ETV Bharat / state

ಬಸ್​ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯದ ಪ್ರಸ್ತಾವನೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ - FREE BUS SERVICE

ಬಸ್​ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಸಚಿವ ರಾಮಲಿಂಗಾರೆಡ್ಡಿ ಪುರುಷರಿಗೆ ಉಚಿತ ಬಸ್ ಸೇವೆ ಇಲ್ಲ
ಸಚಿವ ರಾಮಲಿಂಗಾರೆಡ್ಡಿ (ETV Bharat)
author img

By ETV Bharat Karnataka Team

Published : Nov 15, 2024, 1:06 PM IST

ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್​​ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಂವಾದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಈ ವಿಷಯವನ್ನು‌ ಪ್ರಸ್ತಾಪಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರನ್ನು ಭೇಟಿ ಮಾಡಿದಾಗ ಈ ಕುರಿತು ವಿಚಾರಿಸುತ್ತೇನೆ. ಆದರೆ ಪುರುಷರಿಗೆ ಉಚಿತ ಬಸ್ ಸೇವೆ ನೀಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.

ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಹಿಂದೆ ಕಾಂಗ್ರೆಸ್ ಮುಖಂಡರೇ ಇದ್ದಾರೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಅಂದರೆ ಬುರುಡೆ ಜನತಾ ಪಕ್ಷ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ‌ ಮಾಡಿದ್ದು ಹೇಗೆ? ದೇಶದಲ್ಲಿ ಕಾಂಗ್ರೆಸ್​​ನ 214 ಸೇರಿ ಬೇರೆ ಬೇರೆ ಪಕ್ಷಗಳ 450 ಶಾಸಕರನ್ನು ಆಪರೇಷನ್ ಕಮಲ ಮೂಲಕ ಖರೀದಿಸಿದ್ದಾರೆ ಎಂದು ಆರೋಪಿಸಿದರು.

ಸಚಿವ ರಾಮಲಿಂಗಾರೆಡ್ಡಿ (ETV Bharat)

ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ಪ್ರಯತ್ನ ಮಾಡಿದೆ. ಆದರೆ ಯಶಸ್ವಿ ಆಗಲಿಲ್ಲ. ಕಾಂಗ್ರೆಸ್​​ನ ಯಾವ ಶಾಸಕರು ಆಮಿಷಕ್ಕೊಳಗಾಗಿ ಹೋಗಲ್ಲ ಎಂದರು. ಕೋವಿಡ್ ಹಗರಣ ಎಸ್​​ಐಟಿಗೆ ಕೊಡುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ, ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು.

ಶ್ರೀನಿವಾಸಮೂರ್ತಿ ವರದಿಯನ್ನು ಹಿಂದಿನ ಸರ್ಕಾರ ಸ್ವೀಕರಿಸಿದೆ. ವರದಿಯಲ್ಲಿನ ಕೆಲವು ಒಳ್ಳೆಯ ಅಂಶಗಳನ್ನು ಜಾರಿಗೊಳಿಸುತ್ತೇವೆ. ಈ ಬಗ್ಗೆ ಚರ್ಚೆ ಕೂಡ ನಡೆಸಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ 5,900 ಕೋಟಿ ರೂ ಸಾಲ ಮಾಡಿಟ್ಟು ಹೋಗಿದ್ದರು. ಜೊತೆಗೆ ಹಿಂದಿನ ಸರ್ಕಾರದಲ್ಲಿ ಯಾವುದೇ ನೇಮಕಾತಿ, ಬಸ್ ಖರೀದಿ ಆಗಿರಲಿಲ್ಲ. ಈಗ
ಈಗ ನಮ್ಮ ಸರ್ಕಾರ ಎಲ್ಲವನ್ನೂ ಸುಧಾರಣೆ ಮಾಡುತ್ತಿದೆ ಎಂದು ತಿಳಿಸಿದರು.

ನಷ್ಟದಲ್ಲಿರುವ ವಾಯುವ್ಯ ಸಾರಿಗೆಗೆ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಣಕಾಸು ಇಲಾಖೆಯ ಜೊತೆಗೆ ಮಾತನಾಡಿದ್ದೇವೆ. ಮುಂದಿನ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಅವರಲ್ಲಿ ಮನವಿ ಮಾಡುತ್ತೇವೆ. ಇನ್ನು ಸಾರಿಗೆ ಸಂಸ್ಥೆ ಲಾಭ ಉದ್ದೇಶದಿಂದ ಕಾರ್ಯ ನಿರ್ವಹಿಸಲ್ಲ. ಜನರ ಅನುಕೂಲಕ್ಕಾಗಿ ಸೇವೆ ಸಲ್ಲಿಸುತ್ತದೆ ಎಂದರು.

ನಮ್ಮ ನಾಲ್ಕು ನಿಗಮಗಳು ಸೇರಿ ಒಟ್ಟು 26 ಸಾವಿರಕ್ಕಿಂತಲ್ಲೂ ಹೆಚ್ಚು ಬಸ್​ಗಳಿವೆ. ದೇಶದಲ್ಲಿ ಅತೀ ಹೆಚ್ಚು ಬಸ್​ಗಳನ್ನು ಹೊಂದಿರುವ ಸಾರಿಗೆ ಸಂಸ್ಥೆ ನಮ್ಮದು. ಶಕ್ತಿ ಕಾರ್ಯಕ್ರಮ ಆರಂಭವಾದ ಬಳಿಕ 84 ಲಕ್ಷ ದಿಂದ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹೊಸ ಬಸ್​ ಖರೀದಿಸುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ 6200 ಬಸ್ ಖರೀದಿಗೆ ಆದೇಶ ನೀಡಿದ್ದೇವು. ಇದರಲ್ಲಿ ಈಗಾಗಲೇ 3400 ಬಸ್ ಬಂದಿವೆ. ಇನ್ನುಳಿದ ಬಸ್​ಗಳು ಎರಡ್ಮೂರು ತಿಂಗಳಲ್ಲಿ ಬರಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ವಾಯುವ್ಯ ಸಾರಿಗೆ ಸಂಸ್ಥೆಗೆ ಹೈಟೆಕ್ ಬಸ್​ಗಳ ಬಲ: ಈ ವಾಹನಗಳ ವಿಶೇಷತೆ ಏನ್​ ಗೊತ್ತಾ?

ಇದನ್ನೂ ಓದಿ: Watch.. ಅಪರೂಪದ ಘಟನೆ: ಒಂದೇ ಬಸ್​ನ ಕಂಡಕ್ಟರ್​ ಮತ್ತು ಡ್ರೈವರ್​ ಆಗಿ ಕರ್ತವ್ಯ ನಿರ್ವಹಿಸಿದ ತಾಯಿ - ಮಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.