ETV Bharat / state

ರಾಜ್ಯದಲ್ಲಿ ಸೋಲಿನ ಹೊಣೆ ಹೊತ್ತು ಡಿಕೆಶಿ ರಾಜೀನಾಮೆ ನೀಡಬೇಕಿತ್ತು: ಈಶ್ವರಪ್ಪ

author img

By

Published : Dec 8, 2020, 12:55 PM IST

ತೆಲಂಗಾಣ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ‌. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಸಹ ರಾಜೀನಾಮೆ ನೀಡಬೇಕಿತ್ತು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

banglore
ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ‌ ನೈತಿಕ ಹೊಣೆ ಹೊತ್ತು ಡಿ.ಕೆ. ಶಿವಕುಮಾರ್ ಕೂಡ ರಾಜೀನಾಮೆ ನೀಡಬೇಕಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಡಿಕೆಶಿ ರಾಜೀನಾಮೆಗೆ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದೆ. ಪ್ರಧಾನಿ‌ ಮೋದಿ‌ ರೈತರ ಪರ ಇದ್ದಾರೆ. ರೈತರ ಪರ ಇರೋದಕ್ಕೆ ಹೈದರಾಬಾದ್​ನಲ್ಲಿ ಮೊನ್ನೆ ಗೆದ್ದಿರೋದು. ದೇಶದಲ್ಲಿ ಮೋದಿ ಪ್ರಭಾವ ಇದ್ದೇ ಇದೆ. ಕಾಂಗ್ರೆಸ್​ಗೆ ಅಸ್ತಿತ್ವ ಎಲ್ಲಿದೆ?. ಮೊನ್ನೆ ಮೊನ್ನೆ ಮುಕ್ತಾಯ ಆದ ಪರಿಷತ್ ಚುನಾವಣೆ, ಶಿರಾ ಆರ್​​ಆರ್​ ನಗರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ‌. ಅದೇ ರೀತಿ ಇಲ್ಲಿನ ಸೋಲಿನ ಹೊಣೆ ಹೊತ್ತು ಡಿಕೆಶಿ ರಾಜೀನಾಮೆ ನೀಡಬೇಕಿತ್ತು ಎಂದರು.

ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ: ಮುಖ್ಯಮಂತ್ರಿ ಚಂದ್ರು

ಶಿರಾದಲ್ಲಿ ಕಾಂಗ್ರೆಸ್​ನ್ನು ಸೋಲಿಸಿದ್ದು ಡಿ ಕೆ ಶಿವಕುಮಾರ್. ಆರ್​​ಆರ್​ ನಗರದಲ್ಲಿ ಕಾಂಗ್ರೆಸ್​ನ್ನು ಸೋಲಿಸಿದ್ದು ಸಿದ್ದರಾಮಯ್ಯ. ಅವರ ಗುಂಪುಗಾರಿಕೆಯಿಂದ ಸೋತಿದ್ದಾರೆ ಎಂದು ತಿಳಿಸಿದರು. ಉಪ ಚುನಾವಣೆಗಳು ಮುಂದಿನ ಎಲೆಕ್ಷನ್​ಗಳಿಗೆ ದಿಕ್ಸೂಚಿ ಎಂದಿದ್ದರು. 4 ಎಂಎಲ್​ಸಿ ಸ್ಥಾನಗಳಲ್ಲೂ ಒಂದೂ ಗೆಲ್ಲಲಿಲ್ಲ. ಅವರ ಪ್ರಕಾರವೇ ಇನ್ಮುಂದೆ ಕಾಂಗ್ರೆಸ್ ಗೆಲ್ಲಲ್ಲ ಅಂತಾಯ್ತು. ಹೀಗಾಗಿ ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಡೋದು ಒಳ್ಳೇದು ಎಂದು ಈಶ್ವರಪ್ಪ ಆಗ್ರಹಿಸಿದರು.

ಬಿಜೆಪಿ - ಕಾಂಗ್ರೆಸ್ ನಡುವೆ ಕ್ರಾಸ್ ಬ್ರೀಡ್ ವಾರ್ ವಿಚಾರವಾಗಿ ತೆಲೆಕೆಟ್ಟೋರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ ಎಂದಿದ್ದ ಡಿಕೆಶಿ ಹೇಳಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಅವರು ಸರಿಯಾಗೇ ಹೇಳಿದ್ದಾರೆ. ಅವರಿಗೆ ತಲೆ ಸರಿಯಿಲ್ಲ ಅಂತ ಅವರೇ ಹೇಳಿದ್ದಾರೆ ಎಂದು ಕುಟುಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.