ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ಗಳು 110ಕ್ಕೆ ಏರಿಕೆ ಆಗಿವೆ. ಇಂದು ಒಂದೇ ದಿನದಲ್ಲಿ 9 ಪ್ರಕರಣಗಳು ದೃಢಪಟ್ಟಿದೆ. ನಂ 43, 101, 102 ರೋಗಿಗಳನ್ನು ವೆಂಟಿಲೇಟರ್ನಲ್ಲಿ ಇಡಲಾಗಿದೆ. ಇದುವರೆಗೂ ರೋಗಿ 1, 2, 3, 4, 5, 7, 8, 11,12 ಇಷ್ಟು ಜನರನ್ನ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ
*ರೋಗಿ-102* : 24 ವರ್ಷದ ಯುವಕ ಬೆಂಗಳೂರಿನ ನಿವಾಸಿಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲಾಗಿದೆ.
*ರೋಗಿ-103* : 37 ವರ್ಷದ ವ್ಯಕ್ತಿಯು ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿಯಾಗಿರುತ್ತಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಈ ವ್ಯಕ್ತಿಯು ರೋಗಿ 52 ಕೆಲಸ ನಿರ್ವಹಿಸುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
*ರೋಗಿ-104* : 27 ವರ್ಷದ ವ್ಯಕ್ತಿ, ನಂಜನಗೂಡು ಮೈಸೂರಿನ ನಿವಾಸಿಯಾಗಿದ್ದು, ಇವರ ಪ್ರಾಥಮಿಕ ತನಿಖೆಗಳ ಪ್ರಕಾರ, ರೋಗಿ 52 ಕೆಲಸ ನಿರ್ವಹಿಸುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಇರಿಸಲಾಗಿದೆ.
*ರೋಗಿ-105*: 33 ವರ್ಷದ ವ್ಯಕ್ತಿ ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು (P103 ಸಂಪರ್ಕಿತ). ಇವರನ್ನು ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
*ರೋಗಿ-106*: 49 ವರ್ಷದ ವ್ಯಕ್ತಿ ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇರುತ್ತದೆ. ಇವರು ಮಾರ್ಚ್ 20 ರಂದು ಭಾರತಕ್ಕೆ ಹಿಂದಿರುಗಿರುತ್ತಾರೆ. ಇವರನ್ನು ಪುತ್ತೂರು ತಾಲೂಕು ಆಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
*ರೋಗಿ-107*: 26 ವರ್ಷದ ವ್ಯಕ್ತಿ ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದು, ಸ್ಪೇನ್ ದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನಲೆ ಇದ್ದು, ಇವರು ಮಾರ್ಚ್ 18 ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಇವರನ್ನು ಬೆಂಗಳೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಇರಿಸಲಾಗಿದೆ.
*ರೋಗಿ108*: 63 ವರ್ಷದ ವ್ಯಕ್ತಿ ಕೇರಳ ರಾಜ್ಯದ ನಿವಾಸಿಯಾಗಿದ್ದು, ಜರ್ಮನಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಇವರು ಅಬುಧಾಬಿ ಮೂಲಕ ಬೆಂಗಳೂರಿಗೆ ಮಾರ್ಚ್ 21 ರಂದು ಹಿಂದಿರುಗಿರುತ್ತಾರೆ. ಇವರನ್ನು ನೇರವಾಗಿ ಕ್ವಾರಂಟೈನ್ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಪ್ರತ್ಯೇಕಿಸಲಾಗಿದೆ.
*ರೋಗಿ109*: 63 ವರ್ಷ ವ್ಯಕ್ತಿಯು ಮೈಸೂರಿನ ನಿವಾಸಿಯಾಗಿದ್ದು (ರೋಗಿ52 ರ ಸಂಪರ್ಕ) ಇವರ ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
*ರೋಗಿ110*: 27 ವರ್ಷದ ಮಹಿಳೆ, ಮೈಸೂರು ನಿವಾಸಿಯಾಗಿದ್ದು, ( ರೋಗಿ 52 ಅವರ ಪತ್ನಿ) ಇವರ ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ಒಟ್ಟು ರಾಜ್ಯದಲ್ಲಿ 110 ಸೋಂಕಿತರು ಪತ್ತೆ
ಬೆಂಗಳೂರು - 48
ಮೈಸೂರು - 19
ಚಿಕ್ಕಬಳ್ಳಾಪುರ - 9
ದಕ್ಷಿಣ ಕನ್ನಡ - 9
ಉತ್ತರ ಕನ್ನಡ - 8
ಕಲಬುರಗಿ - 4
ದಾವಣಗೆರೆ - 3
ಉಡುಪಿ - 3, ಕೊಡಗು - 1, ಧಾರವಾಡ - 1, ತುಮಕೂರು - 2
ರಾಜ್ಯದಲ್ಲಿ 110ಕ್ಕೆ ಏರಿಕೆ ಆದ ಕೋವಿಡ್-19; ಮೂವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ.. - ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಳ
ಕರ್ನಾಟಕದಲ್ಲಿ ದಿನೇ ದಿನೆ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂದು ಒಂದೇ ದಿನದಲ್ಲಿ ಹೊಸದಾಗಿ 9 ಪ್ರಕರಣಗಳು ದೃಢಪಟ್ಟಿವೆ.
![ರಾಜ್ಯದಲ್ಲಿ 110ಕ್ಕೆ ಏರಿಕೆ ಆದ ಕೋವಿಡ್-19; ಮೂವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ.. corona](https://etvbharatimages.akamaized.net/etvbharat/prod-images/768-512-6625026-thumbnail-3x2-chai.jpg?imwidth=3840)