ಬೆಂಗಳೂರು : ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಶಾಸಕ ಜಮೀರ್ ಗೋಲಿಬಾರ್ನಲ್ಲಿ ಸತ್ತವರಿಗೆ 5 ಲಕ್ಷ ರೂ ಕೊಟ್ಟಿದ್ದರು.
2 ಲಕ್ಷ ರೂ. ಪರಿಹಾರ ನೀಡಿರುವ ಇಮ್ರಾನ್ ಪಾಷಾ ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ತನಿಖೆ ಹಂತದಲ್ಲಿರುವಾಗಲೇ ಲಕ್ಷ ಲಕ್ಷ ಹಣ ನೀಡುತ್ತಿರುವುದು ಇವರು ಅಮಾಯಕರ ಪರನಾ..? ಅಥವಾ ಕಿಡಿಗೇಡಿಗಳ ಬೆನ್ನಿಗೆ ನಿಂತಿದ್ದಾರಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

ಇಮ್ರಾನ್ ಪಾಷ ಪಾದರಾಯನಪುರದ ಕಾರ್ಪೋರೇಟರ್ ಆಗಿದ್ದು, ಈ ಹಿಂದೆ ಪಾದರಾಯನಪುರ ಕೊರೊನಾ ವಾರಿಯರ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳು ಅಮಾಯಕರು ಎಂದು ಇದೇ ರೀತಿ ಸಹಾಯ ಮಾಡಿದ್ದರು. ಅಲ್ಲದೆ ಕೊರೊನಾ ನಿಯಮ ಮೀರಿ ಜೈಲು ಪಾಲಾಗಿದ್ದರು.