ETV Bharat / state

ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಇಳಿಕೆ.. ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ! - ಕರ್ನಾಟಕ ಹೊಸ ಮಾರ್ಗಸೂಚಿ

ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಇಳಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

new Guidelines released by Karnataka government, Karnataka Omicron report, Karnataka new guidelines, Karnataka covid report, ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ, ಕರ್ನಾಟಕ ಒಮಿಕ್ರಾನ್​ ವರದಿ, ಕರ್ನಾಟಕ ಹೊಸ ಮಾರ್ಗಸೂಚಿ, ಕರ್ನಾಟಕ ಕೋವಿಡ್​ ವರದಿ,
ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
author img

By

Published : Feb 15, 2022, 11:01 PM IST

ಬೆಂಗಳೂರು: ರಾಜ್ಯದಲ್ಲಿನ ಪ್ರಚಲಿತ ಕೋವಿಡ್ ಪರಿಸ್ಥಿತಿಯನ್ನು ಆಧರಿಸಿ ಸೋಂಕು ಉಲ್ಬಣಗೊಳ್ಳುವುದನ್ನು ಅದರಲ್ಲೂ ಪ್ರಮುಖವಾಗಿ ಒಮಿಕ್ರಾನ್ ಸೋಂಕಿನ ಹರಡುವಿಕೆ ನಿಯಂತ್ರಿಸಲು ಜನವರಿ 4 ರಿಂದ ಫೆಬ್ರವರಿ 15ರ ವರೆಗೆ ನಿಯಂತ್ರಣ ಕ್ರಮಗಳನ್ನ ಜಾರಿಗೊಳಿಸಿತ್ತು. ಇದೀಗ ಸರ್ಕಾರದ ನಿಯಂತ್ರಣ ಕ್ರಮದ ಆದೇಶ ಮುಗಿದ ಕಾರಣಕ್ಕೆ ಪರಿಷ್ಕೃತ ಆದೇಶ ಹೊರಡಿಸಿದೆ.

new Guidelines released by Karnataka government, Karnataka Omicron report, Karnataka new guidelines, Karnataka covid report, ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ, ಕರ್ನಾಟಕ ಒಮಿಕ್ರಾನ್​ ವರದಿ, ಕರ್ನಾಟಕ ಹೊಸ ಮಾರ್ಗಸೂಚಿ, ಕರ್ನಾಟಕ ಕೋವಿಡ್​ ವರದಿ,
ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಸದ್ಯ ರಾಜ್ಯದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಮತ್ತು ಪರೀಕ್ಷೆಯ ಪಾಸಿಟಿವ್ ದರದಲ್ಲಿ ಸ್ಥಿರವಾಗಿ ಇಳಿಕೆ ಕಂಡು ಬರುತ್ತಿದೆ. ರಾಜ್ಯದಲ್ಲಿನ ಕೋವಿಡ್ ಪ್ರಕರಣಗಳ ಹೊರೆ ಇನ್ನೂ ಕಡಿಮೆ ಮಾಡಲು ಕೋವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕಾಕರಣ ಮತ್ತು ಕೋವಿಡ್ ವರ್ತನೆಗಳನ್ನು( ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು, ಸ್ವಚ್ಛತೆಗೆ ಗಮನ ಕೊಡುವುದು) ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ಕಾರ್ಯತಂತ್ರಗಳನ್ನು ಮುಂದುವರೆಸುವಂತೆ ಆದೇಶಿಸಲಾಗಿದೆ.

ಓದಿ: ಸಿಲಿಂಡರ್ ಬೆಲೆ ಏರಿಕೆ ಪರಿಣಾಮ.. ಮತ್ತೆ ಸೌದೆ ಒಲೆಗೆ ಮೊರೆ ಹೋಗುತ್ತಿರುವ ಉಜ್ವಲ್ ಯೋಜನೆ ಫಲಾನುಭವಿಗಳು

ಈ ಮಾರ್ಗಸೂಚಿಗಳನ್ನು ರಾಜ್ಯಾದ್ಯಂತ ಫೆಬ್ರವರಿ 28 ರ ವರೆಗೆ ಮುಂದುವರೆಸಿ ಆದೇಶಿಸಲಾಗಿದೆ. ಇವುಗಳನ್ನು ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಇತರ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.

ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈಗಾಗಲೇ ಹೊರಡಿಸಿರುವ ಸುತ್ತೋಲೆಯಂತೆ ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಕಣ್ಣಾವಲು ಇರಿಸುವುದನ್ನು ಮುಂದುವರೆಸುವಂತೆ ಆದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.