ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ರಾಗಿಣಿ ಆಪ್ತ ರವಿಶಂಕರ್ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018 ರಲ್ಲಿ ಡ್ರಗ್ ಪ್ರಕರಣದಲ್ಲಿ ಎರಡು ವರ್ಷದ ಹಿಂದೆಯೇ ಬಂಧಿತನಾಗಿದ್ದ ರವಿಶಂಕರ್ ಜಾಮೀನಿನ ಮೇಲೆ ಹೊರಬಂದಿದ್ದ. ಸದ್ಯ ಹಳೆ ಕೇಸ್ ಗೆ ಮರುಜೀವ ಕೊಟ್ಟ ಪೊಲೀಸರು ಕಾಟನ್ ಪೇಟೆಯಲ್ಲಿ ಎಫ್ಐಆರ್ ದಾಖಲಿಸಿ ಸದ್ಯ ಅದರ ವಿಚಾರವಾಗಿ ಸಿಸಿಬಿ ತನಿಖೆ ಮುಂದುವರೆಸಿದ್ದಾರೆ.
ರವಿಶಂಕರ್ ಮೇಲಿರುವ ಆರೋಪಗಳೇನು?:
ಆರೋಪ1:
ಸರ್ಕಾರ ನಿಷೇಧಿಸಿದ ಮಾದಕ ವಸ್ತು ಮಾರಾಟ ಹಿನ್ನೆಲೆ NDPS ಆ್ಯಕ್ಟ್ ಅಡಿ ದೂರು ದಾಖಲಾಗಿದ್ದು, ಕೃತ್ಯ ಸಾಬೀತಾದ್ರೆ 10-20 ವರ್ಷ ಜೈಲು ಶಿಕ್ಷೆ ಹಾಗೂ 10-20 ಲಕ್ಷ ದಂಡ ಕಟ್ಟಬೇಕಾದ ಸಾಧ್ಯತೆ ಇದೆ.
ಆರೋಪ-2
ಒಳ ಸಂಚು ರೂಪಿಸಿ ಡ್ರಗ್ ಮಾರಾಟಕ್ಕೆ ಪಾರ್ಟಿ ಆಯೋಜಿಸುವುದು. ಈ ಕೃತ್ಯ ಸಾಬೀತಾದ್ರೆ 2 ವರ್ಷ ಜೈಲು ಶಿಕ್ಷೆ ಖಚಿತ.
ಆರೋಪ-3
ಮಾದಕ ವಸ್ತು ಸೇವನೆ NDPD ಕಾಯ್ದೆ 27 ಬಿ ಅಡಿಯಲ್ಲಿ ಆಪರಾಧವಾಗಿದೆ. ಈ ಕೃತ್ಯ ಸಾಬೀತಾದ್ರೆ 6 ತಿಂಗಳು ಶಿಕ್ಷೆ ಜೊತೆಗೆ 10 ಸಾವಿರ ದಂಡ ಕಟ್ಟಬೇಕು.
ಸದ್ಯ ರವಿಶಂಕರ್ ಸಿಸಿಬಿ ವಶದಲ್ಲಿದ್ದು, ಪೊಲೀಸರು ಡ್ರಗ್ ಜಾಲದ ಬೆನ್ನತ್ತಿ ತನಿಖೆ ಮುಂದುವರೆಸಿದ್ದಾರೆ.