ETV Bharat / state

ಕಣ್ಣು ತೆರೆಸುವ ಬಜೆಟ್ ಮಂಡನೆಯಾಗಿದೆ: ಡಿಸಿಎಂ ಕಾರಜೋಳ ಶ್ಲಾಘನೆ!

ಇದು ದೇಶದ ಅಭಿವೃದ್ಧಿಗಾಗಿ ಮಂಡಿಸಿದ ಬಜೆಟ್ ಆಗಿದೆ. ಸರ್ವ ಜನಾಂಗದ ಏಳಿಗೆಗಾಗಿ ಮಂಡಿಸಿದ ಬಜೆಟ್ ಇದಾಗಿದ್ದು, ಇದು ಕಣ್ಣು ಒರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಎಂದು ಡಿಸಿಎಂ ಗೋವಿಂದ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

author img

By

Published : Feb 1, 2020, 4:33 PM IST

DCM Govinda karajola happy about budget 2020!
ಕಣ್ಣು ತೆರೆಸುವ ಬಜೆಟ್ ಮಂಡನೆಯಾಗಿದೆ: ಡಿಸಿಎಂ ಕಾರಜೋಳ ಶ್ಲಾಘನೆ!

ಬೆಂಗಳೂರು: ಸರ್ವ ಜನಾಂಗದ ಏಳಿಗೆಗಾಗಿ ಮಂಡಿಸಿದ ಬಜೆಟ್ ಇದಾಗಿದ್ದು, ಇದು ಕಣ್ಣು ಒರೆಸುವ ಬಜೆಟ್ ಅಲ್ಲ, ಕಣ್ಣು ತೆರೆಸುವ ಬಜೆಟ್ ಎಂದು ಡಿಸಿಎಂ ಗೋವಿಂದ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮತನಾಡಿದ ಡಿಸಿಎಂ, ಇದು ದೇಶದ ಅಭಿವೃದ್ಧಿಗಾಗಿ ಮಂಡಿಸಿದ ಬಜೆಟ್ ಆಗಿದೆ. ರೈತರ ಹಾಗೂ ದೀನ - ದಲಿತರ ಆದಾಯ ದ್ವಿಗುಣಗೊಳಿಸವ ಕ್ರಮ ಕೈಗೊಂಡಿದ್ದಾರೆ. ಈ ಬಜೆಟ್​ ದೇಶದ ಪ್ರತಿ ರೈತರು ಸ್ವಾಗತಿಸಬೇಕು. ದಲಿತರ ಕಲ್ಯಾಣ ಬಯಸುವ ಬಜೆಟ್ ಇದಾಗಿದ್ದು, ಆದಿವಾಸಿಗಳ ಕಲ್ಯಾಣಕ್ಕಾಗಿ 1.38 ಲಕ್ಷ ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.

ಬಜೆಟ್​ನಲ್ಲಿ ಪ್ರತಿಯೊಬ್ಬರಿಗೂ ಶುದ್ಧ ನೀರು ನೀಡಲು ಜಲಜೀವ ಮಿಷನ್‌ಗೆ 3.65 ಲಕ್ಷ ರೂ. ಅನುದಾನ ನೀಡಿದ್ದಾರೆ. ಬೆಂಗಳೂರು ಉಪನಗರ ಯೋಜನಗೆ ಅನುದಾನ ನೀಡಿದೆ, ಅದಕ್ಕಾಗಿ 18,600 ಕೋಟಿ ರೂ. ಯೋಜನೆ ರೂಪಿಸಿದ್ದು, 3700 ಕೋಟಿ ರೂ ಅನುದಾನ ನೀಡಿದ್ದಾರೆ. 6000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 12 ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದಿಂದ ಆರು ಪಥ ಮಾಡಲು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಭ್ರಷ್ಟಾಚಾರ ಕಡಿವಾಣಕ್ಕಾಗಿ ರಾಷ್ಟ್ರೀಯ ನೇಮಕಾತಿ ಸಮಿತಿ ಮಾಡಿರುವುದು ಶ್ಲಾಘನೀಯ. ದೇಶದ 130 ಕೋಟಿ ಜನರ ಅಭಿವೃದ್ಧಿಗೆ, ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೊಟ್ಟ ಬಜೆಟ್ ಇದಾಗಿದೆ. ಒಂದು ಲಕ್ಷ ಗ್ರಾಮ ಪಂಚಾಯತ್​ಗಳಿಗೆ ಕೇಬಲ್ ಸಂಪರ್ಕ ನೀಡಿರುವುದು ಉತ್ತಮ ಕ್ರಮವಾಗಿದೆ. ದುಡಿಯುವ ವರ್ಗಕ್ಕೆ ತೆರಿಗೆ ಹೊರೆ ಹಾಕಿಲ್ಲ. ದೇಶದ ಅಭಿವೃದ್ಧಿ ದೃಷ್ಟಿಯಿಂದ, ಮುಂದಾಲೋಚನೆಯಿಂದ ಕೂಡಿದ ಬಜೆಟ್ ಆಗಿದೆ ಎಂದು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.