ಬೆಂಗಳೂರು: ಖಾಸಗಿ ಆಸ್ಪತ್ರೆಯ ನ್ಯೂರೋ ಸೆಂಟರ್ನಲ್ಲಿ ಹಿರಿಯ ವೈದ್ಯನಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ವೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ನ್ಯೂರೋ ಸೆಂಟರ್ನಲ್ಲಿ ಟ್ರೈನಿಯಾಗಿದ್ದ ಯುವತಿಯನ್ನ ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾರೆ. ಇದಾದ ನಂತರ ನಿನ್ನನ್ನೇ ಮದುವೆಯಾಗುತ್ತೇನೆ ಯಾರಿಗೂ ಹೇಳಬೇಡ ಎಂದು ಹೇಳಿ ಸುಮ್ಮನಿರಿಸಿದ್ದಾರೆ. ಆದರೆ, ಯುವತಿ ಮದುವೆ ಆಗು ಎಂದು ಹಠಕ್ಕೆ ಬಿದ್ದಾಗ ವೈದ್ಯ ತನ್ನ ವರಸೆ ಬದಲಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಆದರೆ, ಸಿದ್ದಾಪುರ ಪೊಲೀಸರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾಳೆ.
ಸದ್ಯ ಡಿಸಿಪಿ ಮೊರೆ ಹೋಗಿರುವ ಯುವತಿ ತನಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದ್ದಾಳೆ. ದೈಹಿಕ ಸಂಪರ್ಕಕ್ಕೆ ಆಗಾಗ್ಗೆ ನನಗೆ ಒತ್ತಾಯ ಮಾಡಿದ್ದಲ್ಲದೆ, ಅಸಭ್ಯ ವಿಡಿಯೋಗಳನ್ನ ನನ್ನ ಮೊಬೈಲ್ಗೆ ವೈದ್ಯ ಕಳುಹಿಸುತ್ತಿದ್ದರು. ಇದರಿಂದ ಹಿಂಸೆಯಾಗಿ ನಾನು ಆಸ್ಪತ್ರೆಯ ಆಡಳಿತ ಮಂಡಳಿಗೂ ತಿಳಿಸಿದ್ದೆ. ಆದರೆ, ಅವರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.