ETV Bharat / state

ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ ಹೈಕಮಾಂಡ್ ಸೂಚನೆ ನೀಡಿದ್ದೇಕೆ ಗೊತ್ತಾ?

ಟೆನ್ ಪರ್ಸೆಂಟೇಜ್ ಸರ್ಕಾರ: ಇದಾದ ನಂತರ ಪ್ರಮುಖವಾಗಿ ಕೇಳಿಬಂದಿದ್ದು ಟೆನ್ ಪರ್ಸೆಂಟೇಜ್ ಸರ್ಕಾರ ಎನ್ನುವ ಆರೋಪ. ಮೋದಿ ಬಾಯಿಂದ ಬಂದ ಹತ್ತು ಪರ್ಸಂಟೇಜ್ ಸರ್ಕಾರ ಎನ್ನುವ ಟೀಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಿದ್ದರಾಮಯ್ಯ ಕನಸನ್ನು ನುಚ್ಚು ನೂರು ಮಾಡಿತ್ತು.

ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ ಹೈಕಮಾಂಡ್ ಸೂಚನೆ ನೀಡಿದ್ದೇಕೆ ಗೊತ್ತಾ?
ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ ಹೈಕಮಾಂಡ್ ಸೂಚನೆ ನೀಡಿದ್ದೇಕೆ ಗೊತ್ತಾ?
author img

By

Published : Apr 17, 2022, 7:37 AM IST

ಬೆಂಗಳೂರು: ಅರಸು ನಂತರ ಐದು ವರ್ಷ ಪೂರ್ಣಗೊಳಿಸಿದ್ದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಪಡೆದಿದ್ದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುವುದನ್ನು ತಡೆದಿದ್ದೇ ಬಿಜೆಪಿಯ ಈ ಅಭಿಯಾನಗಳು. ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ವಿಫಲವಾಗುವಲ್ಲಿ ಬಿಜೆಪಿ ನಡೆಸಿದ 'ಸೀದಾರುಪಯ್ಯ ಅಭಿಯಾನ, 10 ಪರ್ಸಂಟೇಜ್ ಸರ್ಕಾರ' ಎನ್ನುವ ಟೀಕೆ ಸರ್ಕಾರ ಕೆಡವಲು ಹಾಗೂ ಕಾಂಗ್ರೆಸ್​ಗೆ ಜನರಲ್ಲಿ ಕೆಟ್ಟ ಭಾವನೆ ಮೂಡಲು ಕಾರಣವಾಗಿತ್ತು. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಈಗ ಇದೇ ಸ್ಥಿತಿ ಬಿಜೆಪಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪಕ್ಷ ತಮಗೂ ಕಾಂಗ್ರೆಸ್​ ಸ್ಥಿತಿ ಬಾರದಿರಲಿ ಎಂದು ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿತಾದರೂ 2018 ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಲು ವಿಫಲವಾಯಿತು. ಸಿದ್ದರಾಮಯ್ಯ ಯಶಸ್ವಿ ಆಡಳಿತ ನೀಡಿದರಾದರೂ ಸರ್ಕಾರದ ವಿರುದ್ಧ ಬಂದ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬಾರದಂತೆ ಮಾಡಿತು ಎನ್ನುವ ಮಾತುಗಳು ಕೇಳಿಬಂದಿವೆ.

ಹ್ಯೂಬ್ಲೆಟ್​ ಸದ್ದು: ಉಚಿತ ಪಡಿತರ, ಬಡವರಿಗೆ ಅತ್ಯಲ್ಪ ಹಣದಲ್ಲಿ ಊಟ,ಉಪಹಾರ ನೀಡಲು ಇಂದಿರಾ ಕ್ಯಾಂಟೀನ್ ಆರಂಭಿಸಿದರೂ ಸಿದ್ದರಾಮಯ್ಯ ಸಾಧನೆ ಮುಚ್ಚುವಂತೆ ಸದ್ದು ಮಾಡಿದ್ದು ದುಬಾರಿ ವಾಚ್ ಉಡುಗೊರೆ ಪ್ರಕರಣ. ಸ್ನೇಹಿತರೊಬ್ಬರು ನೀಡಿದ್ದ ಹ್ಯೂಬ್ಲೆಟ್​ ವಾಚ್ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಬೇಕಾಯಿತು. ಲಂಚವಾಗಿ ದುಬಾರಿ ವಾಚ್ ಅನ್ನು ಉಡುಗೊರೆ ರೂಪದಲ್ಲಿ ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿತು. ಸಿದ್ದರಾಮಯ್ಯ ವಿರುದ್ಧ ಅಭಿಯಾನವನ್ನೇ ಮಾಡಿ ತನಿಖೆಗೂ ಆಗ್ರಹಿಸಿತ್ತು. ಕಡೆಗೆ ವಿವಾದ ಕೈ ಮೀರುತ್ತಿದೆ ಎನ್ನುವಾಗ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಉಡುಗೊರೆಯಾಗಿ ಪಡೆದಿದ್ದ ದುಬಾರಿ ವಾಚ್ ಅನ್ನು ವಿಧಾನಸಭೆಗೆ ನೀಡಿ ವಿವಾದದಿಂದ ಹೊರಬರುವ ಪ್ರಯತ್ನ ನಡೆಸಿದರು. ಆದರೂ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಪದೇ ಪದೇ ದುಬಾರಿ ವಾಚ್ ಉಡುಗೊರೆ ಪಡೆದ ಪ್ರಕರಣ ಪ್ರಸ್ತಾಪಿಸುತ್ತಲೇ ರಾಜಕೀಯವಾಗಿ ಲಾಭ ಪಡೆದುಕೊಳ್ಳುವಲ್ಲಿ ಸಫಲವಾಯಿತು.

ಇದನ್ನೂ ಓದಿ: ರಾಮೋಜಿರಾವ್ ಮೊಮ್ಮಗಳ ವೈಭವೋಪೇತ ಕಲ್ಯಾಣ.. ವಿವಾಹಕ್ಕೆ ಗಣ್ಯಾತಿಗಣ್ಯರು ಸಾಕ್ಷಿ

10 ಪರ್ಸೆಂಟೇಜ್ ಸರ್ಕಾರ: ಇದಾದ ನಂತರ ಪ್ರಮುಖವಾಗಿ ಕೇಳಿಬಂದಿದ್ದು ಟೆನ್ ಪರ್ಸೆಂಟೇಜ್ ಸರ್ಕಾರ ಎನ್ನುವ ಆರೋಪ. ಮೋದಿ ಬಾಯಿಂದ ಬಂದ 10 ಪರ್ಸಂಟೇಜ್ ಸರ್ಕಾರ ಎನ್ನುವ ಟೀಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಿದ್ದರಾಮಯ್ಯ ಕನಸನ್ನು ನುಚ್ಚು ನೂರು ಮಾಡಿತ್ತು. ಇದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಸೀದಾ ರುಪಾಯಿ ಸರ್ಕಾರ. ಇಲ್ಲಿ 10 ಪರ್ಸೆಂಟ್ 20 ಪರ್ಸೆಂಟ್ ಕಮಿಷನ್ ಕೊಟ್ಟರೆ ಮಾತ್ರ ಕೆಲಸವಾಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿ ನಡೆದಿದ್ದ ರೈತ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದರು. ಎಲ್ಲಿಯವರೆಗೆ ಪರ್ಸೆಂಟೇಜ್​​ ವ್ಯವಹಾರ ಮುಗಿಯುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯದಲ್ಲಿ ಯಾವುದೇ ಕೆಲಸ ನಡೆಯಲ್ಲ. ಈ ಸೀದಾ ರುಪಾಯಿ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದ್ದರು.

40 ಪರ್ಸೆಂಟ್ ಸರ್ಕಾರ ಎನ್ನುವ ಹಣೆಪಟ್ಟಿಯನ್ನ ಕಟ್ಟಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವಲ್ಲಿ ಕಾಂಗ್ರೆಸ್ ತನ್ನ ಮೊದಲ ಯತ್ನದಲ್ಲೇ ಸಫಲವಾಗಿದೆ. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರಮುಖವಾಗಿ ಪ್ರಯೋಗಿಸುತ್ತಿರುವ ಅಸ್ತ್ರ 40 ಪರ್ಸೆಂಟ್ ಸರ್ಕಾರ ಎನ್ನುವುದಾಗಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಪರ್ಸಂಟೇಜ್ ಸರ್ಕಾರ ಎನ್ನುವ ಅಪವಾದ ದುಬಾರಿಯಾಗುತ್ತಿದೆ. ಅದರ ಜೊತೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ಕೇಳಿಬಂದ ಆರೋಪ, ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಪರಿ ನೋಡಿದ ಹೈಕಮಾಂಡ್ ನಾಯಕರು ಎಚ್ಚೆತ್ತುಕೊಂಡು ಈಶ್ವರಪ್ಪ ರಾಜೀನಾಮೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಮಿಷನ್, ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಮೇಲುಗೈ ಸಾಧಿಸಿದ್ದ ನಾವು ಈಗ ಅದೇ ಅಸ್ತ್ರವನ್ನ ಕಾಂಗ್ರೆಸ್ ಪಕ್ಷಕ್ಕೆ ಕೊಡುತ್ತಿದ್ದೇವೆ ಎನ್ನುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಹೈಕಮಾಂಡ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಸೂಚಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಆರೋಪ ಬರುತ್ತಿದ್ದಂತೆ ರಾಜೀನಾಮೆ ಪಡೆದುಕೊಂಡೆವು ಎನ್ನುವ ಹೇಳಿಕೆ ನೀಡಿ ಭ್ರಷ್ಟಾಚಾರದ ಆರೋಪದಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಸೀದಾರುಪಯ್ಯ, 10 ಪರ್ಸೆಂಟ್ ಸರ್ಕಾರ ಎಂದು ಮೋದಿ ಬಾಯಲ್ಲಿ ಹೇಳಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೈತಪ್ಪುವಂತೆ ಮಾಡಲು ಸಫಲವಾಗಿದ್ದ ಬಿಜೆಪಿ ಈಗ ಅದೇ ಅಸ್ತ್ರಕ್ಕೆ ಸಿಲುಕುವುದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ತಲೆದಂಡ ಮಾಡಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲೇ ಕೇಳಿಬರುತ್ತಿವೆ. ಇಷ್ಟೆಲ್ಲಾ ಆದರೂ ಪರ್ಸಂಟೇಜ್ ಸರ್ಕಾರ ಎನ್ನುವ ಆರೋಪ ಮುಂದಿಟ್ಟುಕೊಂಡೇ ಕಾಂಗ್ರೆಸ್ ರಾಜಕಾರಣ ಮುಂದುವರೆಸಿದ್ದರೆ,ಭ್ರಷ್ಟಾಚಾರ ಆರೋಪದಿಂದ ಪಾರಾಗಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ ಇದರಲ್ಲಿ ಯಾವ ಪಕ್ಷಕ್ಕೆ ರಾಜಕೀಯ ಲಾಭವಾಗಲಿದೆ. 2018 ರ ಫಲಿತಾಂಶ ಮರುಕಳಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.