ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಾಕವಾಗಿ ಹರಡುತ್ತಿದ್ದು ರಾಜ್ಯ ಪೊಲೀಸ್ ಇಲಾಖೆಯ ಬಹುತೇಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲುತ್ತಿದೆ. ಆದ್ದರಿಂದ ಇನ್ಮುಂದೆ ಪೊಲೀಸ್ ಬಹುತೇಕ ವೆರಿಫಿಕೇಷನ್ಗಳು ಆನ್ಲೈನ್ನಲ್ಲಿ ನಡೆಯಲಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.
ಸೇವಾ ಸಿಂಧು ವೆಬ್‌ಸೈಟ್ ಮೂಲಕ ವಿದೇಶ ಪ್ರಯಾಣಕ್ಕೆ ವೀಸಾ ವೆರಿಫಿಕೇಷನ್, ಕೆಲಸದ ನಿಮಿತ್ತ, ಕಂಪನಿಗಳ ಪೊಲೀಸ್ ವೆರಿಫಿಕೇಷನ್ ಸೇರಿ 8 ವಿವಿಧ ವೆರಿಫಿಕೇಷನ್ಗಳು ಆನ್ಲೈನ್ನಲ್ಲಿ ಅರ್ಜಿ ಲಭ್ಯವಾಗಲಿದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಥವಾ ಪೊಲೀಸ್ ಕ್ವಾಟ್ರಸ್ಗಳಿಗೆ ಹೋಗುವ ಅವಶ್ಯಕತೆ ಇಲ್ಲವೆಂದು ಈ ಕುರಿತು ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
-
Turning challenges during Covid 19 into opportunities... eight types of police verifications can be applied on Seva Sindhu Portal. No need to physically visit to police headquarters. Apply online, pay online and receive digitally signed certificate online!! pic.twitter.com/NvZ3c25Kei
— DGP KARNATAKA (@DgpKarnataka) July 24, 2020 " class="align-text-top noRightClick twitterSection" data="
">Turning challenges during Covid 19 into opportunities... eight types of police verifications can be applied on Seva Sindhu Portal. No need to physically visit to police headquarters. Apply online, pay online and receive digitally signed certificate online!! pic.twitter.com/NvZ3c25Kei
— DGP KARNATAKA (@DgpKarnataka) July 24, 2020Turning challenges during Covid 19 into opportunities... eight types of police verifications can be applied on Seva Sindhu Portal. No need to physically visit to police headquarters. Apply online, pay online and receive digitally signed certificate online!! pic.twitter.com/NvZ3c25Kei
— DGP KARNATAKA (@DgpKarnataka) July 24, 2020
ಕೊರೊನಾ ಸರಪಳಿ ಮುರಿಯಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಾಗೆ ಸಾರ್ವಜನಿಕರಿಗೆ ಇದು ಬಹಳಷ್ಟು ಉಪಯೋಗಕರವಾಗಿದೆ. ಯಾಕಂದ್ರೆ, ಈ ಕೊರೊನಾ ಸಮಯದಲ್ಲಿ ಅಲೆದಾಡುವ ಪರಿಸ್ಥಿತಿ ಇರುವುದಿಲ್ಲ. ಬದಲಾಗಿ ಕೂತಲ್ಲೇ ಆನ್‌ಲೈನ್ ವೆರಿಫೈ ಮಾಡಿಕೊಳ್ಳಬಹುದು.