ಬೆಂಗಳೂರು: ಹೊಸ ವರ್ಷಾಚರಣೆ ದಿನ ಕುಡಿದ ಆಮಲಿನಲ್ಲಿ ಜಗಳ ನಡೆಸುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿನಾಯಕ ನಗರದ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ಹೊಸ ವರ್ಷವನ್ನು ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ವಿನಾಯಕ ನಗರದಲ್ಲಿರುವ ಶ್ರೀನಿವಾಸ ಬಾರ್ಗೆ ಗಿರೀಶ್ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದ. ಸನಿಹದಲ್ಲೇ ಇದ್ದ ಗಿರೀಶ್ ಜಗಳ ಬಿಡಿಸಲು ಹೋದದ್ದಕ್ಕೆ ಗಿರೀಶ್ ಮೇಲೆ ಕೋಪಗೊಂಡ ಮಂಜು ತನ್ನ ಸಹಚರರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಲ್ಲೆ ನಡೆಸಿದ್ದ ಎನ್ನಲಾಗ್ತಿದೆ.
![ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ , Dedly Attack on friend in Bangalore](https://etvbharatimages.akamaized.net/etvbharat/prod-images/kn-bng-01-kamakshipayla-crime-7202806_06012020150314_0601f_1578303194_476.jpg)
ಬಿಯರ್ ಬಾಟಲ್ನಲ್ಲಿ ತಲೆಗೆ ಹೊಡೆದಿದ್ದಲ್ಲದೆ, ಡ್ರ್ಯಾಗರ್‌ನಿಂದ ಮುಖ, ಮೈಗೆ ಚುಚ್ಚಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.