ETV Bharat / state

ರೈತರಿಂದ ತರಕಾರಿ ಖರೀದಿಸಿ: ಜನಪ್ರತಿನಿಧಿಗಳಿಗೆ ಡಿಕೆಶಿ ಮನವಿ - corona latest news

ರಾಜ್ಯದ ಎಲ್ಲ ಸಂಸದರು, ಶಾಸಕರುಗಳು, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ರೈತರು ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

DK shivakumar request to all party leaders to buy vegetables from farmers
ಕೊರೊನಾ: ರೈತರಿಂದ ತರಕಾರಿ ಕೊಳ್ಳುವಂತೆ ಜನಪ್ರತಿನಿಧಿಗಳಿಗೆ ಡಿ.ಕೆ.ಶಿವಕುಮಾರ್ ಮನವಿ
author img

By

Published : Apr 11, 2020, 5:08 PM IST

ಬೆಂಗಳೂರು: ರೈತರ ಉತ್ಪನ್ನ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಲು ಜನಪ್ರತಿನಿಧಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರೈತರು ತಮ್ಮ ಹೊಲಗಳಲ್ಲಿ ಬೆಳೆದಿರುವ ಸೊಪ್ಪು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸದ ಪರಿಣಾಮ ಬೆಳಗಳೆಲ್ಲಾ ಹಾಳಾಗುತ್ತಿವೆ.

ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಂಸದರು, ಶಾಸಕರುಗಳು, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ರೈತರು ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

DK shivakumar request to all party leaders to buy vegetables from farmers
ಕೊರೊನಾ: ರೈತರಿಂದ ತರಕಾರಿ ಖರೀದಿಸುವಂತೆ ಜನಪ್ರತಿನಿಧಿಗಳಿಗೆ ಡಿ.ಕೆ.ಶಿವಕುಮಾರ್ ಮನವಿ

ಇದು ಪಕ್ಷಾತೀತವಾಗಿ ನಡೆಯಬೇಕು. ಎಲ್ಲ ಪಕ್ಷದವರೂ ಕೈ ಜೋಡಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಹುಡುಕಬಾರದು. ರೈತರ ಸೇವೆಗೆ ನಾವೆಲ್ಲರೂ ಬದ್ಧರಾಗಿರಬೇಕು.ಈಗಾಗಲೇ ನಮ್ಮ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೂ ಬಹುತೇಕರು ಬಡವರಿಗೆ, ಹಸಿದವರಿಗೆ ಆಹಾರ ವಿತರಿಸುತ್ತಿದ್ದಾರೆ. ಪರಿಹಾರ ನಿಧಿಗೂ ಹಣ ನೀಡುತ್ತಿದ್ದಾರೆ. ಅದು ಸರಿ, ಆದರೆ ನಮ್ಮ ರೈತರ ಬೆಳ ಅವರ ಹೊಲಗಳಲ್ಲೇ ಕೊಳೆತು ಹೋಗುತ್ತಿದೆ. ಅವರ ಶ್ರಮ ವ್ಯರ್ಥವಾಗುತ್ತಿದೆ. ಇದಕ್ಕೆ ನಾವು-ನೀವೆಲ್ಲ ಅವಕಾಶ ನೀಡಬಾರದು. ಈ ರಾಜ್ಯ ಹಾಗೂ ದೇಶ ನಿಂತಿರುವುದೇ ರೈತನ ಮೇಲೆ. ರೈತ ಈ ದೇಶದ ಬೆನ್ನೆಲುಬು. ಈ ಸಂಕಷ್ಟದ ಸಂದರ್ಭದಲ್ಲಿ ನಾವು ರೈತರಿಗೆ ಆಸರೆಯಾಗದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಹಸಿವಿನಿಂದ ಪರದಾಡುವ ಪರಿಸ್ಥಿತಿ ಎದುರಾಗಲಿದೆ.

ಹಾಗಾಗಿ ಈಗ ರೈತರ ನೆರವಿಗೆ ಧಾವಿಸಿ, ಆತನ ಹಸಿವನ್ನೂ ನೀಗಿಸುವ ಮಹತ್ತರ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ ಎಂದಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರನ್ನು ಉಳಿಸಿದಂತಾಗುತ್ತದೆ. ಅದೇ ಕಾಲಕ್ಕೆ ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಅವರ ಹಸಿವನ್ನೂ ನೀಗಿಸಿದಂತಾಗುತ್ತದೆ.

ಬೆಳೆಗಳು ಹೊಲದಲ್ಲೇ ಕೊಳೆಯುವುದನ್ನು ತಪ್ಪಿಸಿ, ಅವುಗಳ ಸದ್ಬಳಕೆ ಮಾಡಿಕೊಂಡಂತೆಯೂ ಆಗುತ್ತದೆ. ಇದು ಕೊರೊನಾ ವಿರುದ್ಧದ ಹೋರಾಟದ ಪ್ರಮುಖ ಭಾಗವಾಗಬೇಕಿದೆ. ರೈತರು ಸರ್ಕಾರದಿಂದ ನರವು ನಿರೀಕ್ಷಿಸಿ, ಅದು ಸಕಾಲಕ್ಕೆ ಸಿಗದೆ ಕಂಗಲಾಗಿದ್ದಾರೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಈ ಸಂದರ್ಭದಲ್ಲಿ ತಡ ಮಾಡದೇ ನಾವು-ನೀವೆಲ್ಲರೂ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.