ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಕುರಿತು ಶಾಸಕರ ಭವನದಲ್ಲಿನ ಕೊಠಡಿ ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಘಟನೆ ಇಂದು ನಡೆದಿದೆ.
ಯತ್ನಾಳ್ ಅವರನ್ನು ಬಿಲ್ ಲಾಡೆನ್ಗೆ ಹೋಲಿಸಿ ಭಿತ್ತಿಪತ್ರ ಅಂಟಿಸಲಾಗಿದೆ. ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಿಡಿಗೇಡಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ಶಾಸಕರ ಭವನ 5ನೇ ಬ್ಲಾಕ್ ನಲ್ಲಿನ ಯತ್ನಾಳ್ ಕೊಠಡಿ ಸಂಖ್ಯೆ 2001ರಲ್ಲಿ ಈ ರೀತಿ ವಿಕೃತಿ ಮೆರೆಯಲಾಗಿದೆ.
ಎರಡು ದಿನಗಳ ಹಿಂದೆ ಯತ್ನಾಳ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರು. ರಾಹುಲ್ ಗಾಂಧಿ ಯಾರಿಗೆ ಜನಿಸಿದ್ದಾರೆ ಗೊತ್ತಿಲ್ಲ. ಅವನು ಹಿಂದೂನು ಅಲ್ಲ. ಕ್ರಿಶ್ಚಿಯನ್ನೂ ಅಲ್ಲ. ಯಾರಿಗೆ ಜನಿಸಿದ್ದಾರೊ ಗೊತ್ತಿಲ್ಲ. ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಸಂವಿಧಾನಿಕವಾಗಿ ಮಾತನಾಡಿದ್ದರು.
ಓದಿ: ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ: ರಾಯರ ದರ್ಶನ ಮಾಡಿದ ಸಿಎಂ ಬೊಮ್ಮಾಯಿ..!