ಬೆಂಗಳೂರು: ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ, ಅಭ್ಯರ್ಥಿಗಳ ಬಂಧನ ಮಾಡುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಲೆಕ್ಟ್ರಾನಿಕ್ ಬ್ಲೂ ಟುತ್ ಡಿವೈಸ್ ಪೋನ್ ಬಳಸಿ ನಕಲು:
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಳಿನಿಕೇತನ್ ಎಜುಕೇಷನ್ ಟ್ರಸ್ಟ್ ಬಳಿ ನಡೆಯುತ್ತಿದ್ದ, ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಹನುಮಂತ ಗಂಗಪ್ಪ ಬಿಲ್ಲೂರ್ ಎಂಬಾತ ನಕಲು ಮಾಡುತ್ತಿದ್ದ. ಈತ ಒಂದು ಚಿಕ್ಕ ಬ್ಲೂ ಟುತ್ ಇಯರ್ ಫೋನ್ ಯಾರಿಗೂ ಕಾಣದಂತೆ ಕಿವಿಗೆ ಹಾಕಿಕೊಂಡು, ಸಿಮ್ ಕಾರ್ಡ್ ಹಾಕಿರುವ ಡಿವೈಸ್ನನ್ನು ಶರ್ಟ್ ಒಳಭಾಗದಲ್ಲಿ ಅಂಟಿಸಿಕೊಂಡು ಮೂರನೇ ವ್ಯಕ್ತಿಯಿಂದ ದೂರವಾಣಿ ಮೂಲಕ ಉತ್ತರ ಪಡೆದು ಬರೆಯುತ್ತಿದ್ದ. ಅನುಮಾನಗೊಂಡ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಅಭ್ಯರ್ಥಿ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಆತನ ಸ್ನೇಹಿತನ ಬಂಧನ:
ಸಾಗರ್ ವಡ್ಡರ್ ಪರಾವಾಗಿ ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯಲು ಬಂದಿದ್ದಾನೆ. ಪರೀಶೀಲನೆ ಮಾಡಿದಾಗ ಸಾಗರ್ ವಡ್ಡರ್ ಎಂಬಾತನ ಬದಲು ಗುರುನಾಥ್ ವಡ್ಡಾರ್ ಬರೆಯುತ್ತಿದ್ದ. ಬಂಧಿಸಿ ಇ ತನಿಖೆ ವೇಳೆ ರಾಮು ಎಂಬುವವನ ಸೂಚನೆ ಮೇರೆಗೆ ಪರೀಕ್ಷೆ ಬರೆಯಲು ಬಂದಿದ್ದಾಗಿ ತಿಳಿಸಿದ್ದಾನೆ. ಪರೀಕ್ಷೇಗೆ ಅನೂಕೂಲಕವಾಗುವ ನಿಟ್ಟಿನಲ್ಲಿ ರಾಮು ಎಂಬುವವನು ಸಾಗರ್ ವಡ್ಡರ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ತಯಾರಿಸಿದ್ದ. ಈ ಹಿಂದೆ ಅನೇಕ ಪೊಲೀಸ್ ಲಿಖಿತ ಪರೀಕ್ಷೆಗಳನ್ನು ಬರೆದಿದ್ದು, ಫಲಿತಾಂಶಕ್ಕೆ ಕಾಯುತ್ತಿದ್ದ. ಸರಿಯಾದ ಪೋಸ್ಟ್ ಸಿಗದ ಕಾರಣ ಈ ರೀತಿ ಮಾಡಿ ಸದ್ಯ ಬಂಧನವಾಗಿದ್ದಾನೆ.
ಭೀಮಾನಗರದ ಪೊಲೀಸ್ ಠಾಣಾ ಸರಹದ್ದಿನ ಸೆಕ್ರೆಡ್ ಹಾರ್ಟ್ ಬಾಲಕಿಯರ ಪ್ರೌಢಶಾಲೆಯಲ್ಲಿ 400 ಅಭ್ಯರ್ಥಿಗಳ ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಸಿದ್ಸಾರೂಢಾ ವೈ ಬನಾಜ್ ಎಂಬ ಹೆಸರಿನ ಅಭ್ಯರ್ಥಿ ಬದಲಾಗಿ ಮಹಾತೆಶ್ ಎಂಬ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದ. ಈತನನ್ನು ಬಂಧಿಸಲಾಗಿದೆ. ಸದ್ಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಹಲವಾರು ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ತನಿಖೆ ನಡೆಯುತ್ತಿದೆ.