ETV Bharat / state

ಮಂಗಳೂರು ಗೋಲಿಬಾರ್​ ಪ್ರಕರಣ... ಆಡಳಿತ-ಪ್ರತಿಪಕ್ಷಗಳ ನಡುವೆ ಜಂಗೀಕುಸ್ತಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಗೊಲಿಬಾರ್​ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಗಂಭೀರ ಚರ್ಚೆ ನಡೆದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಂಗೀಕುಸ್ತಿಗೆ ಕಾರಣವಾಯಿತು.

Debate about Mangaluru Golibar in Assembly
ವಿಧಾನಸಭೆ ಕಲಾಪ
author img

By

Published : Feb 19, 2020, 8:01 PM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದು ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿರುವ ಪ್ರಕರಣ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆ ನಡೆದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಂಗೀಕುಸ್ತಿಗೆ ಕಾರಣವಾಯಿತು.

ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ಮಂಗಳೂರು ಗೋಲಿಬಾರ್​ ಪ್ರಕರಣ

ಬುಧವಾರ ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನಿಯಮ 69ರ ಅಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಿದರು. ಚರ್ಚೆ ಆರಂಭಿಸಿದ ಸಿದ್ದರಾಮಯ್ಯ, ಮಂಗಳೂರು ಗಲಭೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಜನ ಸಾಮಾನ್ಯರ ಮೇಲೆ ಪೊಲೀಸರು ನಿಯಮ ಬಾಹಿರವಾಗಿ ಲಾಠಿ ಚಾರ್ಜ್​ ಮಾಡಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಶೇ.99.5ರಷ್ಟು ಮಂದಿ ಶಾಂತಿ ಪ್ರಿಯರಿದ್ದಾರೆ ಎಂದು ಹೇಳುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಶಾಂತಿ ಪ್ರಿಯರ ನಾಡಿನಲ್ಲಿ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಪತಿಕ್ರಿಯಿಸಿದ ಸಿದ್ದರಾಮಯ್ಯ ಶಾಸಕ ಯು.ಟಿ. ಖಾದರ್​, ಬೆಂಕಿ ಹಚ್ಚುತ್ತೇನೆ ಎಂದು ಹೇಳಲಿಲ್ಲ. ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್​ ಸದಸ್ಯ ಪ್ರಿಯಾಂಕ್​ ಖರ್ಗೆ, ದೇಶಪ್ರೇಮದ ಬಗ್ಗೆ ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಸರ್ಟಿಫಿಕೇಟ್ ಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಚರ್ಚೆಯ ಪ್ರತಿ ಹಂತದಲ್ಲೂ ಮಾತಿನ ಚಕಮಕಿ, ವಾಗ್ವಾದಗಳು ನಡೆದವು. ಕಲಾಪವನ್ನು ನಿಯಂತ್ರಣಕ್ಕೆ ತರಲು ಸಭಾಧ್ಯಕ್ಷರು ಸಾಕಷ್ಟು ಪ್ರಯತ್ನಪಟ್ಟರು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ನ್ಯಾಯಮೂರ್ತಿ ಗೋಪಾಲ್‍ ಗೌಡ, ಹಿರಿಯ ವಕೀಲ ಬಿ.ಟಿ. ವೆಂಕಟೇಶ್, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್ ರಾಜು ಅವರುಗಳನ್ನೊಳಗೊಂಡ ಪೀಪಲ್ ಟ್ರಿಬ್ಯೂನಲ್ ಸಮಿತಿ ಸಾರ್ವಜನಿಕರ ಆಹವಾಲು ಕೇಳಿ ವರದಿ ತಯಾರಿಸಿದೆ. ವರದಿಯಲ್ಲಿ, ಗಲಭೆ ನಿಯಂತ್ರಿಸಲು ಪೊಲೀಸರು ವಿಫಲವಾಗಿರುವುದು, ನಿಯಮ ಬಾಹಿರವಾಗಿ ನಡೆದಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಚಿವ ಸುರೇಶ್‍ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಸರ್ಕಾರವಿದ್ದರೂ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಾರೆ. ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಾವು ಚರ್ಚೆ ಮಾಡಬಾರದು. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾತನಾಡುವುದು ಸುಲಭ. ಆದರೆ, ಸ್ಥಳದಲ್ಲಿದ್ದು ಪರಿಸ್ಥಿತಿ ಎದುರಿಸುವುದು ಕಷ್ಟ ಎಂದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸರು ಯಾವುದೇ ಲೋಪಮಾಡಿಲ್ಲ. ಸಮರ್ಥವಾಗಿ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಸದಸ್ಯ ದಿನೇಶ್‍ ಗುಂಡೂರಾವ್ ಮಧ್ಯಪ್ರವೇಶಿಸಿ, ಮಂಗಳೂರು ಗಲಾಟೆಯಲ್ಲಿ ಮೃತಪಟ್ಟವರು ಅಮಾಯಕರು ಎಂದರು. ಇದಕ್ಕೆ ಬಿಜೆಪಿಯ ಹಿರಿಯ ಶಾಸಕ ಅರವಿಂದ ಲಿಂಬಾವಳಿ ವಿರೋಧ ವ್ಯಕ್ತಪಡಿಸಿ, ಆ ಪದವನ್ನು ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸಿಗರ ಆರೋಪಗಳಿಗೆ ಬಿಜೆಪಿ ಸದಸ್ಯರು ಪದೇ ಪದೇ ತಿರುಗೇಟು ಕೊಡುವ ಮೂಲಕ ವಾಗ್ದಾಳಿ ನಡೆಸುತ್ತಿದ್ದರು. ಹೀಗಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗುತ್ತಿತ್ತು. ನಿಷೇಧಾಜ್ಞೆ ಜಾರಿ ಮತ್ತು ಮಂಗಳೂರು ಗಲಾಟೆಯ ಆರೋಪಿಗಳಿಗೆ ಜಾಮೀನು ವಿಷಯದಲ್ಲಿ ಹೈಕೋರ್ಟ್ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯಗಳು ಗಂಭೀರ ಚರ್ಚೆಗೆ ಒಳಪಟ್ಟವು. ಕಾಂಗ್ರೆಸ್ ಸದಸ್ಯರು ಹೈಕೋರ್ಟ್ಅ ಭಿಪ್ರಾಯ ಸರ್ಕಾರಕ್ಕೆ ಆದ ಛೀಮಾರಿ ಎಂದು ವ್ಯಾಖ್ಯಾನಿಸಿದರೆ, ಅದನ್ನು ಬಿಜೆಪಿ ಸದಸ್ಯರು ತಳ್ಳಿ ಹಾಕಿ ಜಾಮೀನಿನ ವಿಚಾರಣೆ ವೇಳೆ ವ್ಯಕ್ತವಾಗುವ ಅಭಿಪ್ರಾಯಗಳು ಛೀಮಾರಿ ಅಲ್ಲವೆಂದು ಸಮರ್ಥಿಸಿಕೊಂಡರು. ಒಂದು ಹಂತದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹಾಗೂ ಕಾಂಗ್ರೆಸ್​ ಶಾಸಕ ದಿನೇಶ್‍ ಗುಂಡೂರಾವ್ ನಡುವೆ ಮಾತಿನ ಚಕಮಕಿ ನಡೆಯಿತು. ಕಾನೂನಿನ ಪಾಠವನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದು ಪರಸ್ಪರ ಕೂಗಾಡಿಕೊಂಡರು.

ಕ್ರಿಯಾಲೋಪ ಎತ್ತಿದ ಸಚಿವ ಮಾಧುಸ್ವಾಮಿ: ಸಿದ್ದರಾಮಯ್ಯ ಮಂಗಳೂರು ಗೊಲಿಬಾರ್ ಘಟನೆ ಸರ್ಕಾರಿ ಪ್ರಾಯೋಜಿತ ದುಷ್ಕೃತ್ಯವೆಂದು ಗಂಭೀರ ಆರೋಪ ಮಾಡಿದಾಗ, ಸಚಿವ ಮಾಧುಸ್ವಾಮಿ ಕ್ರಿಯಾಲೋಪ ಎತ್ತುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವನ್ನು ಉಲ್ಲೇಖಿಸಿ ಚರ್ಚೆ ಮಾಡುವುದು ಸರಿಯಲ್ಲ ಎಂದರು. ಶಾಸಕರಾದ ರಮೇಶ್‍ ಕುಮಾರ್, ಹೆಚ್.ಕೆ. ಪಾಟೀಲ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಜಮೀರ್​ ಅಹ್ಮದ್‍ ಖಾನ್, ಪ್ರಿಯಾಂಕ್ ಖರ್ಗೆ, ದಿನೇಶ್‍ ಗುಂಡೂರಾವ್ ಸರ್ಕಾರದ ವಿರುದ್ಧ ಕಿಡಿಕಾರಿದರೆ, ಬಿಜೆಪಿ ಪಾಳಯದಿಂದ ಸಚಿವರಾದ ಮಾಧುಸ್ವಾಮಿ, ಸುರೇಶ್‍ ಕುಮಾರ್, ಬಸವರಾಜ ಬೊಮ್ಮಾಯಿ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಸುನಿಲ್‍ ಕುಮಾರ್, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರರು ಸಮರ್ಥನೆ ಮಾಡಿಕೊಂಡರು.

ಈ ವೇಳೆ ಮಾಜಿ ಸಚಿವ ಯು.ಟಿ. ಖಾದರ್ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿರುವುದನ್ನು ಪ್ರತಿಪಕ್ಷ ಪ್ರಶ್ನಿಸಿ ಕಟು ಟೀಕೆ ಮಾಡಿತು. ಗಲಭೆ ಮಾಡಿದವರು ಅಮಾಯಕರಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್​ ಎಸೆದವರು ಅಮಾಯಕರಲ್ಲ ಎಂದು ಬಿಜೆಪಿ ಸದಸ್ಯರು ಪ್ರತಿವಾದ ಮಂಡಿಸಿದರು. ಗಲಾಟೆ ತೀವ್ರಗೊಂಡು ಒಂದು ಹಂತದಲ್ಲಿ ಸದನವನ್ನು 10 ನಿಮಿಷ ಮುಂದೂಡುವ ಪ್ರಸಂಗವೂ ನಡೆಯಿತು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.