ETV Bharat / state

ಡಿಸಿಎಂ ಪರಮೇಶ್ವರ್ ಭೇಟಿ ಮಾಡಿ ಚರ್ಚಿಸಿದ ದಿನೇಶ್‍ ಗುಂಡೂರಾವ್

ಬೆಂಗಳೂರಿನ ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಪರಮೇಶ್ವರ್​ ಅವರನ್ನ ಭೇಟಿ ಮಾಡಿದ ದಿನೇಶ್‍ ಗುಂಡೂರಾವ್‍, ನಾಳೆ ಕಲಬುರುಗಿಗೆ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಆಗಮಿಸಲಿದ್ದು, ಇದರ ಜತೆ ಮುಂಬರುವ ಲೋಕಸಭೆ ಚುನಾವಣೆಗೆ ಕೈಗೊಳ್ಳಬಹುದಾದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.

author img

By

Published : Mar 17, 2019, 1:44 PM IST

ದಿನೇಶ್‍ ಗುಂಡೂರಾವ್

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆ ಹಿನ್ನೆಲೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಇಂದು ಡಿಸಿಎಂ ಡಾ. ಜಿ. ಪರಮೇಶ್ವರ್‍ ಅವರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಪರಮೇಶ್ವರ್​ ಅವರನ್ನು ಭೇಟಿ ಮಾಡಿದ ದಿನೇಶ್‍ ಗುಂಡೂರಾವ್‍, ನಾಳೆ ಕಲಬುರುಗಿಗೆ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಆಗಮಿಸಲಿದ್ದು, ಇದರ ಜತೆ ಮುಂಬರುವ ಲೋಕಸಭೆ ಚುನಾವಣೆಗೆ ಕೈಗೊಳ್ಳಬಹುದಾದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.

ಡಿಸಿಎಂ ಪರಮೇಶ್ವರ್ ಭೇಟಿ ಮಾಡಿದ ದಿನೇಶ್‍ ಗುಂಡೂರಾವ್

ತುಮಕೂರು ಚರ್ಚೆ:
ತುಮಕೂರು ಜೆಡಿಎಸ್ ತೆಕ್ಕೆಗೆ ಹೋಗಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರ ಮೇಲೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮುನಿಸು ಮುಂದುವರಿದಿದ್ದು ಇದನ್ನು ಶಮನಗೊಳಿಸುವ ಉದ್ದೇಶದಿಂದ ದಿನೇಶ್‍ ಗುಂಡೂರಾವ್ ಆಗಮಿಸಿದ್ದರು ಎನ್ನಲಾಗಿದೆ.

ಭೇಟಿ ಸಂದರ್ಭ ದಿನೇಶ್ ಗುಂಡೂರಾವ್ ಅವರು ತುಮಕೂರು ಸಂಸದ ಮುದ್ದಹನುಮೇಗೌಡರಿಗೆ ಸೂಕ್ತ ಸ್ಥಾನಮಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ತುಮಕೂರು ಮರಳಿ ಸಿಗುವ ಸಾಧ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಪರಮೇಶ್ವರ್ ಅವರನ್ನು ಸಮಾಧಾನಿಸುವ ಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಯ ಪ್ರಯತ್ನವಾಗಿ ಮುದ್ದಹನುಮೇಗೌಡರನ್ನು ದೆಹಲಿಗೆ ಕಳಿಸಿರುವ ಪರಮೇಶ್ವರ್, ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡುವಂತೆ ಸೂಚಿಸಿದ್ದಾರೆ.

ಶನಿವಾರ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಮುದ್ದಹನುಮೇಗೌಡ ಮಾತುಕತೆ ನಡೆಸಿದ್ದಾರೆ. ಆದರೆ ಜೆಡಿಎಸ್‍ ಪಾಲಾಗಿರುವ ತುಮಕೂರು ಲೋಕಸಭೆ ಕ್ಷೇತ್ರ ಮರಳಿ ಕಾಂಗ್ರೆಸ್‍ಗೆ ಸಿಗುವ ಸಾಧ್ಯತೆ ಕ್ಷೀಣಿಸಿದ್ದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಅರ್ಥ ಕಲ್ಪಿಸುವುದು ಬೇಡ:

ಡಿಸಿಎಂ ಪರಮೇಶ್ವರ್ ಭೇಟಿ ಬಳಿಕ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಮೇಶ್ವರ್ ನಮ್ಮ ನಾಯಕರು. ಚುನಾವಣಾ ಸಿದ್ಧತೆ ಸಂಬಂಧ ಚರ್ಚೆಗೆ ಬಂದಿದ್ದೇನೆ. ಪರಮೇಶ್ವರ್ ಇಡೀ ರಾಜ್ಯದ ನಾಯಕರು. ಪರಮೇಶ್ವರ್ ತುಮಕೂರಿಗೆ ಮಾತ್ರ ನಾಯಕರಲ್ಲ.

ತುಮಕೂರು ಕುರಿತು ಎರಡೂ ಪಕ್ಷದ ನಾಯಕರು ಕೂತು ಚರ್ಚೆ ಮಾಡ್ತೇವೆ. ಕೊನೆಯ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ಹೇಳಿದರು.
ನಾವೆಲ್ಲಾ ಮುದ್ದ ಹನುಮೇಗೌಡರ ಪರ ಇದ್ದೇವೆ. ಮುದ್ದೇ ಹನುಮೇಗೌಡರಿಗೆ ಅನ್ಯಾಯ ಆಗಿದೆ. ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಪಡ್ತಿದ್ದೇವೆ.

ನಾನೂ ಕೂಡ ದೇವೇಗೌಡರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಪರಮೇಶ್ವರ್ ಒಬ್ಬರೇ ತುಮಕೂರು ಮರಳಿ ಪಡೆಯಲು ಪ್ರಯತ್ನ ಪಡ್ತಿಲ್ಲ. ನಾವೆಲ್ಲ ಪರಮೇಶ್ವರ್ ಜೊತೆ ಸೇರಿ ಪ್ರಯತ್ನ ಪಡ್ತಿದ್ದೇವೆ. ಇನ್ನೂ ಸಿಇಸಿ ಸಭೆ ಆಗಿಲ್ಲ ಎಂದರು.

ರಾಹುಲ್‍ ಸ್ಪರ್ಧೆ ವಿಚಾರ:

ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ವಿಚಾರ ಪ್ರಸ್ತಾಪಿಸಿ, ರಾಹುಲ್ ಗಾಂಧಿ ನಮ್ಮ ರಾಜ್ಯದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡ್ಕೊಂಡಿದ್ದೇವೆ. ನಾಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಿದ್ದಾರೆ. ನಾಳೆಯೂ ಈ ಕುರಿತು ರಾಹುಲ್ ಗಾಂಧಿಯವ್ರ ಜೊತೆ ಚರ್ಚಿಸ್ತೇವೆ. ರಾಹುಲ್ ಗಾಂಧಿಯವ್ರು ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಲ್ಲೇ ಸ್ಪರ್ಧೆ ಮಾಡಲಿ. ನಾವೆಲ್ಲ ಒಟ್ಟಾಗಿ ಶ್ರಮಿಸಿ ಗೆಲ್ಲಿಸ್ತೇವೆ. ರಾಹುಲ್ ಗಾಂಧಿಯವ್ರು ಸ್ಪರ್ಧಿಸಲು ಒಪ್ಪಿದ ಬಳಿಕ ಕ್ಷೇತ್ರದ ಆಯ್ಕೆ ಮಾಡುತ್ತೇವೆ. ರಾಜ್ಯದಲ್ಲಿ ರಾಹುಲ್ ಗಾಂಧಿ ಅವರಿಗೆ ಮೂರು-ನಾಲ್ಕು ಕ್ಷೇತ್ರಗಳಿವೆ ಎಂದು ವಿವರಿಸಿದರು.

ಸಿದ್ದರಾಮಯ್ಯಗೆ ಎಚ್ಚರಿಕೆ:
ಸಿದ್ದರಾಮಯ್ಯ ಮೈಸೂರು ಪ್ರಚಾರಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎನ್ನುವ ವಿಚಾರ ಸಂಬಂಧ ಸಿದ್ದರಾಮಯ್ಯಗೆ ಪರೋಕ್ಷವಾಗಿ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಈ ರೀತಿ ಏನು ಇಲ್ಲ. ಎಲ್ಲರೂ ಏನೇನು ಜವಾಬ್ದಾರಿ ಇದೆ ಅದನ್ನು ‌ನಿರ್ವಹಣೆ ಮಾಡ್ತಿದ್ದಾರೆ.

ನಾವು ಒಗ್ಗಟ್ಟಿನಿಂದ ಹೋಗಬೇಕಾಗುತ್ತೆ. ಯಾರು ಕೂಡ ಒಂದೊಂದು ಕ್ಚೇತ್ರಕ್ಕೆ ಸೀಮಿತ ಅಲ್ಲ. ಸಿದ್ದರಾಮಯ್ಯ ಕೂಡ ಒಂದು ಕ್ಷೇತ್ರಕ್ಕೆ ಸೀಮಿತ ಅಲ್ಲ. ಪರಮೇಶ್ವರ್ ಕೂಡ ಒಂದು ಕ್ಷೇತ್ರಕ್ಕೆ ಸೀಮಿತ ಅಲ್ಲ. ನಮ್ಮ ವೈಯಕ್ತಿಕ ತೀರ್ಮಾನಗಳು ಏನೇ ಇರಬಹುದು. ಯಾವುದೋ ವಿಷಯದಲ್ಲಿ ನಮಗೆ ನೋವು ಆಗಿರಬಹುದು. ಆದರೆ ಹೈಕಮಾಂಡ್ ತೀರ್ಮಾನ ಆದ ಮೇಲೆ ನಾವು ಒಪ್ಕೊಂಡು ಕೆಲಸ ಮಾಡಬೇಕಾಗುತ್ತೆ ಎಂದಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.