ಬೆಂಗಳೂರು: ಪ್ರತಿನಿತ್ಯ ನಗರದಲ್ಲಿ 23 ಸಾವಿರ ಮೇಲ್ಪಟ್ಟು ದಾಖಲಾಗುತ್ತಿದ್ದ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಎರಡು ದಿನಗಳಿಂದ ಇಳಿಕೆ ಕಂಡಿದೆ. ಇಂದು 15,913 ಜನರಿಲ್ಲಿ ಕೊರೊನಾ ದೃಢಪಟ್ಟಿದೆ.
ಬೊಮ್ಮನಹಳ್ಳಿ ವಲಯದಲ್ಲಿ 1637, ದಾಸರಹಳ್ಳಿಯಲ್ಲಿ 616, ಪೂರ್ವ ವಲಯದಲ್ಲಿ 2390, ಮಹದೇವಪುರದಲ್ಲಿ 2125, ಆರ್‌ಆರ್ ನಗರದಲ್ಲಿ 1234, ದಕ್ಷಿಣದಲ್ಲಿ 1806, ಪಶ್ಚಿಮದಲ್ಲಿ 1463, ಯಲಹಂಕ 1119, ಹಾಗೂ ನಗರದ ಹೊರವಲಯದಲ್ಲಿ 1501 ಸೇರಿದಂತೆ 15913 ಜನರಲ್ಲಿ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿದೆ.
ನಿನ್ನೆ 16,747 ಜನರಿಗೆ ಕೊರೊನಾ ದೃಢಪಟ್ಟಿತ್ತು. 14,289 ಜನ ಗುಣಮುಖರಾಗಿದ್ದು, 374 ಮಂದಿ ಮೃತಪಟ್ಟಿದ್ದರು. 3,52,454 ಸಕ್ರಿಯ ಪ್ರಕರಣಗಳಿದ್ದವು.
ಇದನ್ನೂ ಓದಿ: ವಾರದಲ್ಲಿ 4 ದಿನ ಸಂಪೂರ್ಣ ಲಾಕ್‌ಡೌನ್: ಸಿಎಂ ಜತೆ ಚರ್ಚಿಸಿ ತೀರ್ಮಾನ- ಡಾ. ಸುಧಾಕರ್
ಲಾಕ್ಡೌನ್ಗೆ ಮೊದಲು ಎರಡು ವಾರ ಕೋವಿಡ್ ಕರ್ಫ್ಯೂ ಇದ್ದ ಹಿನ್ನೆಲೆಯಲ್ಲಿ ಜನರ ಓಡಾಟ, ಗುಂಪುಗೂಡುವಿಕೆ ಕಡಿಮೆಯಾಗಿದ್ದು ಸೋಂಕು ಹರಡುವಿಕೆ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಲಾಕ್‌ಡೌನ್ ಇರುವುದರಿಂದ ಕೋವಿಡ್ ಪ್ರಕರಣಗಳು ಇನ್ನಷ್ಟು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ.