ETV Bharat / state

ಕೋವಿಡ್ ಕೇರ್ ಸೆಂಟರ್​​​ನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಪಿಪಿಇ ಕಿಟ್ ಧರಿಸಿ ಡಿಸಿಎಂ ಭೇಟಿ, ಪರಿಶೀಲನೆ! - ಸಿಇಟಿ ಕೇಂದ್ರಕ್ಕೆ ಡಿಸಿಎಂ ಭೇಟಿ

ಜಿಕೆವಿಕೆ ಕ್ಯಾಂಪಸ್​​‌ನಲ್ಲಿರುವ ರೈತ ತರಬೇತಿ ಸಂಸ್ಥೆ ಮತ್ತು ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್​ನಲ್ಲಿ ಇರುವ ಸಿಇಟಿ ಕೇ‍ಂದ್ರಕ್ಕೆ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಭೇಟಿ ನೀಡಿದರು.

DCM visit to CET center
ಸಿಇಟಿ ಕೇಂದ್ರಕ್ಕೆ ಡಿಸಿಎಂ ಭೇಟಿ
author img

By

Published : Jul 30, 2020, 5:28 PM IST

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಇಂದು ಮೊದಲ ದಿನದ ಸಿಇಟಿ ಪರೀಕ್ಷೆ ನಡೆದಿದೆ.‌ ಇತ್ತ ಕೊರೊನಾ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ರೋಗ ಲಕ್ಷಣ ಇಲ್ಲದ ನಾಲ್ಕು ಮಂದಿ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಹಿನ್ನೆಲೆ ಜಿಕೆವಿಕೆ ಕ್ಯಾಂಪಸ್​​‌ನಲ್ಲಿರುವ ರೈತ ತರಬೇತಿ ಸಂಸ್ಥೆ ಮತ್ತು ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್​ನಲ್ಲಿ ಇರುವ ಸಿಇಟಿ ಕೇ‍ಂದ್ರಕ್ಕೆ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಭೇಟಿ ನೀಡಿದರು. ಪಿಪಿಇ ಕಿಟ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಹೋದ ಡಿಸಿಎಂ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಸಿಇಟಿ ಕೇಂದ್ರಕ್ಕೆ ಡಿಸಿಎಂ ಭೇಟಿ

ಯಾವುದೇ ಸಮಸ್ಯೆ ಇಲ್ಲದೆ ನಮ್ಮನ್ನು ಆ್ಯಂಬುಲೆನ್ಸ್​ನಲ್ಲಿ ಕರೆ ತರಲಾಯಿತು ಎಂದು ವಿದ್ಯಾರ್ಥಿಗಳು ಡಿಸಿಎಂಗೆ ತಿಳಿಸಿದರು. ಇನ್ನೂ ವಿಶೇಷ ಅಂದರೆ ವೈದ್ಯರೇ ಇಲ್ಲಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಜತೆಗೆ ಒಬ್ಬ ನರ್ಸ್ ಕೂಡ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.