ETV Bharat / state

ರಾಜ್ಯ, ದೇಶಾದ್ಯಂತ ಇಂದು ಕೊರೊನಾ ಲಸಿಕೆ ಡ್ರೈ ರನ್‌

ರಾಜ್ಯದ ಎಲ್ಲ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಜ.2ರಂದು ರಾಜ್ಯದ 5 ಜಿಲ್ಲೆಗಳಲ್ಲಿ ಡ್ರೈ ರನ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

corona-vaccine-dry-run-in-all-districts-across-karnataka-today
ಕೊರೊನಾ ಲಸಿಕೆ ಡ್ರೈ ರನ್‌
author img

By

Published : Jan 8, 2021, 8:10 AM IST

ಬೆಂಗಳೂರು/ ನವದೆಹಲಿ: ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ದೇಶಾದ್ಯಂತ ಇಂದು ನಡೆಯಲಿದೆ.

ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ನೋಂದಣಿ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಜ.2ರಂದು ರಾಜ್ಯದ 5 ಜಿಲ್ಲೆಗಳಾದ ಬೆಂಗಳೂರು, (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಡ್ರೈ ರನ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಹಾಗೆಯೇ ದೇಶಾದ್ಯಂತ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ತಿಳಿಸಿದ್ದಾರೆ.

ಬೆಂಗಳೂರಿನ 8 ವಲಯಗಳ ಆಸ್ಪತ್ರೆಗಳಲ್ಲಿ ಡ್ರೈ ರನ್​:

  • ಬೊಮ್ಮನಹಳ್ಳಿ ವಲಯ - ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
  • ದಾಸರಹಳ್ಳಿ ವಲಯ - ಸಪ್ತಗಿರಿ ಮೆಡಿಕಲ್ ಕಾಲೇಜು
  • ಈಸ್ಟ್ ವಲಯ - ಹಲಸೂರು ರೆಫೆರಲ್ ಆಸ್ಪತ್ರೆ
  • ಮಹದೇವಪುರ ವಲಯ - ಕೆ.ಆರ್.ಪುರಂ ಜನರಲ್ ಆಸ್ಪತ್ರೆ
  • ಆರ್.ಆರ್.ನಗರ - ಕೆಂಗೇರಿ ಪಿಹೆಚ್‌ಸಿ
  • ಸೌಥ್ ವಲಯ - ಕಿಮ್ಸ್ ಆಸ್ಪತ್ರೆ
  • ವೆಸ್ಟ್ ವಲಯ - ಬಿಎಂಸಿ
  • ಯಲಹಂಕ ವಲಯ - ಆಸ್ಟ್ರೋ ಸಿಎಂಐ ಆಸ್ಪತ್ರೆ

ಎಲ್ಲೆಲ್ಲಿ ಡ್ರೈ ರನ್ ?

1. ಜಿಲ್ಲಾ ಆಸ್ಪತ್ರೆ/ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ

2. ತಾಲೂಕು ಆಸ್ಪತ್ರೆ

3. ಸಮುದಾಯ ಆರೋಗ್ಯ ಕೇಂದ್ರ

4. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ಪ್ರಾಥಮಿಕ ಆರೋಗ್ಯ ಕೇಂದ್ರ

5. ಖಾಸಗಿ ವೈದ್ಯಕೀಯ ಕಾಲೇಜು /100ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆ

ಈ ಸುದ್ದಿಯನ್ನೂ ಓದಿ: ಬಸ್​ ದರ ಇಳಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಕರಾರಸಾ ನಿಗಮ!

ಡ್ರೈ ರನ್ ಚಟುವಟಿಕೆಯು ವಾಸ್ತವಿಕ ಕೋವಿಡ್-19 ಲಸಿಕಾಕರಣ ಹೊರತುಪಡಿಸಿ ಪ್ರಾರಂಭದಿಂದ ಅಂತ್ಯದವರೆಗಿನ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಪರೀಕ್ಷಿಸುತ್ತದೆ ಮತ್ತು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ.

  • ಕೋವಿಡ್-19 ಲಸಿಕೆ ಪರಿಚಯಕ್ಕಾಗಿ ಲಸಿಕಾಕರಣದ ಕಾರ್ಯಾಚರಣೆಯ ಮಾರ್ಗಸೂಚಿಯ ಅನುಸಾರ ಇರುವ ಪೂರ್ವಪೇಕ್ಷಿತಗಳು ಮತ್ತು ಕೋವಿಡ್ ಪೋರ್ಟಲ್​​ನ ಉಪಯೋಗಗಳನ್ನು ಯೋಜನೆ ಮತ್ತು ಸಿದ್ಧತೆಗಳು ಒಳಗೊಂಡಿರುವುದು.
  • ಫಲಾನುಭವಿಗಳು ಮತ್ತು ಲಸಿಕಾ ಮಾಹಿತಿಯನ್ನು ಇಂದೀಕರಿಸುವುದು.
  • ಲಸಿಕಾ ದಾಖಲೆಗಳನ್ನು ಪರಿಶೀಲಿಸುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.