ETV Bharat / state

ಕೊರೊನಾ ಕಾಲದಲ್ಲೂ ಲೋಕೋಪಯೋಗಿ ಇಲಾಖೆ ಶೇ 99ರಷ್ಟು ಪ್ರಗತಿ: ಡಿಸಿಎಂ ಕಾರಜೋಳ

ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದು, ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ, ಕಾರ್ಯ ಪ್ರಗತಿ ಕುರಿತು ತಿಳಿಸಿದ್ದಾರೆ.

ಡಿಸಿಎಂ ಕಾರಜೋಳ
ಡಿಸಿಎಂ ಕಾರಜೋಳ
author img

By

Published : Jun 5, 2021, 6:51 PM IST

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ 2020-21ರಲ್ಲಿ 10,893 ಕೋಟಿ ರೂ. ಅನುದಾನಕ್ಕೆ 10,743 ಕೋಟಿ ರೂ. ಆರ್ಥಿಕ ಪ್ರಗತಿಯಾಗಿದೆ. ಅಂದರೆ ಶೇ 99ರಷ್ಟು ಪ್ರಗತಿ ಸಾಧಿಸಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಅವರು, ಕೋವಿಡ್ ಸಂದರ್ಭದಲ್ಲೂ ಇಲಾಖೆಯಲ್ಲಿ ಉತ್ತಮ ಪ್ರಗತಿಯಾಗಿದೆ ಎಂದರು.

2019-20ರಲ್ಲಿ 9,033 ಕೋಟಿ ರೂ. ಅನುದಾನ ಹಾಗೂ 8,788 ಕೋಟಿ ರೂ. ಆರ್ಥಿಕ ಪ್ರಗತಿ (ಶೇ 97ರಷ್ಟು) ಸಾಧಿಸಿತ್ತು. ಇನ್ನು ವಿವಿಧ ಯೋಜನೆಗಳಡಿ ಒಟ್ಟು 12,125 ಕಿ.ಮೀಗೆ 12,122 ಕೋಟಿ ರೂ.ಗಳ ವೆಚ್ಚ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ (2,961 ಕಿ.ಮೀ, ರಾಜ್ಯ ಹೆದ್ದಾರಿ ಮತ್ತು 9,164 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ) ಮತ್ತು 621 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. (ಎಸ್‌ಹೆಚ್‌ಡಿಪಿ, ಅಪಂಡಿಕ್-ಇ, ಸಿಆರ್‌ಎಫ್, ನಬಾರ್ಡ್, ಕೆಆರ್​​​ಡಿಸಿಲ್, ಕೆಶಿಪ್) ಅದೇ ರೀತಿ 48 ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಹಾಗೂ 15 POCSO ನ್ಯಾಯಾಲಯಗಳ ಕಟ್ಟಡಗಳನ್ನು 255 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಗುಣಮಟ್ಟದ 3,668 ಕಿ.ಮೀ. ಕಾಂಕ್ರೀಟ್ ರಸ್ತೆಗಳನ್ನು 2,779 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

2019ರ ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನ

ಎಸ್‌ಡಿಪಿ ಯೋಜನೆಯಡಿ 609 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 933 ಕಿ.ಮೀ ರಸ್ತೆ ಅಭಿವೃದ್ಧಿಯನ್ನು 302 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಗಸ್ಟ್ 2019ರ ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನ, 500 ಕೋಟಿ ರೂ. ಮೊತ್ತದಲ್ಲಿ 1,850 ಕಾಮಗಾರಿಗಳು ಪೂರ್ಣಗೊಂಡಿವೆ. 2020ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ 615 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 1,553 ಕಾಮಗಾರಿಗಳ ಅನುಷ್ಠಾನ ಕೈಗೊಳ್ಳಲಾಗಿದ್ದು, 384 ಕಾಮಗಾರಿಗಳು ಪೂರ್ಣಗೊಂಡಿವೆ.

ಎಸ್‌ಹೆಚ್‌ಡಿಪಿ-ಫೇಸ್-4, ಹಂತ-1ರಲ್ಲಿ 4,500 ಕೋಟಿ ರೂ. ಮೊತ್ತದಲ್ಲಿ 3,500 ಕಿ.ಮೀ ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದು, 1,739 ಕಿಮೀ ಅಭಿವೃದ್ಧಿಯನ್ನು 2,140 ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಕೆಶಿಪ್ -3 ರಡಿ, ಎಡಿಬಿ-2 ರಡಿ 6,334 ಕೋಟಿ ರೂ. ಮೊತ್ತದಲ್ಲಿ 418 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಿದ್ದು, 126 ಕಿ.ಮೀ ಅಭಿವೃದ್ಧಿ ಪೂರ್ಣಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ಸಿಗಂಧೂರು ಸೇತುವೆಗೆ 482.84 ಕೋಟಿ

ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ 2,095 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ರಾಜ್ಯವ್ಯಾಪಿ 1,395 ಕೋಟಿ ರೂ. ಮೊತ್ತದಲ್ಲಿ 215 ಸೇತುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, 123 ಸೇತುವೆಗಳು ಪೂರ್ಣಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ 4,762 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ ಗೊಳಿಸಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ 399 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು 2,484 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಿಗಂಧೂರು ಸೇತುವೆ 482.84 ಕೋಟಿ ರೂ.ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಎನ್‌ಹೆಚ್‌ಎಐ ವತಿಯಿಂದ ಬೆಂಗಳೂರು-ಮೈಸೂರು, ತುಮಕೂರು-ಶಿವಮೊಗ್ಗ ಮತ್ತು ಬಳ್ಳಾರಿ-ಹಿರಿಯೂರು ಚತುಷ್ಪಥ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ‌. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಕಾಮಗಾರಿಯನ್ನು ಸಹ ಪ್ರಾರಂಭಿಸಲಾಗಿದೆ. ಎನ್‌ಹೆಚ್‌ಎಐ ವತಿಯಿಂದ 1,980 ಕಿಮೀ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು 35,280 ಕೋಟಿ ರೂ.‌ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ.

ವಿಮಾನ ನಿಲ್ದಾಣ ಕಾಮಗಾರಿಗೆ ವೇಗ

ರಸ್ತೆ, ಯೋಜನೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ (PRAMC) ವತಿಯಿಂದ 419 ರಸ್ತೆ ಸುರಕ್ಷತೆ ಹಾಗೂ ‘ಕಪ್ಪುಸ್ಥಳ’ ನಿವಾರಣೆ ಕಾಮಗಾರಿಗಳ ಒಟ್ಟು ರೂ.433 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನ ಪೂರ್ಣಗೊಳಿಸಲಾಗಿದೆ.
ಮೂಲಭೂತ ಸೌಕರ್ಯ ಇಲಾಖೆಯ ಸಹಯೋಗದಲ್ಲಿ 17.00 ಕೋಟಿ ರೂ. ವೆಚ್ಚದಲ್ಲಿ ಬೀದರ್‌ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಿದ್ದು, ವಿಮಾನ ನಿಲ್ದಾಣದ ಕಾರ್ಯಾರಂಭವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಏರ್‌ ಬಸ್‌-320 ವಿಮಾನಗಳ ಹಾರಾಟಕ್ಕೆ 384.00 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಫೇಸ್‌-1ರ ಕಾಮಗಾರಿ ಪ್ರಗತಿಯಲ್ಲಿದೆ, ಫೇಸ್-2ರ ಕಟ್ಟಡ ಕಾಮಗಾರಿಗೆ ಗುತ್ತಿಗೆದಾರನ್ನು ನೇಮಕ ಮಾಡಲಾಗಿದೆ.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಒಟ್ಟು 220.00 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಅನುಮೋನೆಯಾಗಿದ್ದು, ಫೇಸ್‌-1ರ ಕಾಮಗಾರಿಯ ಒಟ್ಟು 85.00 ಕೋಟಿ ರೂ. ಗಳ ಮೊತ್ತದ ಕಾಮಗಾರಿಯು ಪ್ರಗತಿಯಲ್ಲಿದೆ. ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಫೇಸ್-2‌ ಟರ್ಮಿನಲ್‌ ಕಟ್ಟಡ ಡಿಪಿಆರ್ ಕಾಮಗಾರಿಯ ಅಂದಾಜು ಮೊತ್ತದ 88.52 ಕೋಟಿ ರೂ.ಮೊತ್ತದ ಪರಿಶೀಲನೆಯ ಹಂತದಲ್ಲಿ ಇದೆ ಎಂದರು.

3,243 ಶಾಲಾ ಕೊಠಡಿಗಳ ಪುನರ್‌ ನಿರ್ಮಾಣ

ನಬಾರ್ಡ್‌ ಸಹಯೋಗದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 3,243 ಶಾಲಾ ಕೊಠಡಿಗಳ ಪುನರ್‌ ನಿರ್ಮಾಣ ಕಾಮಗಾರಿಯು 718.65 ಕೋಟಿ ರೂ. ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 1,692 ಕಾಮಗಾರಿಗಳು ಪೂರ್ಣಗೊಂಡಿವೆ, 350.00 ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ನಬಾರ್ಡ್‌ ಸಹಯೋಗದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 842 ಅಂಗನವಾಡಿ ಶಾಲಾ ಕೊಠಡಿಗಳ ಪುನರ್‌ ನಿರ್ಮಾಣವನ್ನು 137.78ಕೋಟಿ ರೂ. ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 189 ಕಾಮಗಾರಿಗಳು ಪೂರ್ಣಗೊಂಡಿದ್ದು, 36 ಕೋಟಿ ರೂ. ವೆಚ್ಚವಾಗಿರುತ್ತದೆ.

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ 50 ಅಂತಸ್ತುಗಳ ಅವಳಿ ಗೋಪುರ ಕಚೇರಿ ಕಟ್ಟಡ ನಿರ್ಮಾಣವನ್ನು ಎನ್‌ಬಿಸಿಸಿ, ನವದೆಹಲಿ ಇವರೊಂದಿಗೆ ಪಿಪಿಪಿ ಮಾದರಿಯಡಿಯಲ್ಲಿ 1,251 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ನವದೆಹಲಿಯಲ್ಲಿ ಕರ್ನಾಟಕ ಭವನ-1ರ ನಿರ್ಮಾಣವನ್ನು ರೂ.120.00 ಕೋಟಿ ಪರಿಷ್ಕೃತ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಸ್ತೆಗಳ ಉನ್ನತೀಕರಣ :

15 ವರ್ಷಗಳ ಅವಧಿಯ ನಂತರ ವೈಜ್ಞಾನಿಕವಾಗಿ ರಸ್ತೆಗಳ ಉನ್ನತೀಕರಣ ಮಾಡಲಾಗಿದೆ. 9,601 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 15,510 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತೀಕರಣಗೊಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

2021-22 ನೇ ವರ್ಷದ ಕಾರ್ಯಕ್ರಮಗಳ ವಿವರ
• ಆನಂದರಾವ್ ವೃತ್ತದಲ್ಲಿ ಅವಳಿ ಗೋಪುರ ನಿರ್ಮಾಣಕ್ಕೆ ಚಾಲನೆ.
• ಎಸ್‌ಹೆಚ್‌ಡಿಪಿ ಫೇಸ್‌-4ರಡಿ ಘಟ್ಟ-2ರಡಿ 2,720 ಕಿ.ಮೀ ಕೋರ್‌ರೋಡ್‌ ರಸ್ತೆಗಳ ಅಭಿವೃದ್ಧಿಪಡಿಸಲು ಅಂದಾಜು 3,500 ಕೋಟಿ ರೂ. ಮೊತ್ತಕ್ಕೆ ಯೋಜನೆ ತಯಾರಿಕೆ.
• ಕೆಶಿಪ್‌ ಅಡಿಯಲ್ಲಿ ಪ್ರಗತಿಯಲ್ಲಿರುವ 418 ಕಿಮೀ ಹೆದ್ದಾರಿ ಅಭಿವೃದ್ಧಿ ಅನುಷ್ಟಾನ.
• ನಗರಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕೆಆರ್‌ಡಿಸಿಎಲ್‌ ಮೂಲಕ ಬೆಂಗಳೂರಿನ 12 high density corridor ರಸ್ತೆಗಳ 191 ಕಿ.ಮೀ ಅಭಿವೃದ್ಧಿಯನ್ನು ರೂ. 788 ಕೋಟಿ ಮೊತ್ತದಲ್ಲಿ ಅನುಷ್ಠಾನ.
• ಎನ್‌ಹೆಚ್‌ಎಐ ಮತ್ತು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರದ 69 ಕಿ.ಮೀ ಮತ್ತು ರಾಯಚೂರು ನಗರ ರಿಂಗ್‌ ರಸ್ತೆ ಉದ್ದ 14.50 ಕಿ.ಮೀ. ನಿರ್ಮಾಣ‌.
• ಬೆಂಗಳೂರಿನ ವಸಂತ ನಗರದಲ್ಲಿ ಸುಸಜ್ಜಿತ 77 ವಸತಿ ಗೃಹಗಳ (ಸಮುಚ್ಛಯ) ನಿರ್ಮಾಣವನ್ನು ರೂ.117 ಕೋಟಿ ಮೊತ್ತದಲ್ಲಿ ಅನುಷ್ಠಾನ.
• ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರ (PRAMC)ವತಿಯಿಂದ ವೈಜ್ಞಾನಿಕ ಸಂಚಾರ ನಿರ್ವಹಣೆ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಮತ್ತು ಸೇಪ್ಟಿ ಸಲ್ಯೂಷನ್‌ ಅನ್ನು ಪ್ರಾಯೋಗಿಕವಾಗಿ ಶಿವಮೊಗ್ಗ- ಸವಳಂಗ- ಶಿಕಾರಿಪುರ- ಶಿರಾಳಕೊಪ್ಪ ಮತ್ತು ಹಾಸನ- ರಾಮನಾಥಪುರ- ಪಿರಿಯಾಪಟ್ಟಣ ರಸ್ತೆಗಳಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
• ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಕಾಲುಸಂಕಗಳನ್ನು ನಿರ್ಮಿಸುವ “ಗ್ರಾಮಬಂಧು” ಸೇತುವೆ ಯೋಜನೆ ಅನುಷ್ಠಾನ.
• ಬೆಂಗಳೂರು ಸುತ್ತಲಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಡಾಬಸಪೇಟೆ-ದೇವನಹಳ್ಳಿ- ಹೊಸಕೋಟೆ- ತಮಿಳನಾಡು(101ಕಿಮೀ) ಗಡಿ ವರೆಗಿನ ಅಭಿವೃದ್ಧಿಯನ್ನು ಎನ್‌ಹೆಚ್‌ಎಐ ವತಿಯಿಂದ “ಭಾರತಮಾಲಾ” ಪರಿಯೋಜನೆಯಡಿ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ 143 ಕಿಮೀ ಉದ್ದದ ಎಸ್‌ಟಿಆರ್‌ಆರ್‌ ರಸ್ತೆಯ ಭಾಗವನ್ನು (green field alignment) ಹೊಸೂರು ಗಡಿ - ಆನೇಕಲ್‌ – ಕನಕಪುರ – ರಾಮನಗರ – ಮಾಗಡಿ - ಡಾಬಸಪೇಟೆ ಎನ್‌ಹೆಚ್‌ಎಐ ಸಹಯೋಗದಲ್ಲಿ ಕೈಗೊಳ್ಳಲು ಭೂಸ್ವಾಧೀನ ಮೊತ್ತದ ರೂ.1,560 ಕೋಟಿ ಶೇ 30ರಷ್ಟು ರಾಜ್ಯ ಸರ್ಕಾರದಿಂದ ಭರಿಸಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.