ETV Bharat / state

ಚೆನ್ನೈ ಸಲೂನ್ ಮಾಲೀಕನಿಗೆ ಕೊರೊನಾ: ರಾಜ್ಯಕ್ಕೂ ತಂದಿಟ್ಟಿದೆ ಭೀತಿ

author img

By

Published : Apr 30, 2020, 9:20 PM IST

ಲಾಕ್​ಡೌನ್​ನಿಂದಾಗಿ ದಿನೇ ದಿನೆ ತಲೆಕೂದಲು ಬೆಳೆಯುತ್ತಿದೆ ಎಂಬ ಚಿಂತೆ ಒಂದೆಡೆಯಾದರೆ. ಕ್ಷೌರದಂಗಡಿಗೆ ಹೋದರೆ ಕೊರೊನಾ ವೈರಸ್​​ ತಗುಲಿದೆ ಎಂಬ ಆತಂಕ ಇನ್ನೊಂದೆಡೆ ಕಾಡತೊಡಗಿದೆ. ಲಾಕ್​ಡೌನ್​ ವೇಳೆ ಕಟಿಂಗ್​ ಮಾಡಿಸಿಕೊಂಡ ಹಲವರಲ್ಲಿ ಕೊರೊನಾ ಹರಡಿದ್ದು, ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದೆ.

salon
ಚೆನ್ನೈ ಸಲೂನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ನೇನು ಲಾಕ್​ಡೌನ್​​ ಮೇ 3ಕ್ಕೆ ಅಂತ್ಯಗೊಳ್ಳಬಹುದು, ನಿತ್ಯದಂತೆ ಬದುಕಬಹುದು ಎಂದುಕೊಳ್ಳುವವರಿಗೆ ದಿನಕ್ಕೊಂದು ಆತಂಕ ಎದುರಾಗುತ್ತಲೇ ಇದೆ.

ಈಗಾಗಲೇ ನಗರದ ಕೆಲವೆಡೆ ಸಲೂನ್​ಗಳು ಅನಧಿಕೃತವಾಗಿ ತೆರೆದಿದೆ. ಎಲ್ಲವನ್ನೂ ತೆರೆಯಲು ಅಧಿಕೃತ ಆದೇಶ ಹೊರಡಿಸಬೇಕೆಂಬ ಒತ್ತಡವೂ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರ ತಲೆಯೂ ದಿನದಿಂದ ದಿನಕ್ಕೆ ಭಾರವಾಗುತ್ತಾ ಸಾಗಿದ್ದು, ಸಲೂನ್ ತೆರೆದರೆ ಸಾಕಪ್ಪ ಅನ್ನುವ ಸ್ಥಿತಿಯಲ್ಲಿ ಹಲವರಿದ್ದಾರೆ. ಆದರೆ, ದಿನಕ್ಕೊಂದು ಸುದ್ದಿ ಜನರನ್ನು ಆತಂಕಕ್ಕೆ ಈಡು ಮಾಡುತ್ತಿದೆ. ಕರೋನಾ ಭೀತಿಯಿಂದ ಇರುವ, ಬರುವ ಕೆಲಸ ಬಿಟ್ಟು ಮನೆಯಲ್ಲೇ ಕುಳಿತವರಿಗೆ ಇದೀಗ ಕೂದಲು ಕತ್ತರಿಸಿಕೊಳ್ಳಲು ತೆರಳೋಣ ಎಂದರೆ ಅದಕ್ಕೂ ಆತಂಕ ಎದುರಾಗಿದೆ. ಕಾರಣ ಪಕ್ಕದ ತಮಿಳುನಾಡಿನಲ್ಲಿ ಹೇರ್ ಕಟಿಂಗ್ ಸಲೂನ್ ಮಾಲೀಕನಿಗೇ ಕೊರೊನಾ ವಕ್ಕರಿಸಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶದಲ್ಲಿ ಸಲೂನ್​​ಗೆ ತೆರಳಿದ್ದವರಿಗೆ, ಕೂದಲು ಕತ್ತರಿಸುವ ವೃತ್ತಿ ನಡೆಸುತ್ತಿದ್ದವರಿಗೆ ಕೊರೊನಾ ಆಕ್ರಮಿಸಿದ ಸುದ್ದಿ ಆತಂಕ ಮೂಡಿಸಿದ್ದು, ಇತ್ತೀಚೆಗೆ ಅಂತಹ ಸುದ್ದಿ ಕೇಳದೇ ಕೆಲವರ ಮನಸ್ಸು ಕೊಂಚ ನಿರಾಳವಾಗಿತ್ತು. ಆದರೆ ಇದೀಗ ತಮಿಳುನಾಡಿನ ಪ್ರಕರಣ ರಾಜ್ಯ ಹಾಗೂ ಮಹಾನಗರದ ಜನರನ್ನು ಇನ್ನಷ್ಟು ಕಂಗೆಡಿಸಿದೆ.

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲಾ ಅರಸವರಲ್ಲಿ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಕ್ಷೌರ ಮಾಡಿದ್ದ ಸವಿತಾ ಸಮಾಜದ ವ್ಯಕ್ತಿಗೆ ಕೊರೊನಾ ಸೋಕು ಹರಡಿತ್ತು. ಕ್ಷೌರಿಕನಿಂದ ಕಟಿಂಗ್ ಮಾಡಿಸಿಕೊಂಡ ಗ್ರಾಹಕರಾದ ನಾಲ್ವರಿಗೂ ಸೋಂಕು ನಂತರದ ದಿನದಲ್ಲಿ ದೃಢಪಟ್ಟಿದ್ದು, ಭಾರೀ ಆತಂಕ ಮೂಡಿಸಿತ್ತು.

ಹಾಗೆಯೇ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಮನೆಗೆ ತೆರಳಿ ನಾಲ್ಕು ಕೊರೊನಾ ಸೋಂಕಿತ ವೃದ್ಧರಿಗೆ ಕ್ಷೌರ ಸೇವೆ ಮಾಡಿದ ಇಬ್ಬರು ಯುವಕರಿಗೆ ಸೋಂಕು ತಗುಲಿದ್ದು, ಇದೇ ಸಾಕಷ್ಟು ಜನರಿಗೆ ವ್ಯಾಪಿಸಿ ಆತಂಕ ಸೃಷ್ಟಿಸಿತ್ತು.

ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಸಲೂನ್ ಮಾಲಿಕನಿಗೆ ಕೋವಿಡ್-19 ಸೋಂಕು ಹರಡಿದೆ. ಕೊಯಂಬೇಡು ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಈ ಸಲೂನ್ ಗೆ ಭೇಟಿ ನೀಡಿದ್ದ ಈರೋಡ್ ನ ಟ್ರಕ್ ಚಾಲಕನಿಗೂ ಸಹ ಕೋವಿಡ್-19 ಸೋಂಕು ತಗುಲಿದೆ. ಕೊಯಂಬೇಡುವಿನ ಮಾರ್ಕೆಟ್ ಬಳಿ ಈ ಸಲೂನ್ ಇದ್ದು, ಇಲ್ಲಿಗೆ ಭೇಟಿ ನೀಡಿದ್ದ 7 ಗ್ರಾಹಕರನ್ನು ಕ್ವಾರಂಟೇನ್ ನಲ್ಲಿರಿಸಲಾಗಿದೆ. ಇವರುಗಳ ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನು ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಸಲೂನ್‍ಗೆ ತೆರಳಿದ್ದ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಆರು ಮಂದಿಗೂ ಕ್ಷೌರ ಹಾಗೂ ಗಡ್ಡ ತೆಗೆಯುವ ವೇಳೆ ಒಂದೇ ಬಟ್ಟೆಯನ್ನು ಬಳಸಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ರೀತಿ ವಿವಿಧ ರಾಜ್ಯಗಳಲ್ಲಿ ಕ್ಷೌರಕ್ಕೆ ತೆರಳಿದವರಿಗೇ ಕೊರೊನಾ ವಕ್ಕರಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಲಾಕ್‍ಡೌನ್‍ ಮುಗಿದ ನಂತರವೂ ಹಲವು ಸಲೂನ್‍ಗಳಿಗೆ ತೆರಳಲು ಜನ ಅಂಜುವ ಸ್ಥಿತಿ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.