ಬೆಂಗಳೂರು: ಡ್ರಗ್ಸ್ ಜಾಲ ವಿಸ್ತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಅಲರ್ಟ್ ಆಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸ್ ಶ್ವಾನ ದಳ, ಸಿಸಿಬಿ ನಾರ್ಕೋಟಿಕ್ಸ್ ವಿಂಗ್ ಹಾಗೂ ವಿಶೇಷ ಪೊಲೀಸರ ತಂಡ ರಚನೆ ಮಾಡಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಬಸ್ಗಳ ತಪಾಸಣೆ ಮಾಡಲಾಗುತ್ತಿದೆ.
![ಬಸ್ಗಳ ತಪಾಸಣೆ ನಡೆಸುತ್ತಿರುವ ಶ್ವಾನ ದಳ](https://etvbharatimages.akamaized.net/etvbharat/prod-images/kn-bng-03-drug-7204498_02092020093749_0209f_1599019669_346.jpg)
ಹಗಲು-ಇರುಳು ಬಸ್ಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಪಣ ತೊಟ್ಟಿರುವ ಸರ್ಕಾರಕ್ಕೆ ಇದೀಗ ಈ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದೆ.