ETV Bharat / state

‌ಮಾಜಿ ಮೇಯರ್ ಸಂಪತ್​​ ರಾಜ್​ಗೆ 3ನೇ ಬಾರಿ ಕೊರೊನಾ ಪಾಸಿಟಿವ್

ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್​ ಸಂಪತ್​​ ರಾಜ್​ ಅವರಿಗೆ 3ನೇ ಬಾರಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಯವರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

author img

By

Published : Oct 28, 2020, 10:43 AM IST

Bangalore
‌ಮಾಜಿ ಮೇಯರ್ ಸಂಪತ್​​ ರಾಜ್​ಗೆ 3ನೇ ಬಾರಿ ಕೊರೊನಾ ಪಾಸಿಟಿವ್

ಬೆಂಗಳೂರು: ಡಿ.ಜೆ.‌ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂದಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ‌ ಇಟ್ಟ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್​​ ರಾಜ್ ಆರೋಪಿಯಾಗಿದ್ದು, ಸದ್ಯ 3ನೇ ಬಾರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಮತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾದರೆ 14 ದಿನ, 20 ದಿನ ಅಥವಾ ಒಂದು ತಿಂಗಳಿನಲ್ಲಿ ಗುಣಮುಖರಾಗಬಹುದು. ಆದರೆ‌ ಎರಡು ತಿಂಗಳಾದರೂ ಮಾಜಿ ‌ಮೇಯರ್ ಸಂಪತ್​ ರಾಜ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿಲ್ಲವಂತೆ. ಖಾಸಗಿ ಆಸ್ಪತ್ರೆಯವರು ಮತ್ತೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂಪತ್​ ರಾಜ್ ಅವರ ಈ ನಡೆ ಬಹಳಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವ ಕಾರಣ ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯರ ತಂಡ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಲಿದೆ. ಈಗಾಗಲೇ ಸಿಸಿಬಿ ಆರೋಗ್ಯ ಇಲಾಖೆಗೆ ಪತ್ರ ಬರೆದ ಕಾರಣ ನುರಿತ ತಜ್ಙರ ತಂಡವನ್ನು ಸಿದ್ಧ ಮಾಡಲಾಗಿದೆ. ಈ ತಂಡ ಸಂಪತ್​ ಆರೋಗ್ಯ ತಪಾಸಣೆ ‌ಮಾಡಿ ಸಿಸಿಬಿ ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.