ETV Bharat / state

ನಾಡಿನ ಜನತೆಗೆ ಗಣೇಶ ಹಬ್ಬದ ಶುಭಾಶಯ ಕೋರಿದ ಡಿಕೆಶಿ-ಸಲೀಂ ಅಹಮದ್​​

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಿಡಿಯೋ ಸಂದೇಶದ ಮೂಲಕ ರಾಜ್ಯದ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.

D.K.Shivkumar
ಹಬ್ಬಕ್ಕೆ ಶುಭಾಶಯ ಕೋರಿ ವಿಡಿಯೋ ಸಂದೇಶ
author img

By

Published : Aug 22, 2020, 12:57 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಡಿನ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಎಂದಿದ್ದಾರೆ.

ಹಬ್ಬಕ್ಕೆ ಶುಭಾಶಯ ಕೋರಿ ವಿಡಿಯೋ ಸಂದೇಶ

ಈ ದೇಶ ಹಾಗೂ ಪ್ರಪಂಚದಲ್ಲಿ ನಾವು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಸಂದರ್ಭ ನಮ್ಮನ್ನು ಕಾಪಾಡುವ ಶ್ರೇಷ್ಠ ಹಾಗೂ ಅಚ್ಚುಮೆಚ್ಚಿನ ದೈವ ಈ ವಿನಾಯಕ. ಈ ವಿಘ್ನನಿವಾರಕ ನಮಗೆ, ನಿಮಗೆಲ್ಲಾ ಶಕ್ತಿ ಕೊಡಲಿ. ಈ ರಾಜ್ಯ, ದೇಶ, ಪ್ರಪಂಚವನ್ನು ಆರೋಗ್ಯವಾಗಿ ಹಾಗೂ ಸುಭಿಕ್ಷವಾಗಿಡಲಿ ಎಂದು ನಾನು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ವಿಜಯಕ್ಕೆ ಕೂಡ ಕಾರಣ ಇದೇ ವಿನಾಯಕ. ಈ ಸಂದರ್ಭ ಜನರಿಗೆ ದೇವರು ವಿಜಯವನ್ನು ದೊರಕಿಸಿಕೊಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕೂಡ ತಮ್ಮ ವಿಡಿಯೋ ಸಂದೇಶದಲ್ಲಿ ಹಬ್ಬದ ಶುಭಾಶಯ ಕೋರಿದ್ದು, ರಾಜ್ಯದ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬ ಜನರಲ್ಲಿ ಶಾಂತಿ ನೆಮ್ಮದಿ ಹಾಗೂ ಅಭಿವೃದ್ಧಿ ತರಲಿ ಎಂದು ಹಾರೈಸುತ್ತೇನೆ. ಸಮಾಜಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ತೊಲಗಲಿ ಎಂದು ಈ ಸಂದರ್ಭ ನಾವು-ನೀವೆಲ್ಲಾ ಪ್ರಾರ್ಥನೆ ಮಾಡೋಣ. ಈ ನಾಡಿನಲ್ಲಿ ಸಮೃದ್ಧಿ ಹಾಗೂ ಕೋಮು ಸಾಮರಸ್ಯ ಉಂಟಾಗಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.