ETV Bharat / state

ಮೈಸೂರು ಮೇಯರ್ ಆಯ್ಕೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ: ಡಿಕೆಶಿ ಹೇಳಿದ್ದೇನು? - ಡಿಕೆ ಶಿವಕುಮಾರ್​ ಲೇಟೆಸ್ಟ್ ನ್ಯೂಸ್

ಮೈಸೂರು ಮಹಾನಗರ ಪಾಲಿಕೆ ಮೇಯರ್​ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದದ್ದು, ಮುಂದಿನ ಫೆಬ್ರವರಿ 23ರವರೆಗೆ ಸುನಂದಾ ಮೇಯರ್ ಸ್ಥಾನದಲ್ಲಿ ಇರುತ್ತಾರೆ. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

DK Shivakumar
ಡಿಕೆ ಶಿವಕುಮಾರ್
author img

By

Published : Aug 25, 2021, 7:24 PM IST

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಗೆ ಮೇಯರ್ ಆಯ್ಕೆ ವಿಚಾರದಲ್ಲಿ ಜೆಡಿಎಸ್​​ನವರು ಬಿಜೆಪಿ ಜೊತೆ ಹೋಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಅವರವರೇ ಸೇರಿ ಮಾಡಿದ್ದಾರೆ. ಲೋಕಲ್ ಬಾಡಿಗೆ ಸಂಬಂಧಿಸಿದಂತೆ ಆಯಾ ಪಕ್ಷ ತೀರ್ಮಾನ ಮಾಡಿವೆ. ನಾವು ಕೂಡ ಮೇಯರ್ ಸ್ಥಾನ ಬಿಟ್ಟು ಕೊಡಿ ಎಂದು ಹೇಳಿದ್ದೆವು. ಮುಂದೆ ಜೆಡಿಎಸ್‌ಗೆ ಸಹಾಯ ಮಾಡುತ್ತೇವೆ ಎಂದು ಮಾತನಾಡಿದ್ದೆವು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಬಗ್ಗೆ ಮಾತನಾಡಿದ್ದೆವು. ಜೆಡಿಎಸ್‌ನವರಿಗೆ ಹೊಂದಾಣಿಕೆ ಬಗ್ಗೆ ಕೇಳಬೇಕು ಎಂದರು. ಇದೇ ವೇಳೆ ಕಾಂಗ್ರೆಸ್ ಫ್ಯೂಸ್ ಕಿತ್ತಾಕಿದ್ದೇವೆ ಎಂಬ ಹೆಚ್​​​​ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದರು.

ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಒಲಿದಿದೆ. ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಆಯುಕ್ತರ ಅಧಿಕೃತ ಘೋಷಣೆಯಾಗಿದ್ದು, ಮುಂದಿನ‌ ಫೆಬ್ರವರಿ 23ರವರೆಗೆ ಸುನಂದಾ ಮೇಯರ್ ಸ್ಥಾನದಲ್ಲಿ ಇರುತ್ತಾರೆ.

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಆಡಳಿತದಿಂದ ಬಿಜೆಪಿಗೆ ಮೇಯರ್ ಪಟ್ಟ ತಪ್ಪಿತ್ತು. ಅತೀ ಹೆಚ್ಚು ಸದಸ್ಯರು ಗೆದ್ದರೂ ಮೇಯರ್ ಸ್ಥಾನ‌ ಸಿಕ್ಕಿರಲಿಲ್ಲ. ಆದರೆ, ನಾಲ್ಕೂವರೆ ತಿಂಗಳ ಅವಧಿಗೆ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದಿದೆ. ಮುಂದಿನ ಎರಡು ಅವಧಿಗೂ ಜೆಡಿಎಸ್​​ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಬಿಜೆಪಿ ಒಪ್ಪಂದ ಮಾಡಿಕೊಂಡಿದೆ.

ಓದಿ: ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.