ETV Bharat / bharat

ದೇವೇಂದ್ರ ಫಡ್ನವೀಸ್​ಗೆ ಅಜಿತ್​​ ಪವಾರ್​​ ಬೆಂಬಲ: ಎನ್​ಸಿಪಿ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ? - MAHARASTRA ASSEMBLY ELECTION

ಮಹಾರಾಷ್ಟ್ರ ಹೊಸ ಸಿಎಂ ಆಯ್ಕೆ ವಿಳಂಬವಾಗಿದ್ದು, ಎನ್​ಸಿಪಿಯ ಅಜಿತ್​ ಪವಾರ್​ ಅವರು ಬಿಜೆಪಿಯ ದೇವೇಂದ್ರ ಫಡ್ನವೀಸ್​ ಅವರಿಗೆ ಬೆಂಬಲ ನೀಡಿದ್ದಾಗಿ ಮೂಲಗಳು ತಿಳಿಸಿವೆ.

ದೇವೇಂದ್ರ ಫಡ್ನವೀಸ್​ಗೆ ಅಜಿತ್​​ ಪವಾರ್​​ ಬೆಂಬಲ
ದೇವೇಂದ್ರ ಫಡ್ನವೀಸ್​ಗೆ ಅಜಿತ್​​ ಪವಾರ್​​ ಬೆಂಬಲ (ETV Bharat)
author img

By ETV Bharat Karnataka Team

Published : Nov 26, 2024, 5:29 PM IST

ನವದೆಹಲಿ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಎನ್​ಸಿಪಿ ನಾಯಕ ಅಜಿತ್ ಪವಾರ್​, ಫಡ್ನವೀಸ್​ಗೆ ಬೆಂಬಲ ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಮಾಜಿ ಸಿಎಂ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನೆಯು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದೆ. ಹೀಗಾಗಿ ಹೊಸ ಸಿಎಂ ಆಯ್ಕೆ ವಿಳಂಬವಾಗುತ್ತಿದೆ. ಹಾಗೊಂದು ವೇಳೆ ಬಿಕ್ಕಟ್ಟು ಉಂಟಾದಲ್ಲಿ ಅಜಿತ್​ ಪವಾರ್​ರ ಎನ್​​ಸಿಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಕಾರಣ, ಬಿಜೆಪಿ 132, ಅಜಿತ್​ ಪವಾರ್​ ಎನ್​ಸಿಪಿಯು 41 ಸ್ಥಾನ ಹೊಂದಿದೆ. ಸರ್ಕಾರ ರಚನೆಗೆ ಬೇಕಾದ 145 ದಾಟಲು ಸಾಕಾಗುತ್ತದೆ.

ಅಮಿತ್​ ಶಾ ಭೇಟಿಯಾದ ಫಡ್ನವೀಸ್​: ಮಹಾಯುತಿ ಕೂಟದ ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಹಂಚಿಕೆಯಾಗಲಿದೆಯೇ ಎಂಬ ಚರ್ಚೆಯ ನಡುವೆ ಸಿಎಂ ರೇಸ್​​ನಲ್ಲಿರುವ ದೇವೇಂದ್ರ ಫಡ್ನವೀಸ್​ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಏಕನಾಥ್​ ಶಿಂಧೆ ಅವರು ಮುಖ್ಯಮಂತ್ರಿ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಸರ್ಕಾರ ರಚನೆ ಆಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸಿದ್ದಾರೆ.

ಬಿಜೆಪಿ ಹೈಕಮಾಂಡ್​ ಜೊತೆ ಚರ್ಚೆ: ಸಿಎಂ ಯಾರೆಂಬುದು ಇತ್ಯರ್ಥವಾಗದ ಕಾರಣ, ಬಿಜೆಪಿ ನಾಯಕರು, ಏಕನಾಥ್​ ಶಿಂಧೆ, ಅಜಿತ್​ ಪವಾರ್​ ಅವರು ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್​ ಜೊತೆ ಚರ್ಚೆ ನಡೆಸಲಿದ್ದಾರೆ. ಅಮಿತ್​ ಶಾ, ಜೆ.ಪಿ. ನಡ್ಡಾ, ಪ್ರಧಾನಿ ಮೋದಿ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಇದಕ್ಕಾಗಿ ಅವರು ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಅಠಾವಳೆ ಹೇಳಿಕೆ: ಎನ್​ಸಿಪಿಯ ಅಜಿತ್ ಪವಾರ್ ಬೆಂಬಲದೊಂದಿಗೆ ದೇವೇಂದ್ರ ಫಡ್ನವೀಸ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ-ಎ) ಮುಖ್ಯಸ್ಥ ರಾಮದಾಸ್ ಅಠಾವಳೆ ಅವರು ಹೇಳಿಕೆ ನೀಡಿದ್ದಾರೆ.

ಸೋಮವಾರ ಫಡ್ನವೀಸ್​ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಹುದ್ದೆಯ ಕುರಿತು ಇನ್ನೆರಡು ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಫಡ್ನವೀಸ್​ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದರು.

ಇದನ್ನೂ ಓದಿ: ಕುಟುಂಬದ 4 ಮತಗಳಲ್ಲಿ 2 ಮತಗಳು ಬಿದ್ದಿವೆ ಎಂದು MNS ಅಭ್ಯರ್ಥಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.