ಬೆಂಗಳೂರು : ಒಮಿಕ್ರಾನ್ ಸೋಂಕು ನಗರ ಪೊಲೀಸರಿಗೂ ವಕ್ಕರಿಸಿದೆ. ನಗರದ ಪಶ್ಚಿಮ ವಿಭಾಗದ ಬ್ಯಾಟರಾಯಪುರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿದೆ.
ನಿನ್ನೆ ಸಿಬ್ಬಂದಿಗೆ ಕೊರೊನಾ ವೈರಾಣು ಕಾಣಿಸಿದ ಹಿನ್ನೆಲೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ 60ಕ್ಕಿಂತ ಹೆಚ್ಚು ಸಿಬ್ಬಂದಿಗೂ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗಿದೆ. ಪರೀಕ್ಷೆ ವರದಿ ಇನ್ನಷ್ಟೇ ಕೈಸೇರಬೇಕಿದೆ.
ಮುಂಜಾಗ್ರತಾ ಕ್ರಮವಾಗಿ ಠಾಣೆಯೆಲ್ಲಾ ಸ್ಯಾನಿಟೈಸರ್ ಮಾಡಿಸಲಾಗಿದೆ. ಕೆಂಗೇರಿ ಸೇರಿದಂತೆ ಪಶ್ಚಿಮ ವಿಭಾಗದ ಬಹುತೇಕ ಪೊಲೀಸ್ ಠಾಣೆಗಳಿಗೂ ಸ್ಯಾನಿಟೈಸ್ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಡಿಸಿಪಿ ಸಂಜೀವ ಪಾಟೀಲ್ ತಾಕೀತು ಮಾಡಿದ್ದಾರೆ.
ಓದಿ: ಬೊಮ್ಮಾಯಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಆಮೆಗತಿ.. ಈ ಪ್ರಾಜೆಕ್ಟ್‌ಗೆ ವೇಗ ನೀಡುವರೇ ಸಿಎಂ!?