ಬೆಂಗಳೂರು: ಕಳೆದ ಒಂದು ವಾರದಿಂದ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿಯಂತ್ರಣ ಮೀರಿ ಹಬ್ಬುತ್ತಿದೆ. ಇಂದು 786 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,344ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಮೂವರು ಮೃತಪಟ್ಟಿದ್ದು, ಕೇವಲ 271 ಮಂದಿ ಗುಣಮುಖರಾಗಿದ್ದಾರೆ.
ಮಾ. 8ರಂದು ಬೆಂಗಳೂರಿನಲ್ಲಿ 283 ಜನರಿಗೆ ಸೋಂಕು ದೃಢಪಟ್ಟಿತ್ತು. ಮಾರ್ಚ್ 9ರಂದು 363, ಮಾರ್ಚ್ 10ರಂದು 488, ಮಾರ್ಚ್ 11ರಂದು 493, ಮಾರ್ಚ್ 12ರಂದು 620, ಮಾರ್ಚ್ 13ರಂದು 630, ಮಾ. 14ರಂದು 628, ಮಾರ್ಚ್ 15ರಂದು 550, ಮಾರ್ಚ್ 16ರಂದು 700, ಮಾರ್ಚ್ 17ರಂದು 786 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಓದಿ:ರಾಜ್ಯದಲ್ಲಿ ಮತ್ತೆ ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ, ನಾಲ್ವರು ಬಲಿ
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, 126 ದಿನಗಳ ಬಳಿಕ 700 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಬಿಟಿಎಂ ಲೇಔಟ್ನ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ತಮಿಳುನಾಡಿಗೆ ಸಂಬಂಧಿಕರ ಮದುವೆಗೆಂದು ಹೋಗಿ ವಾಪಸಾದ ಕುಟುಂಬಕ್ಕೆ ಕೋವಿಡ್ ದೃಢಪಟ್ಟಿದೆ. ಬಿಟಿಎಂ ಲೇಔಟ್ನಲ್ಲಿ ಪ್ರೆಸ್ಟಿನ್ ಗೋಲ್ಡ್ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈಗ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಸೋಂಕಿತರ ಸಂಖ್ಯೆ ಏರಿಕೆಯಾದ ಹಿನ್ನೆಲೆ ಕೋವಿಡ್ ಕೇರ್ ಸೆಂಟರ್ಗಳ ಸಿದ್ಧತೆ ನಡೆಯುತ್ತಿದೆ. ಬಂದ್ ಆಗಿದ್ದ ಒಟ್ಟು ಮೂರು ಕೇರ್ ಸೆಂಟರ್ಗಳನ್ನ ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ.