ಬೆಂಗಳೂರು : ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜನಸಂದಣಿ ತಪ್ಪಿಸಲು ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಇತ್ತ ನಗರದಲ್ಲಿ ಹೆಚ್ಚುತ್ತಿರುವ ಸೋಂಕು ಹಳ್ಳಿಗಳಿಗೂ ಆವರಿಸಿದ್ದು, ಆತಂಕ ಹೆಚ್ಚಿಸಿದೆ. 3ನೇ ಅಲೆಗೆ ನಗರ ಪಟ್ಟಣಗಳ ಜತೆ ಹಳ್ಳಿಗಳು ತತ್ತರಿಸುತ್ತಿವೆ.
ಈಗಾಗಲೇ ರಾಜ್ಯದಲ್ಲಿ ನಿತ್ಯ ಪಾಸಿಟಿವ್ ಕೇಸ್ 30 ಸಾವಿರ ದಾಟಿವೆ. ಕೆಲವೊಂದು ನಗರ, ಪಟ್ಟಣಗಳ ಜತೆ ಸೇಫ್ ಇದ್ದ ಹಲವು ಹಳ್ಳಿಗಳು ಇದೀಗ ಡೇಂಜರ್ ಝೋನ್ ತಲುಪಿವೆ.
ರಾಜ್ಯದ 30 ಜಿಲ್ಲೆಗಳ ಹಳ್ಳಿಗಳ ಪೈಕಿ 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗುತ್ತಿದೆ. ಕಳೆದ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 274 ನಗರ-ಪಟ್ಟಣಗಳಿವೆ. 148 ನಗರ-ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಸೋಂಕಿನ ಆರ್ಭಟ ಹೆಚ್ಚಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಡೇಂಜರ್ ಹಂತದಲ್ಲಿರುವ ರಾಜ್ಯದ ಟಾಪ್ 20 ಹಳ್ಳಿಗಳು ಮತ್ತು ದಾಖಲಾದ ಪ್ರಕರಣಗಳು
ಕ್ರ.ಸಂ | ಜಿಲ್ಲೆ | ಹಳ್ಳಿ | ದಾಖಲಾದ ಕೇಸ್ |
---|---|---|---|
1 | ಬೆಳಗಾವಿ | ಗಿರಿಯಾಳ | 139 |
2 | ಉಡುಪಿ | ಚಂತರು | 64 |
3 | ಬೆಂಗಳೂರು ನಗರ | ಕಣ್ಣೂರು | 125 |
4 | ಮಂಡ್ಯ | ಮೆಲ್ಲಹಳ್ಳಿ | 54 |
5 | ಬೆಂಗಳೂರು | ಕೆ.ಜಿ ತರಳು | 51 |
6 | ಬೆಂಗಳೂರು | ತಿಗಳಚೌಡೇನಹಳ್ಳಿ | 52 |
7 | ದಾವಣಗೆರೆ | ಕೊಂಡಜ್ಜಿ | 48 |
8 | ಹಾಸನ | ಕೆಂಚಟ್ಟವಳ್ಳಿ | 46 |
9 | ಬೆಂಗಳೂರು | ರಾಮೋಹಳ್ಳಿ | 46 |
10 | ಚಾಮರಾಜನಗರ | ರಿಸರ್ವರ್ಡ್ ಫಾರೆಸ್ಟ್ | 45 |
11 | ಬೆಂಗಳೂರು | ಚೀಮಸಂದ್ರ | 44 |
12 | ಬೆಂಗಳೂರು | ಸೋಮನಹಳ್ಳಿ | 44 |
13 | ಬೆಂಗಳೂರು | ಸೋಲದೇವನಹಳ್ಳಿ | 40 |
14 | ಬೆಂಗಳೂರು | ಹೆಸರಘಟ್ಟ | 38 |
15 | ಬೆಂಗಳೂರು | ಮಾಚೊಹಳ್ಳಿ | 34 |
16 | ಬೆಂಗಳೂರು | ತಾವರೆಕೆರೆ | 34 |
17 | ಮಂಡ್ಯ | ಚಿನಕುರಳಿ | 36 |
18 | ಮೈಸೂರು | ಆಲನಹಳ್ಳಿ | 34 |
19 | ಬೆಂಗಳೂರು | ಬೂದಿಗೆರೆ | 33 |
20 | ಬೆಂಗಳೂರು | ಹಾಲನಾಯಕನಹಳ್ಳಿ | 33 |
ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 2.7 ಲಕ್ಷ ಕೋವಿಡ್ ಕೇಸ್ ಪತ್ತೆ; ಸಕ್ರಿಯ ಪ್ರಕರಣಗಳು 225 ದಿನಗಳಲ್ಲೇ ಹೆಚ್ಚು