ETV Bharat / state

ರಾಜ್ಯದಲ್ಲಿ ಕೊರೊನಾ ಹಾವು ಏಣಿಯಾಟ: ಮೇಲುಗೈ ಸಾಧಿಸುತ್ತಿವೆ ಸಕ್ರಿಯ ಪ್ರಕರಣಗಳು! - Corona in Karnataka

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ಮೈಸೂರಿನ ಜುಬಿಲಂಟ್​ ಕಾರ್ಖಾನೆ ಘಟನೆ ನಂತರ ತಬ್ಲಿಘಿಗಳ ಪ್ರಕರಣ, ಪಾದರಾಯನಪುರ ಕೇಸ್, ಮಹಾರಾಷ್ಟ್ರ ಪ್ರವಾಸ, ಗುಜರಾತ್ ಪ್ರವಾಸ ಹಿನ್ನೆಲೆ, ಅಜ್ಮೀರ್​​ನಿಂದ ವಾಪಸಾದವರ ಘಟನೆ... ಹೀಗೆ ಒಂದಾದ ನಂತರ ಮತ್ತೊಂದು ಘಟನೆಗಳು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವಲ್ಲಿ ಪ್ರಮುಖ ಕಾರಣ ಎನ್ನಲಾಗುತ್ತಿದೆ.

Corona active cases in Karnataka
ರಾಜ್ಯದಲ್ಲಿ ಕೊರೊನಾ
author img

By

Published : May 15, 2020, 12:01 AM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ಹಾವು ಏಣಿಯಾಟದಲ್ಲಿ ಸಕ್ರಿಯ ಪ್ರಕರಣಗಳು ಮತ್ತೆ ಮೇಲುಗೈ ಸಾಧಿಸಿವೆ. ಸತತ ಐದು ದಿನಗಳ ನಂತರ ಈ ಸಂಖ್ಯೆ ಮತ್ತೆ ಹೆಚ್ಚಾಗಿದೆ.

ಹೌದು, ಮಾ. 8ರಂದು ರಾಜ್ಯದಲ್ಲಿ ಮೊದಲು ಪಾಸಿಟಿವ್ ಪ್ರಕರಣ ದೃಢಪಟ್ಟಿತ್ತು. ಅಲ್ಲಿಂದ ದಿನೇ ದಿನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಾ ಬಂದಿದ್ದು, ಇಂದಿಗೆ ಸೋಂಕಿತರ ಸಂಖ್ಯೆ 951ಕ್ಕೆ ತಲುಪಿದೆ. ಇನ್ನೇನು ಸಾವಿರ ಸಂಖ್ಯೆ ತಲುಪುವ ಸನಿಹದಲ್ಲಿದೆ.

ಸೋಂಕು ಕಾಣಿಸಿಕೊಂಡ ದಿನದಿಂದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಗುಣಮುಖರಾದವರ ಸಂಖ್ಯೆಗಿಂತ ಜಾಸ್ತಿಯೇ ಇತ್ತು. ಪ್ರತಿ ದಿನ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಾ ಬಂದರೂ ಹೊಸದಾಗಿ ಸೋಂಕಿತರಾಗುವವರ ಸಂಖ್ಯೆಯೂ ಜಾಸ್ತಿಯಾಗುತ್ತಾ ಬಂದ ಕಾರಣ ಸಕ್ರಿಯ ಪ್ರಕರಣ​ ಮತ್ತು ಗುಣಮುಖರಾದವರ ಸಂಖ್ಯೆಯ ಹಾವು ಏಣಿಯಾಟದಲ್ಲಿ ಸಕ್ರಿಯ ಪ್ರಕರಣಗಳದ್ದೇ ಮೇಲುಗೈಯಾಗಿತ್ತು.

ಆದರೆ, ಮೇ 4ರಂದು ಮೊದಲ ಬಾರಿಗೆ ಆ್ಯಕ್ಟೀವ್ ಕೇಸ್​ಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿ ಗುಣಮುಖರಾದವರ ಸಂಖ್ಯೆ ಮೇಲುಗೈ ಸಾಧಿಸಿತ್ತು. ಮೇ 4ರಂದು ಗುಣಮುಖರಾದವರ ಸಂಖ್ಯೆ 318 ಆ್ಯಕ್ಟೀವ್ ಕೇಸ್ ಸಂಖ್ಯೆ 311 ಆಗಿತ್ತು. ಅದು ಮೇ 5ರಂದು ಗುಣಮುಖರಾದವರ ಸಂಖ್ಯೆ 340, ಆ್ಯಕ್ಟೀವ್ ಕೇಸ್ ಸಂಖ್ಯೆ 322, ಮೇ 6ರಂದು ಗುಣಮುಖರಾದವರ ಸಂಖ್ಯೆ 353, ಆ್ಯಕ್ಟೀವ್ ಕೇಸ್ ಸಂಖ್ಯೆ 318, ಮೇ 7ರಂದು ಗುಣಮುಖರಾದವರ ಸಂಖ್ಯೆ 362, ಆ್ಯಕ್ಟೀವ್ ಕೇಸ್ ಸಂಖ್ಯೆ 329, ಮೇ 8ರಂದು ಗುಣಮುಖರಾದವರ ಸಂಖ್ಯೆ 374, ಆ್ಯಕ್ಟೀವ್ ಕೇಸ್ ಸಂಖ್ಯೆ 370 ಇದ್ದು, ಈ ಐದು ದಿನವೇ ಗುಣಮುಖ ಹಾಗೂ ಆ್ಯಕ್ಟೀವ್ ಕೇಸ್​ಗಳ ಹಾವು ಏಣಿಯಾಟದಲ್ಲಿ ಗುಣಮುಖರಾದವರ ಸಂಖ್ಯೆಯೇ ಮೇಲುಗೈ ಸಾಧಿಸಿತ್ತು.

ಆದರೆ, ಮೇ9 ರಂದು ಮತ್ತೆ ಆ್ಯಕ್ಟೀವ್ ಕೇಸ್​ಗಳು ಮೇಲುಗೈ ಸಾಧಿಸಿದವು. ಗುಣಮುಖರಾದವರ ಸಂಖ್ಯೆ 396 ಇದ್ದರೆ ಆ್ಯಕ್ಟೀವ್ ಕೇಸ್​ಗಳ ಸಂಖ್ಯೆ 484 ಆಗಿತ್ತು. ಅದು ಇಂದಿನವರೆಗೂ ಮುಂದುವರದಿದ್ದು, ಆ್ಯಕ್ಟೀವ್ ಕೇಸ್ 484 ಇದ್ದು, ಗುಣಮುಖರಾದವರ ಸಂಖ್ಯೆ 434 ಆಗಿದೆ. ಮತ್ತೆ ಆ್ಯಕ್ಟೀವ್ ಕೇಸ್​ಗಳೇ ಮೇಲುಗೈ ಸಾಧಿಸಿವೆ.

ಆರಂಭದಲ್ಲಿ ಮೈಸೂರಿನ ಜುಬಿಲಂಟ್​ ಕಾರ್ಖಾನೆ ಘಟನೆ ನಂತರ ತಬ್ಲಿಘಿಗಳ ಪ್ರಕರಣ, ಪಾದರಾಯನಪುರ ಕೇಸ್, ಮಹಾರಾಷ್ಟ್ರ ಪ್ರವಾಸ, ಗುಜರಾತ್ ಪ್ರವಾಸ ಹಿನ್ನೆಲೆ, ಅಜ್ಮೀರ್​​ನಿಂದ ವಾಪಸ್ಸಾದವರ ಘಟನೆ.... ಹೀಗೆ ಒಂದಾದ ನಂತರ ಮತ್ತೊಂದು ಘಟನೆಗಳು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಝಿರೋ ಸಂಖ್ಯೆ ಜಿಲ್ಲೆ:

ರಾಜ್ಯದ 30 ಜಿಲ್ಲೆಗಳಲ್ಲಿ ಕೇವಲ 5 ಜಿಲ್ಲೆಗಳಲ್ಲಿ ಮಾತ್ರ ಇದೂವರೆಗೆ ಒಂದೂ ಕೊರೊನಾ ಪಾಸಿಟಿವ್ ದೃಢಪಟ್ಟಿಲ್ಲ. ಚಾಮರಾಜನಗರ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ರಾಮನಗರ ಜಿಲ್ಲೆಗಳ ಕೊರೊನಾ ಸಂಖ್ಯೆ ಮಾತ್ರ ಶೂನ್ಯದಲ್ಲೇ ಉಳಿದಿದ್ದು, ಉಳಿದ 25 ಜಿಲ್ಲೆಗಳಲ್ಲಿ ಕೊರೊನಾ ಆವರಿಸುತ್ತಿದೆ.

ಟಾಪ್ 5 ಜಿಲ್ಲೆ:

  • ಬೆಂಗಳೂರು ನಗರ : 193
  • ಬೆಳಗಾವಿ: 115
  • ಮೈಸೂರು: 89
  • ದಾವಣಗೆರೆ: 88
  • ಕಲಬುರಗಿ: 77
  • ಕೊಡಗು : 1 (25 ನೇ ಸ್ಥಾನ)

ರಾಜ್ಯದಲ್ಲಿ ಈವರೆಗೆ ಒಟ್ಟು 951 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 484 ಆ್ಯಕ್ಟೀವ್ ಕೇಸ್, 434 ಗುಣಮುಖರಾದವರು ಹಾಗೂ 32 ಸೋಂಕಿತರು ಮೃತಪಟ್ಟಿದ್ದು ಈಗಿನ ಮಟ್ಟಿಗೆ ಗುಣಮುಖರಾದವರ ಸಂಖ್ಯೆಗಿಂತ ಆ್ಯಕ್ಟೀವ್ ಕೇಸ್​ಗಳ ಸಂಖ್ಯೆಯೇ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.