ಬೆಂಗಳೂರು: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಕೋವಿಡ್ -19 ಲಸಿಕೆಗಳ ದರವನ್ನು ಪ್ರತಿ ಲಸಿಕೆಯ ಡೋಸ್ಗೆ ತೆರಿಗೆ ಹಾಗೂ ಸೇವಾ ಶುಲ್ಕವನ್ನು 150 ರೂ. ನಿಗದಿಪಡಿಸಿತ್ತು. ಇದರೊಂದಿಗೆ ಲಸಿಕಾ ಖರೀದಿಯ ವೆಚ್ಚವೂ ಸೇರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ವ್ಯಕ್ತಿಗೆ ಈ ಕೆಳಗಿನಂತೆ ದರ ನಿಗದಿಪಡಿಸಲಾಗಿದೆ.
1) ಕೋವಿಶೀಲ್ಡ್ - ರೂ.780
2) ಕೋವ್ಯಾಕ್ಸಿನ್- ರೂ.1410
3) ಸ್ಪುಟ್ನಿಕ್ ವಿ- ರೂ.1145
ಹೀಗಾಗಿ ಹಿಂದಿನ ಲಸಿಕಾ ತಯಾರಕರು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ನಿಗದಿಪಡಿಸಿದ ದರದ ಜೊತೆಗೆ ಇದ್ದ 100 ರೂ. ಸೇವಾಶುಲ್ಕ ಹಾಗೂ ನಂತರ ರಾಜ್ಯ ಸರ್ಕಾರ ಮರುನಿಗದಿಪಡಿಸಿದ 200 ರೂ. ಸೇವಾಶುಲ್ಕ ಎರಡನ್ನೂ ರದ್ದು ಮಾಡಿ, ಹೊಸ ಸೇವಾಶುಲ್ಕ 150 ರೂ. ನಿಗದಿಪಡಿಸಲಾಗಿದೆ.