ETV Bharat / state

ಸರ್ಕಾರ ರಚನೆ ಬಗ್ಗೆ ಬಿಜೆಪಿಗರು ಕನಸಿನಲ್ಲೇ ಖುಷಿ ಪಡುತ್ತಿದ್ದಾರೆ:  ಡಿಕೆಶಿ ವ್ಯಂಗ್ಯ

ಎಸ್.ಎಂ. ಕೃಷ್ಣ ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ಇಲ್ಲ. ನಮ್ಮದೇನಿದ್ದರೂ ತೆರೆದ ಪುಸ್ತಕವಿದ್ದಂತೆ, ಏನೇ ಮಾತನಾಡುವುದಿದ್ದರೂ ಬಹಿರಂಗವಾಗೇ ಮಾತನಾಡುತ್ತೇನೆ. ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಸಚಿವ ಡಿಕೆಶಿ ತಿಳಿಸಿದರು. ರಾಜ್ಯದಲ್ಲಿ ಸರ್ಕಾರ ಬಗ್ಗೆ ಬಿಜೆಪಿಗರು ಕನಸಲ್ಲೇ ಸಂತೋಷ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಡಿ.ಕೆ ಶಿವಕುಮಾರ್
author img

By

Published : May 1, 2019, 5:01 PM IST

ಬೆಂಗಳೂರು: ಕನಸು ಕಾಣುವವರಿಗೆ, ಕನಸಿನಲ್ಲಿ ಸಂತೋಷಪಡುತ್ತೇವೆ ಎನ್ನುವವರಿಗೆ ಬೇಡ ಅನ್ನಲು ಸಾಧ್ಯವೇ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಪ್ರಯತ್ನವನ್ನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಟೀಕಿಸಿದರು.

ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಕೃಷ್ಣ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭ ಕೋರಿದರು. ರಾಜಕೀಯ ಗುರುವಿನ ಕಾಲಿಗೆರಗಿ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಅರ್ಧ ಗಂಟೆಗೂ ಹೆಚ್ಚಿನ ಕಾಲ ಖಾಸಗಿಯಾಗಿ‌ ಚರ್ಚೆ ನಡೆಸಿದರು. ನಂತರ ಮನೆಯ ಗೇಟ್​ವರೆಗೂ ಬಂದ ಕೃಷ್ಣ ಡಿ.ಕೆ ಶಿವಕುಮಾರ್ ಅವರನ್ನು ಬೀಳ್ಕೊಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ಅವರು, ಎಸ್.ಎಂ. ಕೃಷ್ಣ ನನ್ನ ತಂದೆಯ ಸಮಾನ. ಅವರ ಬರ್ತಡೇಗೆ ಶುಭಾಶಯ ಕೋರಲು ಬಂದಿದ್ದೇನೆ. ಮೊನ್ನೆ ಹಬ್ಬದ ಸಂದರ್ಭದಲ್ಲೂ ಬಂದಿದ್ದೆ, ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ಇಲ್ಲ. ನಮ್ಮದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನೇ ಮಾತನಾಡುವುದಿದ್ದರೂ ಬಹಿರಂಗವಾಗೇ ಮಾತನಾಡುತ್ತೇನೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.

ರಾಜಕೀಯ ಗುರಿ ಎಸ್.ಎಂ ಕೃಷ್ಣಗೆ ಬರ್ತಡೇ ಶುಭಾಶಯ ಕೋರಿದ ಸಚಿವ ಡಿಕೆಶಿ

ಇನ್ನು ಜಿ.ಟಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ, ಸಚಿವ. ನನ್ನ ಬಗ್ಗೆ ಮಾತ್ರ ನಾನು ಪ್ರತಿಕ್ರಿಯೆ ನೀಡಬಲ್ಲೆ. ಬೇರೆಯವರ ವಿಷಯಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲಿಸಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

Intro:ಬೆಂಗಳೂರು: ಕನಸು ಕಾಣುವವರಿಗೆ ಕನಸಿನಲ್ಲಿ ಸಂತೋಷಪಡುತ್ತೇವೆ ಎನ್ನುವವರುಗೆ ಬೇಡ ಅನ್ನಲು ಸಾಧ್ಯವೇ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಪ್ರಯತ್ನವನ್ನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಟಿಕಿಸಿದ್ದಾರೆ.Body:ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ನಿವಾಸಕ್ಕೆ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿದರು,ಕೃಷ್ಣ ಅವರನ್ನು ಭೇಟಿಯಾಗಿ 88 ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದರು.ರಾಜಕೀಯ ಗುರುವಿನ ಕಾಲಿಗೆರಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು ನಂತರ ಅರ್ಧ ಗಂಟೆಗೂ ಹೆಚ್ಚಿನ ಕಾಲ ಖಾಸಗಿಯಾಗಿ‌ ಚರ್ಚೆ ನಡೆಸಿದರು.ನಂತರ ಮನೆಯ ಗೇಟ್ ವರೆಗೂ ಬಂದ ಕೃಷ್ಣ ಡಿ.ಕೆ ಶಿವಕುಮಾರ್ ಅವರನ್ನು ಬೀಳ್ಕೊಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್,ಎಸ್.ಎಂ.ಕೃಷ್ಣ ನನ್ನ ತಂದೆಯ ಸಮಾನ.ಅವರ ಹುಟ್ಟಿದ ಹಬ್ಬಕ್ಕೆ ಶುಭಕೋರಲು ಬಂದಿದ್ದೆ.ಮೊನ್ನೆ ಹಬ್ಬದ ಸಂದರ್ಭದಲ್ಲೂ ಬಂದಿದ್ದೆ.ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ಇಲ್ಲ.ನಮ್ಮದೇನಿದ್ದರೂ ತೆರೆದ ಪುಸ್ತಕವಿದ್ದಂತೆ.ಏನೇ ಮಾತನಾಡುವುದಿದ್ದರೂ ಬಹಿರಂಗವಾಗೇ ಆಡುತ್ತೇನೆ.ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು.

ಜಿ.ಟಿ.ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಯಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್.‌ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಕಾರ್ಯಕರ್ತ, ಸಚಿವ.ನನ್ನ ಬಗ್ಗೆ ಮಾತ್ರ ನಾನು ಪ್ರತಿಕ್ರಿಯೆ ನೀಡಬಲ್ಲೆ.ಬೇರೆಯವರ ವಿಷಯಕ್ಕೆ ಪ್ರತಿಕ್ರಯಿಸಲು ಸಾಧ್ಯವಿಲ್ಲ.ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು.ನಾವಂತೂ ಪಾಲನೆ ಮಾಡಿದ್ದೇವೆ.
ಅವರೂ ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ ಶಿವಕುಮಾರ್,ಕನಸು ಕಾಣುವವರಿಗೆ ಆಸೆ ಪಡುವವರಿಗೆ ನಾವು ಬೇಡ ಅಂತಾ ಹೇಳೋಕಾಗಲ್ಲ,ಕನಸು ಕಾಣಲಿ,ಆಸೆ ಪಡಲಿ,ಖುಷಿಯಾಗಿರಲಿ,ಕನಸಿನಲ್ಲಿ ಸಂತೋಷವಾಗಿರುವವರಿಗೆ ನಾವು ಬೇಡ ಅನ್ನಲು ಸಾಧ್ಯವೇ ಎಂದು ಟಾಂಗ್ ನೀಡಿದರು.
Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.