ETV Bharat / state

ಲೋಕಸಭೆಯಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ಸೋಲಿಗೆ ಕಾರಣವಾಯಿತು: ದಿನೇಶ್ ಗುಂಡೂರಾವ್​​ - Former KPCC president Dinesh Gundurao

ಲೋಕಸಭೆಯಲ್ಲಿ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೆ ನಾವು ಏಕಾಂಗಿಯಾಗಿ ತೆರಳಿದ್ದರೆ ಹೆಚ್ಚಿನ ಸ್ಥಾನ ಗೆಲ್ಲಬಹುದಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ತೆರಳಿದ್ದರಿಂದ ಡಿ.ಕೆ.ಸುರೇಶ್ ಹೊರತುಪಡಿಸಿ ಬೇರೆಲ್ಲಾ ಸದಸ್ಯರು ಸೋಲಬೇಕಾಯಿತು- ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

Dinesh Gundurao speaks at  DK Shivakumar as Presidency function
ಇದೊಂದು ತಾಂತ್ರಿಕ ಕಾರ್ಯಕ್ರಮ ಅಷ್ಟೇ, ಡಿಕೆಶಿ ಆಗಲೇ ಅಧಿಕಾರವಹಿಸಿಕೊಂಡಾಗಿದೆ: ದಿನೇಶ್ ಗುಂಡೂರಾವ್​​
author img

By

Published : Jul 2, 2020, 1:19 PM IST

Updated : Jul 2, 2020, 1:29 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡು ಆಗಿದೆ. ಇದು ಕೇವಲ ಔಪಚಾರಿಕ ಕಾರ್ಯಕ್ರಮ ಅಷ್ಟೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಚೇರಿಯಲ್ಲಿ ನೂತನ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. ಸಾಕಷ್ಟು ಉಪ ಚುನಾವಣೆಗಳನ್ನು ನಾವು ಗೆದ್ದುಕೊಂಡೆವು ಕೂಡ. ಆದರೆ, ಸ್ಥಳೀಯ ಸಂಸ್ಥೆಗಳನ್ನು ಗೆದ್ದರೂ ನಮಗೆ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿದ್ದವು ಎಂದರು.

ಡಿಕೆಶಿ ಪದಗ್ರಹಣ ಸಮಾರಂಭದಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿದರು.​​

'ಜೆಡಿಎಸ್‌ನಿಂದಾಗಿ ಲೋಕಸಭೆಯಲ್ಲಿ ಸೋಲಬೇಕಾಯ್ತು'

ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೆ ನಾವು ಏಕಾಂಗಿಯಾಗಿ ತೆರಳಿದ್ದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ತೆರಳಿದ್ದರಿಂದ ಡಿ.ಕೆ.ಸುರೇಶ್ ಹೊರತುಪಡಿಸಿ ಬೇರೆಲ್ಲಾ ಸದಸ್ಯರು ಸೋಲಬೇಕಾಯಿತು. ಇದಾದ ಬಳಿಕ ನಮ್ಮ ಶಾಸಕರೇ ಕೆಲವರು ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಜೊತೆ ಕೈಜೋಡಿಸಿ ಮೈತ್ರಿ ಸರ್ಕಾರ ಬೀಳಲು ಕಾರಣರಾದರು. ನಮ್ಮ ಪಕ್ಷದ ಪ್ರತಿಯೊಬ್ಬ ನಾಯಕರು ಹಾಗೂ ಮುಖಂಡರು ಪಕ್ಷಕ್ಕೆ ಸಹಕಾರ ನೀಡಿ ಕಾಂಗ್ರೆಸ್‌ನ ಹೆಚ್ಚು ಸದಸ್ಯರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡಿದರು .

ಈ ಸಂದರ್ಭ ನಡೆದ ಉಪಚುನಾವಣೆಯಲ್ಲಿ ಕೂಡ ಹೆಚ್ಚಿನ ಸ್ಥಾನವನ್ನು ನಾವು ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆ ಸೋಲಿನ ಸಂದರ್ಭದಲ್ಲಿಯೇ ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದೆ. ಆದ್ರೆ ಬೇರೆ ಬೇರೆ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿರಲಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಕೂಡ ಹಿನ್ನೆಡೆಯಾಗಿದ್ದರಿಂದ ರಾಜೀನಾಮೆ ಸಲ್ಲಿಸಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

'ಡಿಕೆಶಿಗೆ ಸ್ಪಷ್ಟ ಗುರಿ ಇದೆ'

ಮುಂದುವರೆದು ಮಾತನಾಡಿದ ಅವರು, ನಾನು ರಾಜೀನಾಮೆ ನೀಡಿ ಆಗಲೇ ಏಳು ತಿಂಗಳಾಗಿದೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು 3 ತಿಂಗಳು ಕಳೆದಿದೆ. ಇವರು ಸಾಕಷ್ಟು ಉತ್ತಮ ಕೆಲಸಗಳನ್ನು ಈಗಾಗಲೇ ಮಾಡಿದ್ದಾರೆ. ಪಕ್ಷಕ್ಕೆ ತನು-ಮನ-ಧನ ಶಕ್ತಿ ತುಂಬುವ ಸಾಮರ್ಥ್ಯ ಡಿಕೆಶಿಗೆ ಇದೆ. ಪಕ್ಷ ಕಟ್ಟುವ ಸಾಮರ್ಥ್ಯ ಹಾಗೂ ಬಲ ಅವರಿಗಿದೆ. ನಮ್ಮ ಪಕ್ಷದ ಅಧ್ಯಕ್ಷರಾದ ಕಡಿಮೆ ಅವಧಿಯಲ್ಲಿಯೇ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಅವರಿಗೆ ಒಂದು ಸ್ಪಷ್ಟ ಗುರಿ ಇದೆ ಎನ್ನುವ ಅರಿವು ನನಗಿದೆ. ಕಾಂಗ್ರೆಸ್ ಪಕ್ಷ ಒಂದಾಗಿ ಮುನ್ನಡೆಯಬೇಕು. ನಾವು ಇನ್ನಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ. ಪಕ್ಷದ ಪ್ರತಿಯೊಬ್ಬ ನಾಯಕರಲ್ಲಿ ಸಾಮರ್ಥ್ಯ ,ಪ್ರತಿಭೆ ಇದೆ. ಅದನ್ನು ಬಳಸಿಕೊಂಡು ಮುನ್ನಡೆಯೋಣ ಎಂದರು.

ನಮ್ಮ ನಾಯಕರೆಲ್ಲ ಒಂದಾಗಬೇಕು. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು. ವಿಪರೀತ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿ ಸರ್ಕಾರದ ವಿರುದ್ಧ ಹೋರಾಡಬೇಕು. ಶಿವಕುಮಾರ್ ಸಾಮರ್ಥ್ಯ ಅರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅಧಿಕಾರ ಕೊಟ್ಟಿದ್ದಾರೆ. ಇದನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅಭಿನಂದನೆ:

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ದೂರವಾಣಿ ಕರೆ ಮೂಲಕ ಶಿವಕುಮಾರ್ ಅವರಿಗೆ ಹಾಗೂ ಕಾರ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭ ತಮಗೆ ಸೋನಿಯಾ ಗಾಂಧಿ ಕೂಡ ಶುಭಾಶಯ ಸಲ್ಲಿಸಿದ್ದಾರೆ ಎಂಬ ವಿವರ ನೀಡಿದ ರಾಹುಲ್ ಗಾಂಧಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದುರಾಡಳಿತವನ್ನು ಖಂಡಿಸುವ ನಿಟ್ಟಿನಲ್ಲಿ ಹಾಗೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಸಹಕಾರ ಇರಲಿ ಎಂದು ಆಶಿಸಿದರು.

ಇದಾದ ಬಳಿಕ ಮಾಜಿ ರಾಜ್ಯಸಭಾ ಸದಸ್ಯ ರಹಮಾನ್ ಖಾನ್ ಸಂವಿಧಾನದ ಪೀಠಿಕೆಯನ್ನು ಓದಿದರು.

Last Updated : Jul 2, 2020, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.