸೂರ್ಯಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡಿ ಕೋಟಿಗಟ್ಟಲೆ ಆಸ್ತಿ ಸಂಪಾದನೆ ಮಾಡಿದ್ದ ಆರೋಪಿ ಬಿಹಾರ ಮೂಲದ ಅಂಜಯ್ ಕುಮಾರ್ ಸಿಂಗ್ ಎಂಬಾತನ ಆಸ್ತಿಯನ್ನು ಪೊಲೀಸರು ಸೀಜ್ ಮಾಡಿದ್ದಾರೆ.

2019ರಲ್ಲಿ ಅಂಜಯ್ ಕುಮಾರ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಬಂಧಿಸಿ 822 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈಗಾಗಲೇ ಆರೋಪಿಯ ಕೃತ್ಯದ ಬಗ್ಗೆ ದೋಷಾರೋಪಣಾ ಪಟ್ಟಿಯನ್ನ ಕೋರ್ಟ್​ಗೆ ಸಲ್ಲಿಸಲಾಗಿದೆ.

Bengaluru
ಡ್ರಗ್​ ಪೆಡ್ಲರ್ ಅಪಾರ್ಟ್​ಮೆಂಟ್​​

ಆತನ ಹೆಂಡತಿ ಶೀಲಾದೇವಿ ಹೆಸರಿನಲ್ಲಿದ್ದ 30x49 ಸೈಟ್ ಹಾಗೂ ಎರಡು 69x40 ಸೈಟ್, ಸತ್ಕೀರ್ಥಿ ಅಪಾರ್ಟ್​ಮೆಂಟ್​​ನಲ್ಲಿರುವ ಒಂದು ಫ್ಲ್ಯಾಟ್, ಸ್ಕಾರ್ಪಿಯೋ ಕಾರನ್ನು ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾತ್ರವಲ್ಲ ಜಾಯಿಂಟ್ ಅಕೌಂಟಿನಲ್ಲಿದ್ದ 9 ಲಕ್ಷ ರೂ. ಹಣವನ್ನೂ ಕೂಡ ಜಪ್ತಿ ಮಾಡಿದ್ದಾರೆ.

ಇವೆಲ್ಲದರ ಒಟ್ಟು ಮೊತ್ತ 1 ಕೋಟಿ 68 ಲಕ್ಷ ಮೌಲ್ಯ ಅಂತಾ ಹೇಳಲಾಗಿದೆ. ಇಷ್ಟೂ ಆಸ್ತಿಯನ್ನು ಆರೋಪಿ ಗಾಂಜಾ ಮಾರಾಟದಿಂದಲೇ ಸಂಪಾದಿಸಿದ್ದ. ಸದ್ಯ ಪೊಲೀಸರು ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಓದಿ: ಬೆಂಗಳೂರಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ದಾಳಿ.. ಕಂತೆ ಕಂತೆ ಹಣದ ಜತೆ 104 ಜನ ವಶಕ್ಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.