ಬೆಂಗಳೂರು: ಬಣ್ಣದ ಹಬ್ಬ ಹೋಳಿ ಬಂತು ಅಂದರೆ, ಉದ್ಯಾನ ನಗರಿ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ರಂಗಿನ ಹೋಳಿ ಜೋರಾಗಿ ಇರುತ್ತೆ. ಆದರೆ ಈ ಬಾರಿಯ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್ನ ಕರಿನೆರಳು ಬಿದಿದ್ದು ಜನ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ಇತ್ತ ಕೊರೊನಾ ಭೀತಿ ಹಿನ್ನೆಲೆ ಪಾಲಿಕೆಯ ಆಯುಕ್ತ ಅನಿಲ್ ಕುಮಾರ್ ಕೂಡ ಸಂದೇಶ ರವಾನಿಸಿದ್ದು, ಜನಸಂದಣಿ ಇರುವ ಜಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಸಭೆ-ಸಮಾರಂಭದಿಂದ ಹಿಡಿದು, ನಾಳೆ ಆಚರಿಸುವ ಹೋಳಿ ಹಬ್ಬದಂದು ಕೂಡ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.
ಸಾಮಾನ್ಯವಾಗಿ ಹೋಳಿ ಹಬ್ಬದಂದು ಖಾಸಗಿ ಹೋಟೆಲ್ಗಳಲ್ಲಿ ಸ್ವಿಮ್ಮಿಂಗ್ ಫೂಲ್ನಲ್ಲಿ ಬಣ್ಣ ತುಂಬಿ ಸಂಭ್ರಮಿಸುವುದೆಲ್ಲ ಮಾಡಲಾಗುತ್ತೆ. ಇಂತಹ ಪಾರ್ಟಿಗಳಿಂದ ದೂರವಿರುವಂತೆ ಸೂಚಿಸಲಾಗಿದೆ.