ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆ ಆಗಿದೆ. ಇದರಲ್ಲಿ ಈವರೆಗೆ ಒಟ್ಟು ಮೂವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಸೋಂಕಿತರ ಹಿಸ್ಟರಿ ಹೀಗಿದೆ:
ರೋಗಿ-56 : ದಕ್ಷಿಣ ಕನ್ನಡದ 10 ತಿಂಗಳ ಗಂಡು ಮಗುವಿನಲ್ಲಿ ಸೋಂಕು ದೃಢವಾಗಿದ್ದು, ಯಾವುದೇ ಕೋವಿಡ್-19 ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನಲೆ ಇರುವುದಿಲ್ಲ. ಪ್ರಕರಣವನ್ನ ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ. ಪ್ರಥಮ ಮಾಹಿತಿಗಳಂತೆ ಪೋಷಕರು ಮಗುವಿನೊಂದಿಗೆ ಕೆಲವು ದಿನಗಳ ಹಿಂದೆ ಕೇರಳ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಯಾಣ ಹಿನ್ನೆಲೆ ಇದ್ದು, ವಿಸ್ತೃತ ಮಾಹಿತಿ ಕಲೆ ಹಾಕಿ ತಪಾಸಣೆಯೂ ಪ್ರಗತಿಯಲ್ಲಿದೆ. ಪ್ರಾಥಮಿಕ ಸಂಪರ್ಕದಲ್ಲಿ 6 ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಇವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿರುತ್ತದೆ.
ರೋಗಿ-57: 20 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಕೊಲಂಬೋ ದೇಶಕ್ಕೆ ಪ್ರಯಾಣಿಸಿ, ಮಾರ್ಚ್ 15 ರಂದು ಭಾರತಕ್ಕೆ ಹಿಂದಿರುಗಿರುತ್ತಾರೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-58: 25 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 18ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-59: 35 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, P25 ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-6O: 60 ವರ್ಷದ ಪುರುಷ ತುಮಕೂರು ಜಿಲ್ಲೆಯ ನಿವಾಸಿಯಾಗಿದ್ದು, ದೆಹಲಿಗೆ ರೈಲು ಮುಖಾಂತರ ಮಾರ್ಚ್ 13 ರಂದು ಪ್ರಯಾಣ ಬೆಳೆಸಿರುತ್ತಾರೆ. ಇವರು ಮಾರ್ಚ್ 27 ರಂದು ಬೆಳಗ್ಗೆ ತುಮಕೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. 24 ಹೈರಿಸ್ಟ್ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿರುತ್ತದೆ. ಇವರುಗಳಲ್ಲಿ 13 ಪ್ರಕರಣಗಳನ್ನು ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ ಮತ್ತು 8 ನೆಗೆಟಿವ್ ಪ್ರಕರಣಗಳು ಹಾಗೂ 3 (ವೈದ್ಯಕೀಯ ಸಿಬ್ಬಂದಿ)ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ರೋಗಿ-61: 33 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು,P25ರ ಸಂಪರ್ಕ ವ್ಯಕ್ತಿ (ಮನೆ ಕೆಲಸದ ಮಹಿಳೆ) ಈ ಪ್ರಕರಣವನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ- 62: 22 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿದ್ದಾರೆ. ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-63:18 ವರ್ಷದ ಯುವಕ, ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದು, ಪ್ಯಾರಿಸ್ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ಮಾರ್ಚ್ 18 ರಂದು ಭಾರತಕ್ಕೆ ವಾಪಸಾಗಿರುತ್ತಾರೆ. ಪ್ರಕರಣವನ್ನು ದಾವಣಗೆರೆ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-64:21 ವರ್ಷದ ಯುವಕ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ಮಾರ್ಚ್ 22 ರಂದು ಭಾರತಕ್ಕೆ
ವಾಪಸಾಗಿರುತ್ತಾರೆ. ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ಇದುವರೆಗೂ P1,P2,P3,P4, ಮತ್ತು P5 ಸೋಂಕಿತರು ಗುಣಮುಖರಾಗಿದ್ದು, ಅವ್ರನ್ನ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ.. P5,P53,P60 (ಕಲಬುರಗಿಯಲ್ಲಿ ಒಬ್ಬ ಪುರುಷ, ಗೌರಿಬಿದನೂರಿನಲ್ಲಿ ಓರ್ವ ಮಹಿಳೆ, ತುಮಕೂರಿನ ಓರ್ವ ವ್ಯಕ್ತಿ) ಮಹಾಮಾರಿ ವೈರಸ್ಗೆ ಬಲಿಯಾಗಿದ್ದಾರೆ.